janadhvani

Kannada Online News Paper

ಕೆಸಿಎಫ್ ತಂದಾಹ ನೂತನ ಯೂನಿಟ್ ಅಸ್ತಿತ್ವಕ್ಕೆ

ಕಮೀಸ್ ಮುಷ್ಯತ್: ಕೆಸಿಎಫ್ ಕಮೀಸ್ ಮುಷ್ಯತ್ ಸೆಕ್ಟರ್ ಅಧೀನದಲ್ಲಿ ನೂತನ ತಂದಾಹ ಯುನಿಟ್ ರಚನೆಯು ಸೆಕ್ಟರ್ ಅಧ್ಯಕ್ಷರಾದ ಅಬ್ದುಲ್ ರಝ್ಝಾಖ್ ಬನ್ನೂರ್ ರವರ ಅಧ್ಯಕ್ಷತೆಯಲ್ಲಿ ಹಯ್ಯ್ ಲ್ ಮುಸಾದಲ್ಲಿ ಜರಗಿತು.

ಕಾರ್ಯಕ್ರಮವನ್ನು ಜಿದ್ದಾ ಝೋನ್ ಸಂಘಟನೆ ಇಲಾಖೆ ಕಾರ್ಯದರ್ಶಿ ಖಾಲಿದ್ ಕಬಕ ಸ್ವಾಗತಿಸಿದರು. ಸೆಕ್ಟರ್ ಅಧ್ಯಕ್ಷರು ಅಬ್ದುಲ್ ರಝ್ಝಾಖ್ ಬನ್ನೂರ್ ಉದ್ಘಾಟಿಸಿ ಕೆಸಿಎಫ್ ಯಾಕಾಗಿ ಕೆಸಿಎಫ್ ನಲ್ಲಿ ಹೇಗೆ ಕಾರ್ಯಚರಿಸಬೇಕು ಎಂಬುದನ್ನು ವಿವರಿಸಿದರು. ಅಲಿ ಸಖಾಫಿ ಉಸ್ತಾದ್ ಮತ್ತು ಅಹ್ಮದ್ ಅಮಾನಿ ಉಸ್ತಾದ್ ಶುಭ ಹಾರೈಸಿ ಮಾತನಾಡಿದರು. ಸೆಕ್ಟರ್ ನಿಂದ ರೀ-ಆರ್ಗನೈಸಿಂಗ್ ಆಫೀಸರಾಗಿ ಆಗಮಿಸಿದ ಅಬ್ದುಲ್ ರಝ್ಝಾಖ್ ಕೊದಾಲ್ ರವರು ನೂತನ ಪದಾಧಿಕಾರಿಗಳ ಘೋಷಣೆ ಮಾಡಿದರು.

ಅಧ್ಯಕ್ಷರಾಗಿ ಅನ್ಸಾಫ್ ಉಳ್ಳಾಲ, ಪ್ರಧಾನ ಕಾರ್ಯದರ್ಶಿಯಾಗಿ ಆಸಿಫ್ ತುರ್ಕಳಿಕೆ,
ಕೋಶಾಧಿಕಾರಿಯಾಗಿ ಮಹಮ್ಮದ್ ಸುಂಕದಕಟ್ಟೆ, ಉಪಾಧ್ಯಕ್ಷರಾಗಿ ಯಾಸೀನ್ ಮಂಜನಾಡಿ, ಜೊತೆ ಕಾರ್ಯದರ್ಶಿಯಾಗಿ ಮುಸ್ತಾಫ ಪರಂಗಿಪೇಟೆ ಹಾಗೂ ಸಿದ್ದೀಕ್ ತುರ್ಕಳಿಕೆ,ಖಾಲಿದ್ ಕಬಕ, ರಹಿಮ್ ನೆಲ್ಯಾಡಿ, ಹನೀಫ್ ಕೆ ಸಿ ರೋಡ್, ಅಮೀನ್ ಬಿಜಾಪುರ,ಅಹ್ಮದ್ ಅಮಾನಿ, ಅಲಿ ಸಖಾಫಿ 12 ಕಾರ್ಯಕಾರಿ ಸಮಿತಿ ಸದಸ್ಯರನ್ನೊಳಗೊಂಡ ಸಮಿತಿಯನ್ನು ಆಯ್ಕೆ ಮಾಡಲಾಯಿತು.

‘ಅಲೈಕುಮ್ ಬಿಲ್ ಜಮಾಅಃ’ ಎಂಬ ವಿಷಯದಲ್ಲಿ ಸೆಕ್ಟರ್ ಸಂಘಟನಾ ಅಧ್ಯಕ್ಷರು ಶರೀಫ್ ಉಸ್ತಾದ್ ವಿಟ್ಲ ಭಾಷಣ ಮಾಡಿದರು. ಕಾರ್ಯಕ್ರಮನ್ನು ನೂತನ ಕಾರ್ಯದರ್ಶಿ ಸ್ವಾಗತಿಸಿ, ಕೋಶಾಧಿಕಾರಿ ಧನ್ಯವಾದ ಸಲ್ಲಿಸಿದರು

error: Content is protected !! Not allowed copy content from janadhvani.com