ಮನಾಮ: ದೇಶದಲ್ಲಿ ಸ್ವದೇಶೀಯರು ವಾಸವಿರುವ ಪ್ರದೇಶಗಳಲ್ಲಿ ಬ್ಯಾಚುಲರ್‌ಗಳ ವಾಸವನ್ನು ಉಪೇಕ್ಷಿಸಲು ಕ್ಯಾಬಿನೆಟ್ ತೀರ್ಮಾನಿಸಿದ್ದು, ವಿವಿಧ ಸಚಿವಾಲಯಗಳ ಸಹಕಾರದೊಂದಿಗೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.
ಬ್ಯಾಚುಲರ್‌ಗಳಾದ ಕಾರ್ಮಿಕರ ನಿವಾಸಗಳನ್ನು ಕೆಲವು ರೆಸಿಡೆನ್ಸಿಯಲ್ ಏರಿಯಾಗಳಿಂದ ಸ್ಥಳಾಂತರ ಮಾಡುವಂತೆ ಪ್ರಧಾನಮಂತ್ರಿ ಪ್ರಿನ್ಸ್ ಖಲೀಫ ಬಿನ್ ಸಲ್ಮಾನ್ ಅಲ್ ಖಲೀಫ ಕ್ಯಾಬಿನೆಟ್ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಗೃಹ ಸಚಿವಾಲಯ, ಸಾರ್ವಜನಿಕ ಸಚಿವಾಲಯ, ಮುನಿಸಿಪಲ್- ನಗರಾಭಿವೃದ್ಧಿ ಸಚಿವಾಲಯಗಳ ಸಹಕಾರದೊಂದಿಗೆ ಕಾರ್ಯಗತಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಶಿಥಿಲಗೊಂಡು ವಾಸಯೋಗ್ಯವಲ್ಲದ ಕಟ್ಟಡಗಳ ವಾಸವನ್ನು ಉಪೇಕ್ಷಿಸಲು ಕ್ರಮ ಕೈಗೊಳ್ಳುವಂತೆಯೂ ಪ್ರಧಾನಿ ನಿರ್ದೇಶನ ನೀಡಿದ್ದಾರೆ. ಕಟ್ಟಡಗಳಲ್ಲಿ ಸಾಮಾಜಿಕ ಸುರಕ್ಷೆಗೆ ಅಪಾಯ ಉಂಟುಮಾಡಬಲ್ಲ ಕಾರ್ಯಗಳನ್ನು ಕೊನೆಗೊಳಿಸಬೇಕು ಎಂದು ಪ್ರಧಾನಿ ಹೇಳಿದ್ದಾರೆ. ಮೀನು ಹಿಡಿಯಲು ತಪ್ಪಾದ ರೀತಿಯನ್ನು ಅನುಸರಿಸುವುದರ ವಿರುದ್ದ ನಿಷೇಧ ಏರ್ಪಡಿಸಲು ಸಚಿವಾಲಯ ತೀರ್ಮಾನ ಕೈಗೊಂಡಿದೆ.
ಸಿಗಡಿ ಹಿಡಿಯುವುದಕ್ಕೆ ಅನುಮತಿ ಲಭಿಸಿರುವವರಿಗೆ ತೊಂದರೆ ಉಂಟಾಗದ ರೀತಿಯಲ್ಲಿ ಕಾನೂನು ಜಾರಿಯಾಗಲಿದೆ. ನಿಶೇಧಿತ ಬಲೆಗಳ ಮೂಲಕ ಸೀಗಡಿ ಹಿಡಿಯುವುದರ ಮೂಲಕ ಮತ್ಸ್ಯ ಸಂಪತ್ತಿನ ಉತ್ಪಾದನೆ ಕಡಿಮೆಯಾಗಬಹುದು ಎನ್ನುವ ಕಾರಣಕ್ಕಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಿಸಿದ ಸಚಿವಾಲಯಕ್ಕೆ ವಹಿಸಲಾಗಿದೆ.















ಇನ್ನಷ್ಟು ಸುದ್ದಿಗಳು
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ