janadhvani

Kannada Online News Paper

ಚುನಾವಣೋತ್ತರ ಸಮೀಕ್ಷೆಗಳನ್ನು ನೋಡಿ ಹಗಲುಗನಸು ಕಾಣಲಿ-ಪ್ರಕಾಶ್​ ರಾಜ್

ಬೆಂಗಳೂರು: ಮತದಾನೋತ್ತರ ಸಮೀಕ್ಷೆಗಳು ಬಿಜೆಪಿ ಪರ ಹೊರಬೀಳುತ್ತಿದ್ದಂತೆ ಪ್ರತಿಪಕ್ಷಗಳು ಒಟ್ಟಾಗಿ ಅದನ್ನು ವಿರೋಧಿಸುತ್ತಿವೆ. ಇದೊಂದು ಸುಳ್ಳು ಸಮೀಕ್ಷೆ. ಎಕ್ಸಿಟ್​ ಪೋಲ್​ ಫಲಿತಾಂಶ ತಪ್ಪು ಎಂದು ಹಲವು ಮುಖಂಡರು ಟ್ವೀಟ್​ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಾಗೇ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಿಂದ ಈ ಭಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರಕಾಶ್​ ರಾಜ್​ ಕೂಡ ಎಕ್ಸಿಟ್​ ಪೋಲ್​ ವಿರೋಧಿಸಿ ಟ್ವೀಟ್​ ಮಾಡಿದ್ದಾರೆ.

With the EXIT POLLS ….Let some DAY DREAM that NIGHTMARE will come back. But ON 23 rd …I BELIEVE CITIZENS will PROVE it WRONG ..till then let’s sing n celebrate…what BAPU JI Taught us …pls retweet n share 🙏🙏🙏 pic.twitter.com/qaO3WotJAt— Prakash Raj (@prakashraaj) May 19, 2019

ಈ ಚುನಾವಣೋತ್ತರ ಸಮೀಕ್ಷೆಗಳನ್ನು ನೋಡಿ ಸ್ವಲ್ಪದಿನವಾದರೂ ಅವರು ಹಗಲುಗನಸು ಕಾಣಲಿ. ಮುಂದೆ ದುಃಸ್ವಪ್ನ ಕಾದಿದೆ. ಈ ಎಲ್ಲ ಸಮೀಕ್ಷೆಗಳನ್ನೂ ದೇಶದ ಜನರು ಸುಳ್ಳು ಮಾಡಿದ್ದಾರೆ ಎಂಬುದು ಮೇ 23ರಂದು ತಿಳಿಯಲಿದೆ. ನನಗೆ ಖಂಡಿತ ನಂಬಿಕೆ ಇದೆ. ಫಲಿತಾಂಶ ಬರುವವರೆಗೆ ನಾವು ಹಾಡುತ್ತ, ಸಂಭ್ರಮಿಸುತ್ತ ಇರುತ್ತೇವೆ. ನಮಗೆ ಬಾಪೂಜಿ ಕಲಿಸಿದ್ದು ಇದನ್ನೇ ಎಂದು ‘ರಘುಪತಿ ರಾಘವ ರಾಜಾರಾಂ, ಪತೀತ ಪಾವನ ಸೀತಾರಾಂ’ ಹಾಡು ಹಾಗೂ ಗಾಂಧೀಜಿಯವರ ದೃಶ್ಯಗಳಿರುವ ವಿಡಿಯೋವನ್ನು ಟ್ವೀಟ್​ ಮಾಡಿರುವ ಪ್ರಕಾಶ್​ ರೈ, ಈ ನನ್ನ ಟ್ವೀಟ್​ನ್ನು ಶೇರ್​, ರೀಟ್ವೀಟ್​ ಮಾಡಿ ಎಂದಿದ್ದಾರೆ.

error: Content is protected !! Not allowed copy content from janadhvani.com