ದೋಹಾ: ವಿಮಾನ ಯಾತ್ರೆ ನಡೆಸುವಾಗ ಇತರರ ಲಗೇಜುಗಳನ್ನು ಸಾಗಿಸುವುದರ ವಿರುದ್ಧ ಕತಾರ್‌ನ ಗೃಹ ಇಲಾಖೆಯು ಎಚ್ಚರಿಕೆ ನೀಡಿದೆ. ಪ್ರಯಾಣಿಕರು ಜಾಗರೂಕರಾಗಿರಬೇಕು ಮತ್ತು ತಪಾಸಣೆಗೆ ಸಿಲುಕಿದರೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ರಜಾದಿನಗಳನ್ನು ಆಚರಿಸಲು ವಲಸಿಗರು ಊರಿಗೆ ಮರಳುವ ಈ ಸಂದರ್ಭದಲ್ಲಿ ಕತಾರ್ ಗೃಹ ಇಲಾಖೆ ಈ ಎಚ್ಚರಿಕೆಯನ್ನು ನೀಡಿದೆ.
ಪ್ರಯಾಣಿಕರು ತಮ್ಮ ಲಗೇಜುಗಳೊಂದಿಗೆ ಇತರರ ಸಾಮಾನುಗಳನ್ನು ತಮ್ಮೊಂದಿಗೆ ಕೊಂಡೊಯ್ಯುವುದು ಸಾಮಾನ್ಯವಾಗಿದೆ. ಆದರೆ ಈ ಸಾಮಾನುಗಳಲ್ಲಿ ಏನಿದೆ ಎಂದು ನಿಖರವಾಗಿ ತಿಳಿಯದಿರುವುದು ತಮ್ಮ ಪ್ರಯಾಣಕ್ಕೆ ಅಡ್ಡಿಯಾಗಬಹುದು.
ಇದಲ್ಲದೆ, ವಿಮಾನ ನಿಲ್ದಾಣಗಳಲ್ಲಿ ಪರಿಚಯವಿಲ್ಲದ ಜನರು ಸಾಮಾನುಗಳನ್ನು ನೀಡುವ ಘಟನೆಗಳೂ ಸಾಮಾನ್ಯವಾಗಿದೆ. ಇಂತಹ ಸಾಮಾನುಗಳನ್ನು ನಿಷೇಧಿತ ವಸ್ತುಗಳಾಗಿರಲೂ ಬಹುದು, ಇದು ಅನೇಕ ಮುಗ್ಧ ಜನರ ಬಂಧನಕ್ಕೂ ಕಾರಣವಾಗಿದೆ.
ವಿಮಾನ ನಿಲ್ದಾಣದಲ್ಲಿ ವಿಪರೀತ ಜನ ಜಂಗುಲಿ ಇರುವ ಸಮಯದಲ್ಲಿ ಈ ಅಕ್ರಮ ಚಟುವಟಿಕೆಗಳು ಹೆಚ್ಚಾಗಿ ಸಂಭವಿಸುತ್ತವೆ. ಆ ಕಾರಣಕ್ಕಾಗಿ ರಜೆಯಲ್ಲಿ ಊರಿಗೆ ತೆರಳುವ ವಲಸಿಗರು ಮತ್ತು ಇತರರಿಗೆ ಜಾಗರೂಕರಾಗಿರಲು ಗೃಹ ಸಚಿವಾಲಯ ಸೂಚನೆ ನೀಡಿದೆ. ಕಸ್ಟಮ್ಸ್ ಸೇರಿದಂತೆ ತಪಾಸಣೆ ಇಲಾಖೆ ಈ ನಿಟ್ಟಿನಲ್ಲಿ ಕಠಿಣ ತಪಾಸಣೆ ನಡೆಸುತ್ತಿದೆ.
ಅಕ್ರಮ ವಸ್ತುಗಳು ಮತ್ತು ಸಾಮಾನುಗಳು ಪತ್ತೆಯಾದರೆ ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಒಬ್ಬ ವ್ಯಕ್ತಿಯ ಕಾನೂನುಬಾಹಿರ ಚಟುವಟಿಕೆಯು ಇಡೀ ಪ್ರಯಾಣಿಕರ ಮೇಲೂ ಪರಿಣಾಮ ಬೀರಬಹುದು. ಆದೂದರಿಂದ ಪ್ರಯಾಣಿಕರು ತಮ್ಮ ಸಾಮಾನುಗಳನ್ನು ಮಾತ್ರ ಸಾಗಿಸುತ್ತಿದ್ದೇನೆ ಎಂದು ಖಚಿತಪಡಿಸಿಕೊಳ್ಳಿ ಎಂದು ಗೃಹ ಇಲಾಖೆ ಟ್ವಿಟರ್ ಮೂಲಕ ಒತ್ತಾಯಿಸಿದೆ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ