janadhvani

Kannada Online News Paper

ಕೆಸಿಎಫ್ ಮದೀನಾ ಝೋನ್: ವಾರ್ಷಿಕ ಮಹಾಸಭೆ

ಮದೀನಾ:.ಕರ್ನಾಟಕ ಕಲ್ಚರಲ್ ಫೌಂಡೇಶನ್ ಮದೀನಾ ಮುನವ್ವರ ಝೋನ್ ಸಮಿತಿಯ ವಾರ್ಷಿಕ ಮಹಾಸಭೆಯು ಶುಕ್ರವಾರ ಮದೀನಾ ಮುನವ್ವರದ ಕೆಸಿಎಫ್ ಭವನದಲ್ಲಿ ಹಮೀದ್ ಕರಾಯ ಉಸ್ತಾದ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮದೀನಾ ಸೆಕ್ಟರ್ ಅಧ್ಯಕ್ಷ ಅಶ್ರಫ್ ಸಖಾಫಿ ನೂಜಿ ಅವರು ದುವಾ ನೆರವೇರಿಸಿದ್ದು, ಯೂಸುಫ್ ಮದನಿ ಅವರು ಕಿರಾತ್ ಪಠಿಸಿದರು. ಕೆಸಿಎಫ್ ಐ.ಎನ್.ಸಿ ಶಿಕ್ಷಣ ವಿಭಾಗ ಕನ್ವೀನರ್ ಕಮರುದ್ದೀನ್ ಗೂಡಿನಬಳಿ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಕೆಸಿಎಫ್ ಮದೀನಾ ಝೋನ್ ಕಾರ್ಯಕರ್ತರು ಸೇವಾ ಚಟುವಟಿಕೆಗಳಲ್ಲಿ ಗರಿಷ್ಟ ಗುಣಮಟ್ಟ ಹೊಂದಿದವರಾಗಿದ್ದಾರೆ. ಹಜ್ಜ್ ಸಮಯದಲ್ಲಿ ಮದೀನಾ ಹೆಚ್.ವಿ.ಸಿ ಕಾರ್ಯಕರ್ತರ ನಿಸ್ವಾರ್ಥ ಸೇವೆಯು, ಸೌದಿ ಅರೇಬಿಯಾ ಮಾತ್ರವಲ್ಲ, ಅಂತರಾಷ್ಟ್ರೀಯ (ಐ.ಎನ್.ಸಿ) ಮಟ್ಟದಲ್ಲಿ ಅತಿ ಹೆಚ್ಚು ಪ್ರಖ್ಯಾತಿ ಗೊಂಡಿದೆ ಎಂದರು.

ಹುಸೈನಾರ್ ಉರುವಾಲ್ ಪದವು ಗತ ವರ್ಷದ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಝೋನ್ ರೀ ಆರ್ಗನೈಸಿಂಗ್ ಆಫೀಸರ್ ಆಗಿ ಆಗಮಿಸಿದ ಫೈಝಲ್ ಕೃಷ್ಣಾಪುರ, ಮುಹಮ್ಮದ್ ಕಲ್ಲರ್ಬೆ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನಂತರ ನೂತನ ಸಮಿತಿಯನ್ನು ಆಯ್ಕೆಗೊಳಿಸಿದರು.

KCF ಮದೀನಾ ಮುನವ್ವರ ಝೋನ್ ನೂತನ ಸಮಿತಿ

ಅಧ್ಯಕ್ಷರು :-ಹಮೀದ್ ಮುಸ್ಲಿಯಾರ್ ಕರಾಯ*
ಪ್ರ.ಕಾರ್ಯದರ್ಶಿ:-ಹುಸೈನಾರ್ ಉರುವಾಲ್ ಪದವು
ಕೋಶಾಧಿಕಾರಿ:-ಅಶ್ರಫ್ ಕಿನ್ಯ

ಸಂಘಟನಾ ಇಲಾಖೆ
ಅಧ್ಯಕರು:-ಮಹಮ್ಮದ್ ಶಫೀಖ್ ಸೊರಿಂಜೆ
ಕಾರ್ಯದರ್ಶಿ:-ಫಯಾಝ್ ಪಕ್ಷಿಕೆರೆ

ಶಿಕ್ಷಣ ಇಲಾಖೆ
ಅಧ್ಯಕ್ಷರು:-ಮುಹಮ್ಮದ್ ಅಶ್ರಫ್ ಸಖಾಫಿ ನೂಜಿ
ಕಾರ್ಯದರ್ಶಿ:-ಇಕ್ಬಾಲ್ ಸ’ಅದಿ ಕೃಷ್ಣಾಪುರ

ಸಾಂತ್ವನ ಇಲಾಖೆ
ಅಧ್ಯಕ್ಷರು:-ತಾಜುದ್ದೀನ್ ಸುಳ್ಯ
ಕಾರ್ಯದರ್ಶಿ :-ರಝ್ಝಾಖ್ ಉಳ್ಳಾಲ್

ಪ್ರಕಾಶನ ಇಲಾಖೆ
ಅಧ್ಯಕ್ಷರು:- ತೌಫೀಖ್ ಬೋಳಿಯಾರ್
ಕಾರ್ಯದರ್ಶಿ:-ಸಿನಾನ್ ಕಣ್ಣಂಗಾರ್

ಆಡಳಿತ ಇಲಾಖೆ
ಅಧ್ಯಕ್ಷರು:- ಅಸ್ಕರ್ ಜೋಗಿಬೆಟ್ಟು
ಕಾರ್ಯದರ್ಶಿ:- ತೌಸಿಫ್ ಕೆ.ಸಿ ರೋಡ್

ಇಹ್ಸಾನ್ ಇಲಾಖೆ
ಅಧ್ಯಕ್ಷರು:ಬಿ.ಎ.ಅಬ್ದರ್ರಮಾನ್
ಕಾರ್ಯದರ್ಶಿ:-ಹಕೀಂ ಬೋಳಾರ್
ಒಟ್ಟು ಕಾರ್ಯಕಾರಿ ಸದಸ್ಯರಾಗಿ 23 ಮಂದಿ ಹಾಗೂ ರಾಷ್ಟ್ರೀಯ ಕೌನ್ಸಿಲರ್ ಆಗಿ 8ಮಂದಿಯನ್ನು ಆಯ್ಕೆ ಮಾಡಲಾಯಿತು.

ಕೆಸಿಎಫ್ ಮದೀನಾ ಮುನವ್ವರ ಸೆಕ್ಟರ್ ಅಧ್ಯಕ್ಷ ಅಶ್ರಫ್ ಸಖಾಫಿ ನೂಜಿ ಸ್ವಾಗತಿಸಿ, ನೂತನ ಸಮಿತಿಯ ಪ್ರಧಾನ ಕಾರ್ಯದರ್ಶಿ ಹುಸೈನಾರ್ ಉರುವಾಲ್ ಪದವು, ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.

error: Content is protected !! Not allowed copy content from janadhvani.com