janadhvani

Kannada Online News Paper

ಯುಎಇ: ಸ್ಪರ್ಧಾತ್ಮಕ ಚಾಲನೆಗೆ 2000 ದಿರ್ಹಮ್ ದಂಡ

ದುಬೈ: ಯುಎಇಯ ರಸ್ತೆಗಳಲ್ಲಿ ಸ್ಪರ್ಧಾತ್ಮಕ ಚಾಲನೆಯನ್ನು ಅನುಮತಿಸಲಾಗದು ಎಂದು ಪೊಲೀಸರು ತಿಳಿಸಿದ್ದಾರೆ. ದುಬೈ ಮತ್ತು ಅಬುಧಾಬಿ ಪೊಲೀಸರು ಜಂಟಿಯಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ರೇಸಿಂಗ್ ‌ನ ಅಪಾಯದ ಕುರಿತು ಎಚ್ಚರಿಕೆ ನೀಡಿದ್ದಾರೆ.

ರಮಝಾನ್ ಪ್ರಾರಂಭವಾದ ನಂತರ ನಾಲ್ಕನೇ ದಿನ ಸ್ಪರ್ಧಾತ್ಮಕ ಚಾಲನೆ ಮೂಲಕ ಉಂಟಾದ ಅಪಘಾತದಿಂದಾಗಿ ನಾಲ್ವರು ಅಲ್ ಐನ್‌ನಲ್ಲಿ ಮೃತಪಟ್ಟಿದ್ದು, ಓರ್ವ ವ್ಯಕ್ತಿ ಗಾಯಗೊಂಡಿದ್ದರು. ಅಂತಹ ಚಾಲನೆ ಮಾಡುವವರಿಗೆ 2000 ದಿರ್ಹಂ ದಂಡ ಮತ್ತು 23 ಬ್ಲ್ಯಾಕ್ ಪಾಯಿಂಟ್ ಲಭಿಸಲಿದೆ ಎಂದು ದುಬೈ-ಅಬುಧಾಬಿ ಪೊಲೀಸರು ತಿಳಿಸಿದ್ದು, ಅರುವತ್ತು ದಿನಗಳ ವರೆಗೆ ವಾಹನವನ್ನು ಮುಟ್ಟುಗೋಲು ಮಾಡಲಾಗುವುದು.

ಅದೂ ಅಲ್ಲದೆ, ಅನುಮತಿ ರಹಿತವಾಗಿ ವಾಹನದ ಇಂಜಿನ್‌ನಲ್ಲಿ ಬದಲಾವಣೆ ಮಾಡಿದರೆ 1000 ದಿರ್ಹಂ ದಂಡ ಮತ್ತು 12 ಬ್ಲ್ಯಾಕ್ ಪಾಯಿಂಟ್ ನೀಡಲಾಗುವುದು. ವಾಹನವನ್ನು ಒಂದು ತಿಂಗಳು ಮುಟ್ಟುಗೋಲು ಮಾಡಲಾಗುವುದು.

ರಮಝಾನ್ ತಿಂಗಳಲ್ಲಿ ರಾತ್ರಿ ವೇಳೆಯಲ್ಲಿ ಸ್ಪರ್ಧಾ ರೇಸಿಂಗ್‌‌ ನಡೆಸುವ ಬಗ್ಗೆ ಗಮನಕ್ಕೆ ಬಂದಿದ್ದು, ವಾಸವಲಯ ಮತ್ತು ಹೈವೇಗಳಲ್ಲಿ ರೇಸಿಂಗ್ ನಡೆಸುವವರು ಸ್ವತ ಜೀವ ಮಾತ್ರವಲ್ಲದೆ ಇತರರ ಜೀವ ಮತ್ತು ರಸ್ತೆ ಸುರಕ್ಷೆಗೆ ಕಂಟಕವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !! Not allowed copy content from janadhvani.com