ಬೆಂಗಳೂರು(ಮೇ 31): ರಾಜ್ಯದ 63 ಸ್ಥಳೀಯ ನಗರ ಸಂಸ್ಥೆ ಚುನಾವಣೆಯ ಫಲಿತಾಂಶ ಬಹುತೇಕ ಪ್ರಕಟವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಹೀನಾಯ ಸೋಲುಂಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಈ ಸ್ಥಳೀಯ ಚುನಾವಣೆಯಲ್ಲಿ ಮೈತ್ರಿ ಇಲ್ಲದೆಯೇ ಉತ್ತಮ ಸಾಧನೆ ಮಾಡಿವೆ.
ಕಳೆದ ಬಾರಿಯ ಸ್ಥಳೀಯ ಚುನಾವಣೆಗೆ ಹೋಲಿಸಿದರೆ ಈ ಬಾರಿ ಬಿಜೆಪಿಯದ್ದೂ ಸ್ವಲ್ಪ ಬಲ ವೃದ್ಧಿಸಿದೆ. 57 ಸ್ಥಳೀಯ ಸಂಸ್ಥೆಗಳ ಫಲಿತಾಂಶ ಪ್ರಕಟವಾಗಿದ್ದು, ಇವುಗಳ 1,221 ವಾರ್ಡ್ಗಳ ಪೈಕಿ ಕಾಂಗ್ರೆಸ್ 509 ವಾರ್ಡ್ಗಳನ್ನು ಗೆದ್ದುಕೊಂಡಿದೆ. ಬಿಜೆಪಿ 366 ಸ್ಥಾನದಲ್ಲಿ ಗೆದ್ದರೆ, ಜೆಡಿಎಸ್ 174 ವಾರ್ಡ್ಗಳನ್ನ ಬುಟ್ಟಿಗೆ ಹಾಕಿಕೊಂಡಿದೆ. 160 ವಾರ್ಡ್ಗಳು ಪಕ್ಷೇತರರ ಪಾಲಾಗಿವೆ.
ಎಂಟು ನಗರಪಾಲಿಕೆಗಳ ಪೈಕಿ ಏಳರಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಕ್ಕಿಲ್ಲ. ಸಾಗರ ನಗರಪಾಲಿಕೆಯಲ್ಲಿ ಜೂನ್ 3ರಂದು ಮತ ಎಣಿಕೆಯಾಗಲಿದೆ. ಇನ್ನುಳಿದ ಎಲ್ಲಾ ಏಳು ನಗರಪಾಲಿಕೆಯಲ್ಲಿ ಅತಂತ್ರ ಫಲಿತಾಂಶ ಬಂದಿದೆ.
33 ಪುರಸಭೆಗಳ ಪೈಕಿ 31ರಲ್ಲಿ ಫಲಿತಾಂಶ ಪ್ರಕಟವಾಗಿದೆ. ಅದರಲ್ಲಿ ಕಾಂಗ್ರೆಸ್ ಪಕ್ಷವೇ 13ರಲ್ಲಿ ಭರ್ಜರಿ ಬಹುಮತ ಪಡೆದು ತನ್ನದಾಗಿಸಿಕೊಂಡಿದೆ. ಬಿಜೆಪಿ ವಶಕ್ಕೆ 5 ಪುರಸಭೆಗಳು ಬಂದಿವೆ. ಜೆಡಿಎಸ್ ಪಕ್ಷ 2 ಪುರಸಭೆಗಳನ್ನ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇನ್ನುಳಿದ 11 ಪುರಸಭೆಗಳಲ್ಲಿ ಅತಂತ್ರ ಫಲಿತಾಂಶ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಮತ್ತು ನೆಲಮಂಗಲ ಪುರಸಭೆಗಳಲ್ಲಿ ಇವತ್ತು ಮತ ಎಣಿಕೆಯಾಗಿಲ್ಲ.
22 ಪಟ್ಟಣ ಪಂಚಾಯಿತಿ ಪೈಕಿ 18 ಪಟ್ಟಣ ಪಂಚಾಯಿತಿಯ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಬರೋಬ್ಬರಿ 8ರಲ್ಲಿ ನಿಚ್ಚಳ ಬಹುಮತ ಗಳಿಸಿದೆ. ಕಾಂಗ್ರೆಸ್ ಪಕ್ಷ ಮೂರು ಪಟ್ಟಣ ಪಂಚಾಯಿತಿಗಳನ್ನ ಗೆದ್ದುಕೊಂಡಿದೆ. ಇನ್ನುಳಿದ 7 ಪಟ್ಟಣ ಪಂಚಾಯಿತಿಯಲ್ಲಿ ಅತಂತ್ರ ಫಲಿತಾಂಶ ಬಂದಿದೆ.
ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ:
ಫಲಿತಾಂಶ ಪ್ರಕಟವಾದ ಒಟ್ಟು ವಾರ್ಡ್ಗಳು: 1,221
ಕಾಂಗ್ರೆಸ್: 509
ಬಿಜೆಪಿ: 366
ಜೆಡಿಎಸ್: 174
ಬಿಎಸ್ಪಿ: 3
ಪಕ್ಷೇತರರು: 160
ಇತರರು: 7
ಬಿಜೆಪಿ ಬಹುಮತ ಗಳಿಸಿದ ಸಂಸ್ಥೆಗಳು:
ನಗರಸಭೆ: 0
ಪುರಸಭೆ: 5
ಪಟ್ಟಣ ಪಂಚಾಯಿತಿ: 9
ಒಟ್ಟು: 14
ಕಾಂಗ್ರೆಸ್ ಬಹುಮತ ಗಳಿಸಿದ ಸಂಸ್ಥೆಗಳು:
ನಗರಸಭೆ: 2
ಪುರಸಭೆ: 13
ಪಟ್ಟಣ ಪಂಚಾಯಿತಿ: 3
ಒಟ್ಟು: 18
ಜೆಡಿಎಸ್ ಬಹುಮತ ಗಳಿಸಿದ ಸಂಸ್ಥೆಗಳು:
ನಗರಸಭೆ: 0
ಪುರಸಭೆ: 2
ಪಟ್ಟಣ ಪಂಚಾಯಿತಿ: 0
ಒಟ್ಟು: 2
ಇನ್ನಷ್ಟು ಸುದ್ದಿಗಳು
ಹಿಂದಿ,ಆಂಗ್ಲಭಾಷೆಯಲ್ಲಿ ಶಂಕುಸ್ಥಾಪನೆ- ಅಮಿತ್ ಶಾ, ಸಿಎಂ ರಿಂದ ಕನ್ನಡಕ್ಕೆ ದ್ರೋಹ
ಅಮಾಯಕರ ಬಂಧನ: ಜ.22 ರಂದು ಬೆಂಗಳೂರು ಬಂದ್- ಮುಸ್ಲಿಂ ಸಂಘಟನೆ ಕರೆ
ನಿಲುವು ಬದಲಿಸಿದ ವಾಟ್ಸಾಪ್: ಸದ್ಯಕ್ಕೆ ಗೌಪ್ಯತಾ ನೀತಿ ಬದಲಾವಣೆಯಿಲ್ಲ
ಹಿಂದೂ ದೇವತೆಗಳನ್ನು ಅಪಮಾನಿಸಿದವರಿಗೆ ಸಚಿವ ಸ್ಥಾನ- ಯತ್ನಾಳ ಫುಲ್ ಗರಂ
ವಾಟ್ಸಾಪ್ ಬಳಕೆದಾರರಿಗೆ ಸೌದಿ ಹಣಕಾಸು ಸಚಿವಾಲಯ ಎಚ್ಚರಿಕೆ
ಬಸ್ ನಲ್ಲಿ ಕಿರುಕುಳ: ಯುವತಿಯ ಪೋಸ್ಟ್ ಸಾಮಾಜಿಕ ತಾಣದಲ್ಲಿ ವೈರಲ್