ಕೆಸಿಎಫ್ ಬದಿಯ್ಯ ಸೆಕ್ಟರ್ ಗೆ ನೂತನ ಸಾರಥ್ಯ

ರಿಯಾದ್:.ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನಲ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಕೆಸಿಎಫ್ ಬದಿಯ್ಯ ಸೆಕ್ಟರ್ ಇದರ ಮಹ್ಲರತುಲ್ ಬದ್ರಿಯಾ ಮಜ್ಲಿಸ್ ಹಾಗೂ ವಾರ್ಷಿಕ ಮಹಾಸಭೆಯು ಸೆಕ್ಟರ್ ಅಧ್ಯಕ್ಷರಾದ ಉಮ್ಮರ್ ಹಾಜಿ ಅಳಕೆಮಜಲ್ ಇವರ ಅಧ್ಯಕ್ಷತೆಯಲ್ಲಿ ಬದಿಯ ಸಾರ ಹಂಝದಲ್ಲಿ ನಡೆಯಿತು.

ಶಿಫಾ ಯುನಿಟ್ ಕಾರ್ಯದರ್ಶಿ ಮುಕ್ತಾರ್ ತೋನ್ಸೆ ಖಿರಾಅತ್ ವಠಿಸಿ, ಕೆಸಿಎಫ್ ಶಾರ ಮದೀನಾ ಯುನಿಟ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಸಖಾಫಿ ಮಿತ್ತೂರು ರವರು ಕಾರ್ಯಕ್ರಮವನ್ನು ಉಧ್ಘಾಟಿಸಿದರು. ‘ಅಲೈಕುಂ ಬಿಲ್ ಜಮಾಅಃ’ ಎಂಬ ಘೋಷ ವಾಕ್ಯದಡಿಯಲ್ಲಿ ಝೋನಲ್ ನಾಯಕರಾದ ಮುಸ್ತಫ ಸಅದಿಯವರು ವಿಷಯ ಮಂಡಿಸಿದರು.

ಕಾರ್ಯದರ್ಶಿ ಬಶೀರ್ ಮೂರುಗೋಳಿ ವರದಿ ವಾಚಿಸಿ, ಹಮೀದ್ ಮಠ ಲೆಕ್ಕ ಪತ್ರ ವನ್ನು ಮಂಡಿಸಿದರು. ನಂತರ ಝೋನಲ್ ಚುನಾವಣಾ ನಿಯಂತ್ರಕರಾಗಿ ಆಗಮಿಸಿದ ಮುಸ್ತಫ ಸಅದಿ ಸೂರಿಕುಮೇರ್, ಇಬ್ರಾಹಿಂ ಮುರ, ಹಬೀಬ್ ಟಿಎಚ್ ರವರ ನೇತೃತ್ವದಲ್ಲಿ ಹಳೆಯ ಸಮಿತಿಯನ್ನು ಬರ್ಕಾಸ್ತುಗೊಳಿಸಿ ಹೊಸ ಸಮಿತಿಯನ್ನು ಆಯ್ಕೆ ಮಾಡಿದರು.

2019-2020ರ ನೂತನ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಮುಲ್ಕಿ, ಪ್ರಧಾನ ಕಾರ್ಯದರ್ಶಿಯಾಗಿ ಅಮೀರ್ ಕಲ್ಲಾಪು, ಕೋಶಾಧಿಕಾರಿಯಾಗಿ ಅಝಿಝ್ ನೆಕ್ಕಿಲ, ಸಂಘಟನಾ ಇಲಾಖೆ ಅಧ್ಯಕ್ಷರಾಗಿ ಹಮೀದ್ ಮಠ, ಕಾರ್ಯದರ್ಶಿ ಬಶೀರ್ ಮೂರುಗೋಳಿ, ಶಿಕ್ಷಣ ಇಲಾಖೆ ಅಧ್ಯಕ್ಷರಾಗಿ ಅಬೂಬಕ್ಕರ್ ಸಖಾಫಿ ಆಲಂಗಾರ್, ಕಾರ್ಯದರ್ಶಿ ರಮ್ಲ ಅಂಡಗೇರಿ, ಸಾಂತ್ವನ ಇಲಾಖೆ ಅಧ್ಯಕ್ಷರಾಗಿ ಖಲಂದರ್ ಶಾಫಿ ಮುರ, ಕಾರ್ಯದರ್ಶಿ ಮೊಯ್ದೀನ್ ಸುರತ್ಕಲ್, ಪ್ರಕಾಶನ ಇಲಾಖೆ ಅಧ್ಯಕ್ಷರಾಗಿ ಕಬೀರ್ ಕೃಷ್ಣಾಪುರ, ಕಾರ್ಯದರ್ಶಿ ರಿಯಾ ನೆಲ್ಯಾಡಿ, ಹಾಗೂ ಝೋನಲ್ ಕೌನ್ಸಿಲರ್ ಗಳಾಗಿ ಉಮ್ಮರ್ ಹಾಜಿ ಅಳಕೆಮಜಲ್, ಕಾದರ್ ಮಠ, ಮಜೀದ್ ವಿಟ್ಲ, ಯೂಸುಫ್ ಕಳಂಜಿಬೈಲ್, ಮತ್ತು ಅಬ್ದುಲ್ ಲತೀಫ್ ನೂಜಿ, ಇಲ್ಯಾಸ್ ಉಪ್ಪಳ, ಹಂಝ ತೋನಿಕೆರೆ, ರವೂಫ್ ಸಾಲೆತ್ತೂರು, ನಿಝಾರ್ ಕಟ್ಟ ಮುಂತಾದವರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.

ಅಬೂಬಕ್ಕರ್ ಸಖಾಫಿ ಆಲಂಗಾರ್ ಸ್ವಾಗತಿಸಿ ಸ್ವಾಗತಿಸಿ, ನೂತನ ಸಂಘಟನಾ ಕಾರ್ಯದರ್ಶಿ ಬಶೀರ್ ಮೂರುಗೋಳಿ ವಂದಿಸಿದರು.

ವರದಿ: ರಿಯಾ ನೆಲ್ಯಾಡಿ

Leave a Reply

Your email address will not be published. Required fields are marked *

error: Content is protected !!