ಸೌದಿ ಅರೇಬಿಯ:- ಕರ್ನಾಟಕ ಕಲ್ಚರಲ್ ಫೌಂಡೇಶನ್ ದಮ್ಮಾಮ್ ಝೋನ್ ಸಮಿತಿಯ ಧೈವಾರ್ಷಿಕ ಮಹಾಸಭೆ’ಯು ಇತ್ತೀಚೆಗೆ ಇಲ್ಲಿನ ಜುಬೈಲ್ ಕೆ.ಸಿ.ಎಫ್ ಭವನದಲ್ಲಿ ಫಾರೂಖ್ ಮುಸ್ಲಿಯಾರ್ ಕುಪ್ಪೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.


ಹನೀಫ್ ಸಅದಿ ದುಆ ಮಾಡಿ, ಶಿಹಾಬ್ ಹಿಮಮಿ ಸಖಾಫಿಯವರ ಕಿರಾಅತ್ ಮೂಲಕ ಚಾಲನೆಗೊಂಡ ಸಭೆಯನ್ನು ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಿ.ಪಿ ಯುಸುಫ್ ಸಖಾಫಿ ಉದ್ಘಾಟಿಸಿ ಸಂಘಟನೆಯ ಧ್ಯೇಯ ಉದ್ದೇಶ ಹಾಗು ಮಹತ್ವವನ್ನು ವಿವರಿಸಿದರು.

ಫೈಝಲ್ ಕ್ರಷ್ಣಾಪುರ ಗತ ವರ್ಷದ ವರದಿ ಹಾಗೂ ಕೋಶಾಧಿಕಾರಿ ಮುಹಮ್ಮದ್ ಮಲಬೆಟ್ಟು ಲೆಕ್ಕ ಪತ್ರವನ್ನು ಮಂಡಿಸಿದರು.
ರೀ ಆರ್ಗನೈಝಿಂಗ್ ಆಫೀಸರ್’ ಆಗಿ ಆಗಮಿಸಿದ ರಾಷ್ಟ್ರೀಯ ಸಮಿತಿಯ ಸದಸ್ಯರಾದ’ ಮಜೀದ್ ವಿಟ್ಲ ಹಾಗು ಉಮರ್ ಅಳಕೆಮಜಲ್ ರವರು ನೂತನ ಸಮಿತಿಯನ್ನು ಆಯ್ಕೆಗೊಳಿಸಿದರು.

ಅಧ್ಯಕ್ಷರು: ರಶೀದ್ ಸಖಾಫಿ ಮಿತ್ತೂರು, ಪ್ರಧಾನ ಕಾರ್ಯದರ್ಶಿ: ಸಮೀವುಲ್ಲಾ ಗೂಡಿನಬಳಿ, ಕೋಶಾಧಿಕಾರಿ: ಇಬ್ರಾಹಿಂ ವಳವೂರು.
ಸಂಘಟನಾ ಇಲಾಖೆ
ಅಧ್ಯಕ್ಷರು: ನಿಸಾರ್ ಗೂಡಿನಬಳಿ
ಕಾರ್ಯದರ್ಶಿಯಾಗಿ ಶಫೀಕ್ ಕಾಟಿಪಳ್ಳ.
ಶಿಕ್ಷಣ ಇಲಾಖೆ
ಅಧ್ಯಕ್ಷರು: ಹಬೀಬ್ ಸಖಾಫಿ ಕುತ್ತಾರು
ಕಾರ್ಯದರ್ಶಿ: ಇಸ್ಮಾಯಿಲ್ ಕರೋಪಾಡಿ
ಸಾಂತ್ವನ ಇಲಾಖೆ
ಅಧ್ಯಕ್ಷರು: ಅಬೂಬಕ್ಕರ್ ಕೋಡಿ
ಕಾರ್ಯದರ್ಶಿ: ಬಾಷಾ ಗಂಗಾವಳಿ.
ಪ್ರಕಾಶನ ಇಲಾಖೆ
ಅಧ್ಯಕ್ಷರು: ಸಮದ್ ವಳವೂರು
ಕಾರ್ಯದರ್ಶಿ: ಇಕ್ಬಾಲ್ ಗುಲ್ವಾಡಿ.
ಆಡಳಿತ ಇಲಾಖೆ
ಅಧ್ಯಕ್ಷರು: ಅಬೂಬಕ್ಕರ್ ಮಿಸ್ಬಾಹಿ
ಕಾರ್ಯದರ್ಶಿ: ಅಶ್ರಫ್ ನಾವುಂದ.
ಇಹ್ಸಾನ್ ಇಲಾಖೆ
ಅಧ್ಯಕ್ಷರು: ತಮೀಮ್ ಕೂಳೂರು
ಕಾರ್ಯದರ್ಶಿ: ಸಮದ್ ದೇರಳಕಟ್ಟೆ.
ಹಾಗೂ 15 ಮಂದಿ ಕಾರ್ಯಕಾರಿ ಸದಸ್ಯರನ್ನು ಮತ್ತು 18 ಮಂದಿ ರಾಷ್ಟ್ರೀಯ ಕೌನ್ಸಿಲರ್’ಗಳನ್ನೂ ಆಯ್ಕೆ ಮಾಡಲಾಯಿತು.
ಅಝೀಝ್ ಸಅದಿ, ಫಾರುಕ್ ಕಾಟಿಪಳ್ಳ, ಕಮರುದ್ದೀನ್ ಗೂಡಿನಬಳಿ, ಫಾರುಕ್ ಮುಸ್ಲಿಯಾರ್ ಕುಪ್ಪೆಟ್ಟಿ ಮಾತನಾಡಿ ನೂತನ ಸಮೀತಿಗೆ ಶುಭ ಹಾರೈಸಿದರು.
ಪ್ರಾರಂಭದಲ್ಲಿ ಇಕ್ಬಾಲ್ ಕೈರಂಗಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ಕೊನೆಯಲ್ಲಿ ಸಮೀವುಲ್ಲ ಗೂಡಿನಬಳಿ ವಂದಿಸಿದರು..















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ