janadhvani

Kannada Online News Paper

ಮುಡಿಪು ಡಿವಿಶನ್ ; ಓರ್ಬಿಟ್ ಕ್ಯಾರಿಯರ್ ಗೈಡೆನ್ಸ್ ಕಾರ್ಯಾಗಾರ

ಎಸ್ಸೆಸ್ಸೆಫ್ ಮುಡಿಪು ಡಿವಿಶನ್ ವತಿಯಿಂದ ಓರ್ಬಿಟ್ ಕೆರಿಯರ್ ಗೈಡೆನ್ಸ್ ಕಾರ್ಯಾಗಾರವು ಎಸ್ಸೆಸ್ಸೆಫ್ ಮುಡಿಪು ಡಿವಿಶನ್ ಅಧ್ಯಕ್ಷರಾದ ತೌಸೀಫ್ ಸಅದಿ ಉಸ್ತಾದರ ಅಧ್ಯಕ್ಷತೆಯಲ್ಲಿ ಅಲ್ ಮದೀನ ಕ್ಯಾಂಪಸ್ ಮಂಜನಾಡಿಯಲ್ಲಿ ನಡೆಯಿತು.

ಎಸ್ಸೆಸ್ಸೆಫ್ ರಾಜ್ಯ ಕಾಯ೯ದಶಿ೯ ಇಸ್ಮಾಈಲ್ ಮಾಸ್ಟರ್ ಮೊಂಟೆಪದವು ಕಾರ್ಯಕ್ರಮ ವನ್ನು ಉದ್ಘಾಟಿಸಿದರು.

ಮುಡಿಪು ಡಿವಿಶನ್ ಇವೆಂಟ್ಸ್ ಮತ್ತು ಟ್ರೈನಿಂಗ್ ಕನ್ವೀನರ್ ಮನ್ಸೂರ್ ಹಿಮಮಿ ಮೊಂಟೆಪದವು ಮತ್ತು ನಾಸಿರ್ ಬಜ್ಪೆ ಯವರು ಕೆರಿಯರ್ ಗೈಡನ್ಸ್ ಬಗ್ಗೆ ತರಗತಿ ನಡೆಸಿದರು.

ಅಲ್-ಮದೀನ ಮುದರ್ರಿಸ್ ಅಬ್ದುಲ್ ಸಲಾಂ ಅಹ್ಸನಿ ಹಾಗೂ ಅಬ್ದುರ್ರಝಾಕ್ ಮಾಸ್ಟರ್ ನಾವೂರು ಶುಭ ಹಾರೈಸಿದರು.

ಮುಡಿಪು ಡಿವಿಶನ್ ಪ್ರಧಾನ ಕಾಯ೯ದಶಿ೯ ಇಲ್ಯಾಸ್ ಪೊಟ್ಟೋಳಿಕೆ ಸ್ವಾಗತಿಸಿದರು. ಡಿವಿಶನ್ ವಿಸ್ಡಂ ಕನ್ವೀನರ್ ಶರೀಫ್ ಪಾನೇಲ ವಂದಿಸಿದರು.

error: Content is protected !! Not allowed copy content from janadhvani.com