janadhvani

Kannada Online News Paper

ಆರೋಪ ಸಾಬೀತಾದರೆ ಚುನಾವಣಾ ಕಣದಿಂದ ಹಿಂದೆ ಸರಿಯುತ್ತೇನೆ- ಅಜಂ ಖಾನ್

ನವದೆಹಲಿ: ಸಮಾಜವಾದಿ ಪಕ್ಷದ ರಾಂಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಜಂ ಖಾನ್ ಭಾನುವಾರ ಬಿಜೆಪಿ ಅಭ್ಯರ್ಥಿ ಜಯಪ್ರದಾ ಅವರ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, “ನಾನು ರಾಂಪುರ ವಿಧಾನಸಭಾ ಕ್ಷೇತ್ರದಿಂದ 9 ಬಾರಿ ಶಾಸಕನಾಗಿ ಆಯ್ಕೆಯಾಗಿ, ಸಚಿವನೂ ಆಗಿದ್ದೇನೆ. ನನಗೆ ಏನು ಮಾತನಾಡಬೇಕೆಂಬ ಪ್ರಜ್ಞೆ ಇದೆ. ನಾನು ನನ್ನ ಹೇಳಿಕೆಯಲ್ಲಿ ಯಾವುದೇ ವ್ಯಕ್ತಿಗೆ ಅವಮಾನ ಮಾಡಿದ್ದರೆ, ಯಾರಾದರೂ ಅದನ್ನು ಸಾಬೀತು ಪಡಿಸಿ ತೋರಿಸಿದರೆ, ನಾನು ಚುನಾವಣಾ ಕಣದಿಂದ ಹಿಂದೆ ಸರಿಯುತ್ತೇನೆ” ಎಂದಿದ್ದಾರೆ.

ಅಜಂ ಖಾನ್ ವಿವಾದಾತ್ಮಕ ಹೇಳಿಕೆ ಬಗ್ಗೆ ಮಾತನಾಡಿದ್ದ ಜಯಪ್ರದಾ, ಅಜಂ ಖಾನ್ ನನ್ನ ಮೇಲೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ. ಹೆಣ್ಣು ಮಕ್ಕಳ ದಬ್ಬಾಳಿಕೆ ವಿರುದ್ಧ ಹೋರಾಡಬೇಕು, ಅಜಂ ಖಾನ್ ಗೆ ಒಂದು ಮತವೂ ಹೋಗಬಾರದು ಎಂದಿದ್ದರು. ಈ ವೇಳೆ ಅಖಿಲೇಶ್ ಯಾದವ್ ಬಗ್ಗೆಯೂ ಮಾತನಾಡಿದ್ದ ಜಯಾ, ಅಖಿಲೇಶ್ ನಿಮ್ಮೊಳಗಿನ ಸಂಸ್ಕಾರ ಎಲ್ಲಿ ಹೋಯಿತು. ನಿಮ್ಮೊಂದಿಗಿರುವ ನಾಯಕರ ಜೊತೆಗಿನ ಒಡನಾಟದಿಂದಾಗಿ ನಿಮ್ಮ ಮನಸ್ಸೂ ಕೂಡ ಹಾಳಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದರು.

ಅಜಂ ಖಾನ್ ವಿರುದ್ಧ ದೂರು : ನಟಿ ಜಯಪ್ರದಾ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗವು ಚುನಾವಣಾ ಆಯೋಗಕ್ಕೆ ದೂರು ನೀಡಲು ನಿರ್ಧರಿಸಿದೆ. ಈಗಾಗಲೇ ಅಜಂ ಖಾನ್ ವಿರುದ್ಧ ಮ್ಯಾಜಿಸ್ಟ್ರೇಟ್ ದೂರು ಸಲ್ಲಿಸಿದ್ದು, ರಾಂಪುರದ ಶಾಹಾಬಾದ್ ಪೊಲೀಸ್ ಠಾಣೆಯಲ್ಲಿ ಸೋಮವಾರ ಎಫ್ಐಆರ್ ದಾಖಲಾಗಿದೆ.

error: Content is protected !! Not allowed copy content from janadhvani.com