janadhvani

Kannada Online News Paper

ನೀಟ್: ಮೊದಲ ಸುತ್ತಿನ ಕೌನ್ಸೆಲಿಂಗ್‌ ಫಲಿತಾಂಶ ಇಂದು ಪ್ರಕಟ

ಹೊಸದಿಲ್ಲಿ: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶಕ್ಕೆ ಆಲ್‌ ಇಂಡಿಯಾ ಕೋಟಾ/ಡೀಮ್ಡ್‌/ಕೇಂದ್ರೀಯ ವಿಶ್ವವಿದ್ಯಾಲಯಗಳು/ಇಎಸ್‌ಐಸಿ & ಎಫ್‌ಎಂಸಿ ಮೆಡಿಕಲ್‌ ಕೌನ್ಸೆಲಿಂಗ್‌ ಕಮಿಟಿ (ಎಂಸಿಸಿ)ಯ ಶೇ.15ರಷ್ಟು ಸೀಟುಗಳಿಗೆ ನಡೆದ ಮೊದಲ ಸುತ್ತಿನ ಕೌನ್ಸೆಲಿಂಗ್‌ ಫಲಿತಾಂಶವು ಜುಲೈ 1, 2019 ಸೋಮವಾರ ಬೆಳಗ್ಗೆ 10 ಗಂಟೆಗೆ ಪ್ರಕಟಗೊಳ್ಳುವ ನಿರೀಕ್ಷೆಯಿದೆ.

ಎರಡನೇ ಸುತ್ತಿನ ದಾಖಲಾತಿ ಮತ್ತು ಆಯ್ಕೆ ಪ್ರಕ್ರಿಯೆ ಜುಲೈ 6 ರಿಂದ 8, 2019 ರವರೆಗೆ ನಡೆಯಲಿದೆ. ಅಭ್ಯರ್ಥಿಗಳು ಕೌನ್ಸೆಲಿಂಗ್‌ ಶುಲ್ಕ ಪಾವತಿಸಲು ಜುಲೈ 9, 2019 ಕೊನೆಯ ದಿನಾಂಕವಾಗಿದೆ. 2ನೇ ಸುತ್ತಿನ ಸೀಟು ಹಂಚಿಕೆ ಜುಲೈ 10 ಮತ್ತು ಜುಲೈ 11 ರಂದು ನಡೆಯಲಿದೆ. ಸೀಟು ಹಂಚಿಕೆ ಫಲಿತಾಂಶವು ಜುಲೈ 12, 2019ರಂದು ನಡೆಯಲಿದೆ. ಹೆಚ್ಚಿನ ಮಾಹಿತಿಗೆ https://medicalcounseling.nic.in/UGCounsellingಗೆ ಭೇಟಿ ನೀಡಿ.

ಮೊದಲ ಸುತ್ತಿನ ನೀಟ್‌ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಸ್ಥಾನ ಪಡೆದಿದ್ದರೆ ಏನು ಮಾಡಬೇಕು?
ಅಭ್ಯರ್ಥಿಗಳು ನೀಟ್‌ ಕೌನ್ಸೆಲಿಂಗ್‌ನ ಮೊದಲ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಸ್ಥಾನ ಪಡೆದಿದ್ದರೆ ಪ್ರಮುಖವಾಗಿ ಆ ಸ್ಥಾನವನ್ನು ಸ್ವೀಕರಿಸಬೇಕು ಅಥವಾ ಬಿಡಬೇಕೆ ಎಂಬುದನ್ನು ನಿರ್ಧರಿಸಬೇಕು. ಎಂಸಿಸಿ ಪಟ್ಟಿಯಲ್ಲಿ ತಮಗೆ ಸಿಕ್ಕಿದ ಸೀಟು ಮತ್ತು ಕೇಂದ್ರದ ಬಗ್ಗೆ ತೃಪ್ತಿದಾಯಕವಾಗಿದೆಯೇ ಎಂಬುದನ್ನು ಯೋಚಿಸಿ ನಿರ್ಧರಿಸಬೇಕು. ತಮಗೆ ಹಂಚಿಕೆಯಾದ ಸೀಟು ಮತ್ತು ಕೇಂದ್ರದ ಬಗ್ಗೆ ಯಾವುದೇ ಗೊಂದಲಗಳಿದ್ದರೆ ಪ್ರಶ್ನಿಸಲು 6 ದಿನಗಳ ಸಮಯಾವಕಾಶವಿದೆ.

error: Content is protected !! Not allowed copy content from janadhvani.com