ಕುವೈತ್ ಸಿಟಿ: ಗಲ್ಫ್ ವಲಯವು ಅತ್ಯಂತ ಗಂಭೀರ ಮತ್ತು ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸುತ್ತಾ ಸಾಗುತ್ತಿದೆ ಎಂದು ಕುವೈತ್ ಅಮೀರ್ ಆತಂಕ ವ್ಯಕ್ತಪಡಿಸಿದ್ದಾರೆ. ಕಾರ್ಯತಂತ್ರ ಪ್ರತಿನಿಧಿಗಳಿಗೆ ಈ ಸನ್ನಿವೇಶದಲ್ಲಿ ದುಪ್ಪಟ್ಟು ಜವಾಬ್ದಾರಿ ಇದ್ದು, ಸಮಾಧಾನಕರ ವಾತಾವರಣವನ್ನು ಮರಳಿಪಡೆಯಲೇ ಬೇಕಿದೆ ಎಂದವರು ತಿಳಿಸಿದ್ದಾರೆ.
ವಿದೇಶಾಂಗ ಸಚಿವಾಲಯದಲ್ಲಿ ಹಮ್ಮಿಕೊಂಡ ರಮಝಾನ್ ಸಂದರ್ಶನ ವೇಳೆ ಅಮೀರ್ ಶೈಖ್ ಅಲ್ ಅಹ್ಮದ್ ಅಲ್ ಜಾಬಿರ್ ಅಲ್ ಸ್ವಬಾಹ್ ಈ ಬಗ್ಗೆ ಮಾತನಾಡುತ್ತಿದ್ದರು. ದೇಶದ ಹಿತವನ್ನು ಮುಂದಿರಿಸಿ ಕಾರ್ಯಾಚರಿಸಬೇಕೆಂದು ಅವರು ವಿದೇಶಾಂಗ ಸಚಿವಾಲಯದ ಸಿಬ್ಬಂದಿಗೆ ತಿಳಿಸಿದ್ದು, ವಲಯದಲ್ಲಿ ಸಮಾಧಾನಕರ ಸನ್ನಿವೇಶವನ್ನು ಮರಳಿಪಡೆಯುವುದು ಸಾಧ್ಯ ಎನ್ನುವ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ.
ಕಾರ್ಯತಂತ್ರ ರಂಗದಲ್ಲಿನ ಕುವೈತ್ ನ ಕಾರ್ಯವೈಖರಿಯನ್ನು ವಿಶ್ವವು ಅಂಗೀಕರಿಸಿದೆ. ಯಾವುದೇ ಪಕ್ಷ ಸೇರದೆ ಶಾಂತಿಗಾಗಿ ನೆಲೆ ನಿಲ್ಲುವುದು ದೇಶದ ನಿಲುವಾಗಿದೆ ಎಂದು ಅಮೀರ್ ವ್ಯಕ್ತಪಡಿಸಿದರು.
ಯುವರಾಜ ನವಾಫ್ ಅಲ್ ಅಹ್ಮದ್ ಅಲ್ ಸ್ವಾಬಾಹ್ ಜೊತೆಗಿದ್ದರು. ವಿದೇಶಾಂಗ ಸಚಿವ ಶೈಖ್ ಸಬಾಹ್ ಖಾಲಿದ್ ಅಲ್ ಹಮದ್ ಅಸ್ಸಬಾಹ್ ಅಮೀರ್ ಮತ್ತು ಯುವರಾಜರನ್ನು ಬರಮಾಡಿಕೊಂಡರು. ನ್ಯಾಷನಲ್ ಗಾರ್ಡ್ ಉಪ ಅಧಿಕಾರಿ ಶೈಖ್ ಮಿಶ್‌ಅಲ್ ಅಲ್ ಅಹ್ಮದ್ ಅಸ್ಸಬಾಹ್, ಪ್ರಧಾನಮಂತ್ರಿ ಶೈಖ್ ಜಾಬಿರ್ ಮುಬಾರಕ್ ಅಲ್ ಹಮದ್ ಅಸ್ಸಬಾಹ್ ಮುಂತಾವರು ಅಮೀರರನ್ನು ಅನುಗಮಿಸಿದ್ದರು. ಸಭೆಯಲ್ಲಿ ಸ್ಪೀಕರ್ ಮರ್ಝೂಖ್ ಅಲ್ ಗ್ವಾನಿಮ್ ಭಾಗವಹಿಸಿದ್ದರು.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ