janadhvani

Kannada Online News Paper

ಈ ವರದಿಯ ಧ್ವನಿಯನ್ನು ಆಲಿಸಿ


ಬೆಳ್ತಂಗಡಿ: ಸ್ಪಿರಿಟ್ ಆಫ್ ಸುನ್ನೀ ಮುಸ್ಲಿಂ ವಾಟ್ಸಾಪ್ ಗ್ರೂಪ್ ಕಳೆದ ಎರಡು ವರ್ಷಗಳಿಂದ, ನಮ್ಮ ಸಮುದಾಯದ ಹಲವಾರು ಪ್ರತಿಭೆಗಳನ್ನು ಮುಖ್ಯ ವಾಹಿನಿಗೆ ತಂದು ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆ ನಿರ್ಮಿಸುವ ದೃಷ್ಠಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಇತ್ತೀಚೆಗೆ ಗ್ರೂಪ್ ಸದಸ್ಯರಿಗಾಗಿ “ರಾಷ್ಟ್ರ ರಾಜಕೀಯದಲ್ಲಿ ಅಹ್ಲು ಸ್ಸುನ್ನತ್ತಿನ ನಿಲುವು” ಎಂಬ ವಿಷಯದ ಕುರಿತು “ಪ್ರಬಂಧ ಸ್ಪರ್ಧೆ” ಯನ್ನು ಆಯೋಜಿಸಲಾಗಿತ್ತು.

ಸ್ಪರ್ಧೆಯ ಫಲಿತಾಂಶ ಮೇ 10 ರಂದು ಪ್ರಕಟಗೊಂಡಿದೆ.

ಹಲವಾರು ಸ್ಪರ್ಧಾಳುಗಳು ಭಾಗವಹಿಸಿದ ಈ ಸ್ಪರ್ಧೆಯಲ್ಲಿ, ಇಬ್ರಾಹಿಂ ಖಲೀಲ್ ಪುತ್ತೂರು ರವರು ಪ್ರಥಮ ಸ್ಥಾನ, ಮತ್ತು ಮಹಮ್ಮದ್ ಇರ್ಷಾದ್ ಲಾಡಿ ರವರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

error: Content is protected !! Not allowed copy content from janadhvani.com