janadhvani

Kannada Online News Paper

ಅಲ್ಪಸಂಖ್ಯಾತರ ಮೇಲಿನ ದಾಳಿ ವಿರುದ್ದ ಕಠಿಣ ಕಾನೂನು ಜಾರಿಗೆ ತರಬೇಕು- ಸಮಸ್ತ ಮುಶಾವರ

ಕಲ್ಲಿಕೋಟೆ,ಜೂನ್.30 : ಕೋಮುವಾದಿಗಳು ದೇಶದ ಹಲವು ಭಾಗಗಳಲ್ಲಿ ನಡೆಸುತ್ತಿರುವ ದಾಳಿಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಕಠಿಣವಾದ ಕಾನೂನು ಜಾರಿಗೆ ತರಲು ಮುಂದಾಗಬೇಕೆಂದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಮುಶಾವರ.

ನಿರಂತರವಾಗಿ ನಡೆಯುತ್ತಿರುವ ಹತ್ಯೆಗಳು ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಅವಮಾನವನ್ನುಂಟು ಮಾಡುತ್ತಿದೆ. ಈ ಮೊದಲು ನಡೆದ ಪ್ರಕರಣಗಳಿಗೆ ಆಡಳಿತ ಪಕ್ಷ ಮತ್ತು ಕಾನೂನು ಪಾಲಕರು ಕಠಿಣವಾದ ಕ್ರಮಗಳನ್ನು ಕೈಗೊಂಡಿದ್ದರೆ ಜಾರ್ಖಂಡ್‌ನ ತಬ್ರೀಝ್ ಅನ್ಸಾರಿಯವರ ಹತ್ಯೆಯನ್ನು ತಡೆಯಬಹುದಿತ್ತು. ಕೆಲವೊಂದು ಕೇಸುಗಳಲ್ಲಿ ಅಪರಾಧಿಗಳೊಂದಿಗೆ ಆಡಳಿತ ಪಕ್ಷವು ತಾಳಿದ ಮೃದು ಧೋರಣೆ‌ಯಾಗಿದೆ ಇಂತಹ ಪ್ರಕರಣಗಳು ಹೆಚ್ಚಳಕ್ಕೆ ಕಾರಣ.

ನಿಯಮ ಸಂಹಿತೆಗಳು ದುರ್ಬಲವಾದಾಗ ಯಾರಿಗೂ ಯಾರನ್ನೂ ಕೊಲ್ಲಬಹುದು ಎಂಬ ಭಾವನೆ ಜನರೆಡೆಯಲ್ಲಿ ಬಿತ್ತರಿಸುತ್ತದೆ. ಬಲಿಷ್ಠವಾದ ನಿಯಮ ನಿರ್ಮಾಣ ಹಾಗೂ ನಿಯಮ ಸಂಹಿತೆಗಳಿಂದ ಮಾತ್ರ ಇವುಗಳಿಗೆ ತಡೆಗೋಲು ಹಾಕಲು ಸಾಧ್ಯ. ಜನಸಮೂಹ ಅಕ್ರಮಗಳನ್ನು ದೇಶ ದ್ರೋಹ ಅಪರಾಧವಾಗಿ ಕಂಡು ಗರಿಷ್ಠ ಮಟ್ಟದ ಶಿಕ್ಷೆಗಳನ್ನು ನೀಡಬೇಕೆಂದು ಮುಶಾವರ ಅಭಿಪ್ರಾಯಪಟ್ಟಿದೆ.

ಸಾಂಘಿಕ ಕಾರ್ಯ ಚಟುವಟಿಕೆಗಳನ್ನು ಹೆಚ್ಚಿಸಲು ಮತ್ತು ಬಲಿಷ್ಠಗೊಳಿಸಲು ಕೇರಳ ಮುಸ್ಲಿಂ ಜಮಾಅತ್ ಹೊರತಂದ ವಿಷನ್ 2019 ‘ಗೆ ಅಂಗೀಕಾರ ನೀಡಲಾಯಿತು.

ಅಧ್ಯಕ್ಷರಾದ ಇ ಸುಲೈಮಾನ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಉದ್ಘಾಟನೆ ನಿರ್ವಹಿಸಿದರು. ಸಯ್ಯಿದ್ ಅಲೀ ಭಾಫಕಿ ತಂಙಳ್, ಸಯ್ಯಿದ್ ಇಬ್ರಾಹಿಂ ಖಲೀಲುಲ್ ಬುಖಾರಿ ತಂಙಳ್, ಸಯ್ಯಿದ್ ಕೆ‌.ಎಸ್ ಆಟಕ್ಕೋಯ ತಂಙಳ್ ಕುಂಬೋಳ್, ಸಯ್ಯಿದ್ ಲಿಯಾಉಳ್ ಮುಸ್ತಫಾ ಮಾಟೂಳ್ ತಂಙಳ್, ಪೊನ್ಮಳ ಅಬ್ದುಲ್ ಖಾದಿರ್ ಮುಸ್ಲಿಯಾರ್, ಕೆ.ಪಿ ಮುಹಮ್ಮದ್ ಮುಸ್ಲಿಯಾರ್, ಕೋಡಂಬುಝ ಬಾವಾ ಮುಸ್ಲಿಯಾರ್, ಪೊನ್ಮಳ ಮೊಯ್ದೀನ್ ಕುಟ್ಟಿ ಮುಸ್ಲಿಯಾರ್, ವಂಡೂರ್ ಅಬ್ದುರ್ರಹ್ಮಾನ್ ಫೈಝಿ, ಸಿ. ಮುಹಮ್ಮದ್ ಫೈಝಿ, ಹುಸೈನ್ ಸಖಾಫಿ ಚುಳ್ಳಿಕ್ಕೋಡ್, ವಿ.ಪಿ.ಎಂ ಫೈಝಿ ವಿಲ್ಯಾಪಳ್ಳಿ, ವಿ.ಪಿ ಮೊಯ್ದೀನ್ ಕುಟ್ಟಿ ಮುಸ್ಲಿಯಾರ್, ಅಬೂ ಹನೀಫಲ್ ಫೈಝಿ ತೆನ್ನಲ, ಇಝ್ಝುದ್ದೀನ್ ಕಾಮಿಲ್ ಸಖಾಫಿ ಕೊಲ್ಲಂ, ಕೆ.ಕೆ ಅಹ್ಮದ್ ಕುಟ್ಟಿ ಮುಸ್ಲಿಯಾರ್, ಮುಹಮ್ಮದಲೀ ಸಖಾಫಿ ತೃಕರಿಪ್ಪುರ್, ಅಬ್ದುರ್ರಹ್ಮಾನ್ ಫೈಝಿ, ಅಬ್ದುಲ್ ಅಝೀಝ್ ಸಖಾಫಿ, ಮುಖ್ತಾರ್ ಹಝ್ರತ್ ಪಾಲಕ್ಕಾಡ್, ಅಬ್ದುಲ್ ಜಲೀಲ್ ಸಖಾಫಿ ಚೆರುಶ್ಯೋಲ, ಅಬ್ದನ್ನಾಸಿರ್ ಅಹ್ಸನಿ, ಎ ತ್ವಾಹ ಮುಸ್ಲಿಯಾರ್ ಚರ್ಚೆಯಲ್ಲಿ ಭಾಗವಹಿಸಿದರು.
ಎ.ಪಿ ಮುಹಮ್ಮದ್ ಮುಸ್ಲಿಯಾರ್ ಕಾಂತಪುರಂ ಸ್ವಾಗತಿಸಿದರು.

ಮಳಯಾಲಂ : ಸಿರಾಜ್ ಡೈಲಿ.
ಕನ್ನಡಕ್ಕೆ : ನಾಸಿರ್ ಮಿತ್ತರಾಜೆ, ಸಾಲೆತ್ತೂರ್.

error: Content is protected !! Not allowed copy content from janadhvani.com