ದುಬೈ: ದುಬೈಯಿಂದ ಕಣ್ಣೂರು ಮತ್ತು ಅಲ್ಲಿಂದ ದುಬೈಗೆ ಗೋ ಏರ್‌ನ ಟಿಕೆಟ್ ಬುಕ್ಕಿಂಗ್ ಪ್ರಾರಂಭಿಸಲಾಗಿದ್ದು, ಜುಲೈ 25 ರಿಂದ ನೇರವಾಗಿ ದುಬೈಗೆ ಹೊರಡುವುದು ಸಾಧ್ಯವಾಗಲಿದೆ. ಕಾಸರ್‌ಗೋಡು, ಕಣ್ಣೂರು ಮತ್ತು ಕೋಝಿಕೋಡ್ ಜಿಲ್ಲೆಗಳ ವಲಸಿಗರಿಗೆ ಈ ಸೇವೆ ತುಂಬಾ ಉಪಯುಕ್ತವಾಗಲಿದೆ.
ಸ್ವಂತ ಊರಿಗೆ ವಿಮಾನ ನಿಲ್ದಾಣ ಬಂದಿದ್ದರೂ, ದುಬೈನಲ್ಲಿ ನೆಲೆಸಿರುವ ಕಣ್ಣೂರು ಸ್ವದೇಶೀಯರಿಗೆ ಅಬುಧಾಬಿ ಮತ್ತು ಶಾರ್ಜಾದಿಂದ ಮಾತ್ರ ನೇರವಾಗಿ ಪ್ರಯಾಣಿಸಲು ಸಾಧ್ಯವಾಗಿದ್ದವು. ಆದರೆ ದುಬೈನಿಂದ ಸೇವೆ ಪ್ರಾರಂಭವಾದ ನಂತರ ಇದಕ್ಕೆ ಪರಿಹಾರ ಉಂಟಾಗಿದೆ.
ಮೊದಲ ವಿಮಾನ, ಜಿ 8-58 ಗೋ ಏರ್, ಕಣ್ಣೂರಿನಿಂದ ದುಬೈಗೆ ಜು. 25 ರಂದು ಸಂಜೆ 7:30ಕ್ಕೆ ಹಾರಾಟ ನಡೆಸಲಿದೆ. ವಿಮಾನವು ರಾತ್ರಿ 10 ಗಂಟೆಗೆ ದುಬೈಗೆ ತಲುಪಲಿದ್ದು, ಜಲಾಭಿಷೇಕದೊಂದಿಗೆ ಬರಮಾಡಿಕೊಳ್ಳಲಾಗುತ್ತದೆ. ಕಣ್ಣೂರಿಗೆ ಜಿ 8-57 ವಿಮಾನವು ರಾತ್ರಿ 12.20 ಕ್ಕೆ ಹೊರಡಲಿದೆ. ಇದು ಬೆಳಿಗ್ಗೆ 5.55 ಕ್ಕೆ ಕಣ್ಣೂರು ತಲುಪಲಿದೆ.
ಈ ಹಿಂದೆ ಕಣ್ಣೂರು ಹೋಗುವವರಿಗೆ ಕ್ಯಾಲಿಕಟ್ ಮತ್ತು ಮಂಗಳೂರು ವಿಮಾನ ನಿಲ್ದಾಣಗಳನ್ನು ಅವಲಂಬಿಸಬೇಕಾಗಿತ್ತು. ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಕನಿಷ್ಠ ನಾಲ್ಕೈದು ಗಂಟೆಗಳ ಕಾಲ ಯಾತ್ರೆ ಮಾಡ ಬೇಕಾಗಿ ಬರುತ್ತಿದ್ದವು. ಈಗ ಪ್ರಯಾಣ ಒಂದು ಗಂಟೆಗೆ ಇಳಿಯಲಿದೆ. ಮಧ್ಯರಾತ್ರಿಯಲ್ಲಿ ದುಬೈನಿಂದ ವಿಮಾನ ಹತ್ತಿದರೆ ಅವರು ಉಪಾಹಾರಕ್ಕಾಗಿ ಮನೆಗೆ ತಲುಪಬಹುದು ಎಂದು ಕಣ್ಣೂರಿಗರು ಅಭಿಪ್ರಾಯಪಟ್ಟಿದ್ದಾರೆ.















ಇನ್ನಷ್ಟು ಸುದ್ದಿಗಳು
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಗ್ಯಾಸ್ ಸಿಲಿಂಡರ್ ಒಂದಕ್ಕೆ 266₹ ಹೆಚ್ಚಳ
ಭಾರತದಿಂದ ಸೌದಿ ಅರೇಬಿಯಾಕ್ಕೆ ನೇರವಾಗಿ ಪ್ರಯಾಣಿಸಲು ಅವಕಾಶ
ಮುಸ್ಲಿಮರು ಸರಕಾರದ ಕೆಲಸ ಮಾಡಬಾರದೇ? ಹಿಂದೂ ರಾಷ್ಟ್ರವಾಯಿತೇ ಭಾರತ!
ಆನ್ಲೈನ್ ಪರೀಕ್ಷೆ: ನಮ್ಮ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ- ಉನ್ನತ ಶಿಕ್ಷಣ ಸಚಿವ
ಕೊರೋನಾ ಅಬ್ಬರ: ಲಾಕ್ ಡೌನ್ ಬಗ್ಗೆ ಸಿಎಂ ಮಹತ್ವದ ಸಭೆ
ರಮೇಶ್ ಜಾರಕಿಹೊಳಿ ರಾಸಲೀಲೆ- ಸಂತ್ರಸ್ತೆಯಿಂದ ದೂರು ದಾಖಲು
ಬೆಳಗ್ಗಿನ ಅಝಾನ್ ಕರೆಗೂ ಧ್ವನಿವರ್ಧಕಗಳನ್ನು ಬಳಸಬಹುದು- ವಖ್ಫ್ ಬೋರ್ಡ್