janadhvani

Kannada Online News Paper

ಕೆಸಿಎಫ್ ಯುಎಇ ವತಿಯಿಂದ ಹಕೀಮ್ ಸವಣೂರ್ ರವರಿಗೆ ಒಲಿದ ಉಮ್ರಾ ಭಾಗ್ಯ

ಅಜ್ಮಾನ್: 2019 ನೇ ಸಾಲಿನ ಗಲ್ಫ್-ಇಶಾರ ಚಂದದಾರ ಅಭಿಯಾನದಲ್ಲಿ ಅತೀ ಹೆಚ್ಚು ಗಲ್ಫ್-ಇಶಾರ ಚಾಂದಾದಾರರನ್ನು ಸೇರಿಸಿದ ಒಬ್ಬನಿಗೆ ಘೋಷಿಸಿದ ಉಚಿತ ಉಮ್ರಾ ಯಾತ್ರೆಯು ಕೆಸಿಎಫ್ ಅಜ್ಮಾನ್ ಝೋನ್ ವೆಲ್ಫೇರ್ ವಿಭಾಗದ ಕಾರ್ಯದರ್ಶಿ ಅಬ್ದುಲ್ ಹಕೀಂ ಸವಣೂರು ಪಾಲಾಗಿದೆ.

ಗೋಲ್ಡ್ ಕಾಯಿನ್ ಕೆಸಿಎಫ್ ಅಜ್ಮಾನ್ ಝೋನ್ ಕಾರ್ಯಕಾರಿ ಸಮಿತಿ ಸದಸ್ಯ ಶಮೀರ್ ಮಂಗಳಪೇಟೆ ಪಾಲಾಯಿತು. ಬ್ಯಾಂಡೆಡ್ ಸನ್ ಗ್ಲಾಸ್ ಸಂಘಟನಾ ವಿಭಾಗದ ಕಾರ್ಯದರ್ಶಿ ಖಾದರ್ ಕೊಡಿಪ್ಪಾಡಿ ಅರ್ಹವಾಗಿಯೇ ಪಡೆದುಕೊಂಡರು. ಒಟ್ಟಿನಲ್ಲಿ ಮೂರೂ ಗಿಫ್ಟ್ ಗಳನ್ನು ಬಾಚಿಕೊಂಡ ಅಜ್ಮಾನ್ ಝೋನ್ ಅತ್ಯುತ್ತಮ ಝೋನ್ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.

ಯುಎಇಯಾದ್ಯಂತ ನವ ಸಂಚಲನ ಸೃಷ್ಟಿಸಿದ ಗಲ್ಫ್-ಇಶಾರ ಚಂದಾ ಅಭಿಯಾನವು ಝೋನ್ ಗಳ ಮಧ್ಯ ತೀವ್ರ ಪೈಪೋಟಿಯನ್ನುಂಟುಮಾಡಿತ್ತು. ತಮ್ಮ ಝೋನಿನ ನಿರ್ಣಾಯಕ ಪಾತ್ರದ ಬಗ್ಗೆ ನ್ಯಾಷನಲ್ ಸಮಿತಿಯ ಗಮನ ಸೆಳೆಯುವ ಸಲುವಾಗಿ ನಾಯಕರಿಂದ ಹಿಡಿದು ಎಲ್ಲಾ ಕಾರ್ಯಕರ್ತರೂ ರಂಗಕ್ಕಿಳಿದು ಕಾರ್ಯಾಚರಣೆ ನಡೆಸಿದ್ದರು. ಗಲ್ಫ್ ಇತಿಹಾಸದಲ್ಲೇ ಕನ್ನಡ ಮಾಸಿಕವೊಂದು ಬಿಡುಗಡೆಗೊಳ್ಳುತ್ತಿರುವುದು ಇದೇ ಮೊದಲ ಬಾರಿಯಾಗಿದ್ದರೂ ಅದನ್ನು ಪ್ರತಿಯೊಬ್ಬ ಅನಿವಾಸಿ ಕನ್ನಡಿಗನಿಗೂ ತಲುಪಿಸಬೇಕಾದ ಅನಿವಾರ್ಯತೆ ಪ್ರತೀ ಝೋನಿನ ಪಬ್ಲಿಕೇಶನ್ ವಿಭಾಗದ ಜವಾಬ್ದಾರಿಯಾಗಿತ್ತು. ಸ್ಪರ್ಧಾತ್ಮಕ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ ಝೋನ್,ಸೆಕ್ಟರ್, ಯೂನಿಟ್ ಮಟ್ಟದ ನಾಯಕರು, ಕಾರ್ಯಕರ್ತರು ಪ್ರತಿಯೊಬ್ಬ ಅನಿವಾಸಿ ಕನ್ನಡಿಗರನ್ನು ಹುಡುಕಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು.

ಈ ಅಭಿಯಾನದ ಪ್ರಯುಕ್ತ ಅತೀ ಹೆಚ್ಚು ಚಾಂದಾದಾರರನ್ನು ಸೇರಿಸಿದ ಒಬ್ಬನಿಗೆ ಉಚಿತ ಉಮ್ರಾ ಯಾತ್ರೆ ಹಾಗೂ ಗೋಲ್ಡ್ ಕಾಯಿನ್ ಮತ್ತು ಸನ್ ಗ್ಲಾಸ್ ಗಿಫ್ಟ್ ನೀಡುವುದಾಗಿ ಘೋಷಿಸಲಾಗಿತ್ತು. ಇದೀಗ ಆ ಮೂರು ಕೊಡುಗೆಗಳು ಕೆಸಿಎಫ್ ಅಜ್ಮಾನ್ ಝೋನ್ ಪಾಲಾಗಿದೆ.

error: Content is protected !! Not allowed copy content from janadhvani.com