ಬೆಂಗಳೂರು,ಏ. 27-ನವೀನ ಮಾದರಿಯಲ್ಲಿ 20 ರೂ. ಮುಖಬೆಲೆಯ ಹೊಸ ನೋಟು ಶೀಘ್ರದಲ್ಲೇ ಬಿಡುಗಡೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಸಿದ್ಧತೆ ಮಾಡಿಕೊಂಡಿದೆ.
ಈ ಕುರಿತು ಆರ್ಬಿಐ ಅಧಿಸೂಚನೆ ಹೊರಡಿಸಿದ್ದು, ಹೊಸ 20 ರೂ.ನ ಬಣ್ಣ, ಮಾದರಿ ಹಾಗೂ ರೂಪಾಯಿಯೊಳಗಿನ ಇನ್ನಿತರ ಚಿತ್ರಣ ಕುರಿತು ಮಾಹಿತಿ ನೀಡಿದೆ.
ಹೊಸ 20 ರೂ. ನೋಟಿನಲ್ಲಿ ಆರ್ಬಿಐ ಗಾರ್ವನರ್ ಶಕ್ತಿಕಾಂತ್ ದಾಸ್ ಸಹಿ ಇರಲಿದೆ. ಭಾರತದ ಸಂಸ್ಕೃತಿ ಬಿಂಬಿಸುವ ಎಲ್ಲೋರ ಗುಹೆಗಳ ಚಿತ್ರ, ಮಹಾತ್ಮಗಾಂಧಿ ಸರಣಿಯ ಹೊಸ ನೋಟಿನ ಜೊತೆ ಹಳೆ 20 ರೂ. ನೋಟು ಕೂಡ ಚಾಲ್ತಿಯಲ್ಲಿ ಮುಂದುವರೆಯಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.
20 ರೂ. ಹೊಸ ನೋಟಿನ ಮುಂಭಾಗದ ಮಧ್ಯದಲ್ಲಿ ಮಹಾತ್ಮಗಾಂಧಿ ಫೋಟೊ ಇರಲಿದೆ. ಹಿಂದಿ ಮತ್ತು ಇಂಗ್ಲಿಷ್ ಅಂಕಿಯಲ್ಲಿ ನೋಟಿನ ಮೌಲ್ಯ ಇರಲಿದೆ. ಹಸಿರು ಮಿಶ್ರಿತ ಹಳದಿ ಬಣ್ಣ ಹೊಂದಿರುವ ನೋಟಿನ ಹಿಂದಿನ ಭಾಗದಲ್ಲಿ ಗುಹೆ ಚಿತ್ರವಿರಲಿದೆ. ಈ ನೋಟು 63 ಎಂಎಂ ಅಗಲ ಹಾಗೂ 129 ಮಿ.ಮೀ. ಉದ್ದವಿರಲಿದೆ.















ಇನ್ನಷ್ಟು ಸುದ್ದಿಗಳು
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದು
ಚೀನಾದಲ್ಲಿ HMPV ವೈರಸ್ ವ್ಯಾಪಕ,ಆಸ್ಪತ್ರೆಗಳು ಫುಲ್: ಆತಂಕ ಬೇಡ- ಕೇಂದ್ರ ಸರ್ಕಾರ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡನೀಯ: ತೆಲಂಗಾಣ ಸಿಎಂಗೆ ಎ ಪಿ ಉಸ್ತಾದ್ ಪತ್ರ
ಲಂಚ: ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಪ್ರಕರಣ – 966 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಿದ್ದ ಕಂಪನಿ ಮೇಘಾ
ಸಮಗ್ರ ಅಭಿವೃದ್ಧಿ ಗೆ ಅಂಬೇಡ್ಕರ್ ತತ್ವ ಪಾಲನೆ ಅಗತ್ಯ : ದ್ರೌಪದಿ ಮುರ್ಮು
ಹರಿಯಾಣ : ಶಾಲಾ ಬಸ್ ಪಲ್ಟಿ; ಆರು ಮಕ್ಕಳು ಸಾವು ಈದ್ ರಜೆಯಲ್ಲೂ ತೆರೆದಿದ್ದ ಶಾಲೆ!
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಂ 2ಬಿ ಮೀಸಲು ರದ್ಧತಿ ಮತಬ್ಯಾಂಕ್ ಭದ್ರಪಡಿಸುವ ಸರಕಾರದ ನಡೆ ಖಂಡನೀಯ- ಎಸ್ ವೈ ಎಸ್
ದೇವಸ್ಥಾನಕ್ಕೆ ಮಾಂಸ ಎಸೆದು, ಕೋಮುಗಲಭೆ- ಪ್ರಮುಖ ಆರೋಪಿ ಚಂಚಲ್ ತ್ರಿಪಾಠಿ ಬಂಧನ