ಚುನಾವಣೋತ್ತರ ಫಲಿತಾಂಶ ವರದಿಗಳು ತಪ್ಪು- ಶಶಿ ತರೂರ್

ನವದೆಹಲಿ: ಚುನಾವಣೆಯ ಎಲ್ಲ ಹಂತಗಳೂ ಮುಗಿದ ಬಳಿಕ ಎಕ್ಸಿಟ್​ ಪೋಲ್​ಗಳ ವರದಿ ಹೊರಬಿದ್ದಿದೆ. ಬಹುತೇಕ ಎಲ್ಲ ಎಕ್ಸಿಟ್​ ಪೋಲ್​ಗಳ ಪ್ರಕಾರ ಎನ್​ಡಿಎ ಸರ್ಕಾರ ರಚನೆ ಖಚಿತವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್​ ಹಿರಿಯ ಮುಖಂಡ ಶಶಿ ತರೂರ್​, ಎಲ್ಲ ಎಕ್ಸಿಟ್​ ಪೋಲ್​ಗಳ ವರದಿಯೂ ತಪ್ಪು ಎಂದಿದ್ದಾರೆ.

ಕಳೆದ ವಾರ ಆಸ್ಟ್ರೇಲಿಯಾದಲ್ಲಿ 56 ವಿಭಿನ್ನ ಮತದಾನೋತ್ತರ ಸಮೀಕ್ಷೆ ನಡೆಸಲಾಗಿತ್ತು. ಆದರೆ ಅವೆಲ್ಲವೂ ತಪ್ಪಾಗಿವೆ. ಭಾರತದಲ್ಲಿ ಬಹುತೇಕ ಜನರು ಸಮೀಕ್ಷಾದಾರರಿಗೆ ಸತ್ಯ ಹೇಳುವುದಿಲ್ಲ. ಕಾರಣ ಅವರು ಸಮೀಕ್ಷಾದಾರರು ಸರ್ಕಾರಕ್ಕೆ ಸೇರಿದವರಾಗಿರುತ್ತಾರೆ ಎಂದು ಭಾವಿಸಿ ಭಯಪಡುತ್ತಾರೆ. 23ರಂದು ಫಲಿತಾಂಶ ಬರುವವರೆಗೆ ಕಾಯಲೇಬೇಕು ಎಂದು ಶಶಿ ತರೂರ್​ ಟ್ವೀಟ್​ ಮಾಡಿದ್ದಾರೆ.

ಕಳೆದವಾರ ಆಸ್ಟ್ರೇಲಿಯಾದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯನ್ನು ಶಶಿ ತರೂರ್​ ಉಲ್ಲೇಖಿಸಿದ್ದಾರೆ. ಅಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಬುಡಮೇಲಾಗಿ ಲಿಬರಲ್​ ಪಕ್ಷದ ಸ್ಕಾಟ್​ ಮರಿಸನ್​ ಅವರೇ ಮತ್ತೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅಲ್ಲಿನ ಬಹುತೇಕ ಸಮೀಕ್ಷೆಗಳು ಈ ಬಾರಿ ಸ್ಕಾಟ್​ ಮರಿಸನ್​ ಯಾವ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದ್ದವು.

ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿ ಹಲವರು ಈ ಎಕ್ಸಿಟ್​ ಪೋಲ್​ ಸುಳ್ಳಾಗಲಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!