janadhvani

Kannada Online News Paper

ಚಿತ್ರದುರ್ಗದಲ್ಲಿ ಮೋದಿ ತಂದ ಅನುಮಾನಾಸ್ಪದ ಸೂಟ್‌ ಕೇಸ್‌- ವೀಡಿಯೋ ವೈರಲ್

ಬೆಂಗಳೂರು: ಚಿತ್ರದುರ್ಗದಲ್ಲಿ ಏ.9ರಂದು ಆಯೋಜಿಸಿದ್ದ ಬಿಜೆಪಿ ಸಮಾವೇಶಕ್ಕೆ ಮೋದಿ ಅವರನ್ನು ಹೊತ್ತು ತಂದಿದ್ದ ಹೆಲಿಕಾಪ್ಟರ್‌ನಿಂದ ಭದ್ರತಾ ಸಿಬ್ಬಂದಿ ಸೂಟ್‌ ಕೇಸ್‌ವೊಂದನ್ನು ಅನುಮಾನಾಸ್ಪದವಾಗಿ ಸಾಗಿಸುತ್ತಿರುವ ವಿಡಿಯೋ ಸದ್ಯ ವೈರಲ್‌ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದೇ ವಿಚಾರವನ್ನಿಟ್ಟುಕೊಂಡು ರಾಷ್ಟ್ರೀಯ ವಾಹಿನಿಗಳಲ್ಲಿ ಚರ್ಚೆ ಆರಂಭವಾಗಿದೆ.

ಏ.9ರಂದು ಚಿತ್ರದುರ್ಗದಲ್ಲಿ ಬಿಜೆಪಿಯ ಬೃಹತ್‌ ಸಮಾವೇಶ ಆಯೋಜನೆಯಾಗಿತ್ತು. ಈ ಸಮಾವೇಶದಲ್ಲಿ ಭಾಗವಹಿಸಲು ಮೋದಿ ಅವರು ಸೇನಾ ಹೆಲಿಕಾಪ್ಟರ್‌ನಲ್ಲಿ ಚಿತ್ರದುರ್ಗಕ್ಕೆ ಬಂದಿದ್ದರು. ಕ್ಯಾಪ್ಟರ್‌ನಿಂದ ಸೂಟ್‌ಕೇಸ್‌ವೊಂದನ್ನು ಇಳಿಸಿಕೊಳ್ಳುವ ಅವರ ಭದ್ರತಾ ಸಿಬ್ಬಂದಿ, ಅದನ್ನು ತರಾತುರಿಯಲ್ಲಿ ಕಾರಿನಲ್ಲಿ ಸಾಗಿಸುತ್ತಾರೆ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ.

ಈ ಬಗ್ಗೆ ರಾಜಕೀಯ ವಲಯ ಮತ್ತು ಸಾರ್ವಜನಿಕ ವಲಯದಲ್ಲಿ ಬಿಸಿಬಿಸಿ ಚರ್ಚೆ ಆರಂಭವಾಗಿದೆ. ಹೆಲಿಕಾಪ್ಟರ್‌ನಲ್ಲಿ ತಂದ ಸೂಟ್‌ಕೇಸ್‌ನಲ್ಲಿ ಏನಿತ್ತು, ಸಾಗಿಸಿದ್ದು ಎಲ್ಲಿಗೆ, ಮೋದಿ ಬಂದಿಳಿಯುತ್ತಿದ್ದಂತೇ ಸೂಟ್‌ಕೇಸ್‌ ಹೊತ್ತು ಹೊರಟ ಇನ್ನೋವಾ ಕಾರು ಯಾರದ್ದು ಎಂಬ ಪ್ರಶ್ನೆಗಳು ಸದ್ಯ ಉದ್ಭವವಾಗಿವೆ.

error: Content is protected !! Not allowed copy content from janadhvani.com