janadhvani

Kannada Online News Paper

ಎನ್‍ಡಿಎ ಮೈತ್ರಿ ಕೂಟಕ್ಕೆ 242 ಸ್ಥಾನ-ಅತಂತ್ರ ಲೋಕಸಭೆ ಎನ್ನುತ್ತಿದೆ ಈ ಸಮೀಕ್ಷೆ

ಬೆಂಗಳೂರು[ಮೇ. 19]  ಹಲವು ಚುನಾವಣೋತ್ತರ ಸಮೀಕ್ಷೆಗಳು ಎನ್‍ಡಿಎ ಮೈತ್ರಿಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಹೇಳಿದರೆ ನ್ಯೂಸ್ ಎಕ್ಸ್ ನೇತಾ ಮಾತ್ರ ಬೇರೆಯ ಭವಿಷ್ಯವನ್ನೇ ಹೇಳಿದೆ.

ನ್ಯೂಸ್ ಎಕ್ಸ್ ನೇತಾ ಎನ್‍ಡಿಎ ಮೈತ್ರಿ ಕೂಟಕ್ಕೆ 242 ಸ್ಥಾನ ನೀಡಿದರೆ, ಯುಪಿಎಗೆ 164 ಸ್ಥಾನ ಹಾಗೂ ಇತರೆ 136  ಸೀಟು ಸಿಗಲಿದೆ ಎಂದು ಹೇಳಿದೆ.  ಇನ್ನು ಕರ್ನಾಟಕದಲ್ಲಿ  ಬಿಜೆಪಿಗೆ 17, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಕೂಟಕ್ಕೆ 11 ಸ್ಥಾನ ದೊರೆಯಲಿದೆ ಎಂದಿದೆ.

ಹೀಗಾದರೆ ಸರಳ ಬಹುಮತಕ್ಕೆ 273 ಸ್ಥಾನ ಅಗತ್ಯ ಇದ್ದು 30 ಸ್ಥಾನಗಳ ಕೊರತೆ ಎನ್ ಡಿ ಎಗೆ ಎದುರಾಗಲಿದೆ. ಹೊಸ ರಾಜಕೀಯ ಲೆಕ್ಕಾಚಾರಗಳು ಮತ್ತೆ ಆರಂಭವಾಗಬಹುದು.

error: Content is protected !! Not allowed copy content from janadhvani.com