ಸೌದಿ ಅರೇಬಿಯ:- ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನ್ ಸಮಿತಿಯ ಧೈವಾರ್ಷಿಕ ಮಹಾಸಭೆ’ಯು ಇತ್ತೀಚೆಗೆ ಇಲ್ಲಿನ ಬತ್ಹ ಅಲ್ಮಾಸ್ ಸಭಾಂಗಣದಲ್ಲಿ ಫಾರೂಖ್ ಸಅದಿ’ಯವರ ಅಧ್ಯಕ್ಷತೆಯಲ್ಲಿ ನಡೆಯಿತು.ಅಬ್ದುರ್ರಹ್ಮಾನ್ ಮದನಿ ದುಆ ಮಾಡಿ, ಇಲ್ಯಾಸ್ ಲತ್ವೀಫಿ’ಯವರ ಕಿರಾಅತ್ ಮೂಲಕ ಚಾಲನೆಗೊಂಡ ಸಭೆಯನ್ನು ಕೆಸಿಎಫ್ ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗ ಅಧ್ಯಕ್ಷರಾದ ಸಿದ್ದೀಕ್ ಸಖಾಫಿ ಪೆರುವಾಯಿ ಉದ್ಘಾಟಿಸಿ ಸುನ್ನೀ ಕಾರ್ಯಕರ್ತರು ‘ಆರ್ಥಿಕ ರಂಗ ಸಹಿತ ಎಲ್ಲಾ ರಂಗಗಳಲ್ಲೂ ಬಹಳಷ್ಟು ಸೂಕ್ಷ್ಮತೆಯನ್ನು ಕಾಪಾಡಿಕೊಳ್ಳಬೇಕೆಂದು ಹೇಳಿದರು.

ನಿಝಾಂ ಸಾಗರ್ ಗತ ವರ್ಷದ ವರದಿ ಹಾಗೂ ಕೋಶಾಧಿಕಾರಿ ಇಸ್ಮಾಯಿಲ್ ಕನ್ನಂಗಾರ್ ಲೆಕ್ಕ ಪತ್ರವನ್ನು ಮಂಡಿಸಿದರು.
ರೀ ಆರ್ಗನೈಝಿಂಗ್ ಆಫೀಸರ್’ ಆಗಿ ಆಗಮಿಸಿದ ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಅಧ್ಯಕ್ಷ ಅಬ್ದುಲ್ ಅಝೀಝ್ ಸಅದಿ’ಯವರು ನೂತನ ಸಮಿತಿಯನ್ನು ಆಯ್ಕೆಗೊಳಿಸಿದರು.
ಅಧ್ಯಕ್ಷರಾಗಿ ಫಾರೂಕ್ ಸಅದಿ ಹೆಚ್ಕಲ್ಲು, ಪ್ರಧಾನ ಕಾರ್ಯದರ್ಶಿಯಾಗಿ ನಿಝಾಮುದ್ದೀನ್ ಉಸ್ಮಾನ್, ಕೋಶಾಧಿಕಾರಿಯಾಗಿ ಉಮರ್ ಅಳಕೆಮಜಲ್, ಸಂಘಟನಾ ಇಲಾಖೆ ಅಧ್ಯಕ್ಷರಾಗಿ ಮುಸ್ತಫಾ ಸಅದಿ ಮತ್ತು ಕಾರ್ಯದರ್ಶಿಯಾಗಿ ಅಶ್ರಫ್ ಕಿಲ್ಲೂರು, ಶಿಕ್ಷಣ ಇಲಾಖೆ ಅಧ್ಯಕ್ಷರಾಗಿ ಇಲ್ಯಾಸ್ ಲತ್ವೀಫಿ ಮತ್ತು ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಸಾದಾತ್, ಸಾಂತ್ವನ ಇಲಾಖೆ ಅಧ್ಯಕ್ಷರಾಗಿ ಅಬ್ದುಲ್ ಮಜೀದ್ ವಿಟ್ಲ ಮತ್ತು ಕಾರ್ಯದರ್ಶಿಯಾಗಿ ರಮೀಝ್ ಕುಳಾಯಿ, ಪ್ರಕಾಶನ ಇಲಾಖೆ ಅಧ್ಯಕ್ಷರಾಗಿ ನವಾಝ್ ಚಿಕ್ಕಮಗಳೂರು ಮತ್ತು ಕಾರ್ಯದರ್ಶಿಯಾಗಿ ಹನೀಫ್ ಕಣ್ಣೂರು, ಆಡಳಿತ (ಅಡ್ಮಿನ್) ಇಲಾಖೆ ಅಧ್ಯಕ್ಷರಾಗಿ ನಝೀರ್ ಕಕ್ಕಿಂಜೆ ಮತ್ತು ಕಾರ್ಯದರ್ಶಿಯಾಗಿ ಬಷೀರ್ ಮೆದು ,ಇಹ್ಸಾನ್ ಇಲಾಖೆ ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಮದನಿ ಮತ್ತು ಕಾರ್ಯದರ್ಶಿಯಾಗಿ ಯೂಸುಫ್ ಕಳಂಜಿಬೈಲ್ ಹಾಗೂ 7 ಮಂದಿ ಕಾರ್ಯಕಾರಿ ಸದಸ್ಯರನ್ನು ಮತ್ತು 12 ಮಂದಿ ರಾಷ್ಟ್ರೀಯ ಕೌನ್ಸಿಲರ್’ಗಳನ್ನೂ ಆಯ್ಕೆ ಮಾಡಲಾಯಿತು.
ಫಾರೂಕ್ ಸಅದಿ ಹಾಗೂ ಅಬ್ದುರ್ರಹ್ಮಾನ್ ಮದನಿ ಮಾತನಾಡಿದರು ಉಮರ್ ಅಳಕೆಮಜಲ್ ಮೇ 17 ರಂದು ನಡೆಯಲಿರುವ ಗ್ರಾಂಡ್ ಇಫ್ತಾರ್’ನ ಮಾಹಿತಿಯನ್ನು ನೀಡಿದರು.
ಪ್ರಾರಂಭದಲ್ಲಿ ನಝೀರ್ ಮುಸ್ಲಿಯಾರ್ ನಂದಾವರ ಸ್ವಾಗತಿಸಿ ಕೊನೆಯಲ್ಲಿ ನವಾಝ್ ಚಿಕ್ಕಮಗಳೂರು ವಂದಿಸಿದರು.ನಿಝಾಂ ಸಾಗರ್ ಕಾರ್ಯಕ್ರಮ ನಿರೂಪಿಸಿದರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ