ನಗರ ಸೌಂದರ್ಯಕ್ಕೆ ಕುಂದು ತರುವಂತಹ ವಾಹನಕ್ಕೆ ಭಾರೀ ದಂಡ

ಅಬುಧಾಬಿ: ನಗರ ಸೌಂದರ್ಯಕ್ಕೆ ಕುಂದು ಉಂಟಾಗುವಂತಹ ವಾಹನಗಳು ಕಂಡು ಬಂದರೆ ಭಾರೀ ದಂಡ ವಿಧಿಸಲಾಗುವುದು ಎಂದು ಅಬುಧಾಬಿ ನಗರ ಮುನಿಸಿಪಾಲಿಟಿ ಹೇಳಿದೆ.

ಯುನೈಟೆಡ್ ಅರಬ್ ಗಣರಾಜ್ಯವು ನಗರಗಳ ಚಿತ್ರಣವನ್ನು ರಕ್ಷಿಸುವ ಹಲವು ಕಾನೂನುಗಳನ್ನು ಹೊಂದಿದೆ. ಮಳೆಯ ಕಾರಣದಿಂದಾಗಿ ಕೊಳಕಾದ ವಾಹನವನ್ನು ಶುಚಿಗೊಳಿಸಲು ಹೆಚ್ಚಿನ ವಿಳಂಬಗೊಳಿಸಬಾರದೆಂದು ಮುನಿಸಿಪಾಲಿಟಿ ಅಧಿಕಾರಿಗಳು ತಿಳಿಸಿದ್ದಾರೆ.

ಕೊಳಕಾದ ಅಥವಾ ಧೂಳುಮಯ ವಾಹನಗಳನ್ನು ವಶಪಡಿಸಿಕೊಂಡರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು. ವಾಹನಗಳನ್ನು ಕೊಳಕು ಮಾಡುವುದು ಅಪರಾಧವೆಂದು ಪರಿಗಣಿಸಲಾಗಿದೆ. ಅಬುಧಾಬಿ, ದುಬೈ ಮತ್ತು ಶಾರ್ಜಾ ಎಮಿರೇಟ್ ಗಳಲ್ಲಿ ಇದರ ವಿರುದ್ಧ ಕಠಿಣ ನಿಯಮಗಳಿವೆ. ಹೊಲಸು ಮತ್ತು ಧೂಳುಮಯ ವಾಹನಗಳನ್ನು ವಶಪಡಿಸಿಕೊಂಡರೆ, ಪುರಸಭೆಯ ತನಿಖಾಧಿಕಾರಿಗಳು ವಾಹನಕ್ಕೆ ಸೂಚನೆ ಚೀಟಿ ಅಂಟಿಸಲಿದ್ದಾರೆ. ಅಂಟಿಸಿದ ನಂತರ ವಾಹನವನ್ನು ಮೂರು ದಿನಗಳೊಳಗೆ ತೆರೆವುಗೊಳಿಸದಿದ್ದರೆ ಅಥವಾ ಸ್ವಚ್ಛಗೊಳಿಸದಿದ್ದರೆ, ವಾಹನವನ್ನು ಪುರಸಭೆಯ ಅಲ್ ವತ್ಬಾ ಮುನಿಸಿಪಲ್ ಯಾರ್ಡ್‌ಗೆ ವರ್ಗಾಯಿಸಲ್ಪಡುತ್ತದೆ.

ವಾಹನವನ್ನು ಹಿಂಪಡೆಯಲು, ಪುರಸಭೆಗೆ 1500 ದಿರ್ಹಂ ದಂಡವನ್ನು ಪಾವತಿಸಬೇಕು. ಪುರಸಭೆಯ ಯಾರ್ಡ್‌ನಲ್ಲಿ 30 ದಿನಗಳಿಗಿಂತಲೂ ಹೆಚ್ಚು ಬಾಕಿಯಾದರೆ 3,000 ದಿರ್ಹಂಗಳನ್ನು ಪಾವತಿಸಬೇಕಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ವಾಹನಗಳನ್ನು ತೊಳೆದರೆ 500 ದಿರ್ಹಂ ದಂಡ ವಿಧಿಸಲಾಗುತ್ತದೆ. ಅಪರಾಧವನ್ನು ಪುನರಾವರ್ತಿಸಿದರೆ 1000 ದಿರ್ಹಂ ದಂಡ ಪಾವತಿಸಬೇಕಾಗುತ್ತದೆ. ನಿಮ್ಮ ಮನೆಯ ಹೊರಗೆ ಕಾರನ್ನು ತೊಳೆದುಕೊಳ್ಳುವುದು ಅಪರಾಧವಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!