ಕೆಸಿಎಫ್ ಜಿದ್ದಾ ಝೋನ್ ಗೆ ‌ನವ ಸಾರಥ್ಯ

ಜಿದ್ದಾ : ಕೆಸಿಎಫ್ ಸೌದಿ ಅರೇಬಿಯಾ ಜಿದ್ದಾ ಝೋನ್ ಇದರ ಮಹಾಸಭೆ ಕಾರ್ಯಕ್ರಮ ಸಯ್ಯಿದ್ ಝಕರಿಯ್ಯಾ ಸಖಾಫಿ ನಾವುಂದರವರ ದುಆದೊಂದಿಗೆ ಜಅಫರ್ ಸಖಾಫಿ ಕರಾಯ ಕಿರಾಅತ್ ಪಠಿಸಿದ ಮೂಲಕ ಝೋನ್ ಅಧ್ಯಕ್ಷರು ಹಾಫಿಲ್ ಜಿ.ಎಂ ಸುಲೈಮಾನ್ ಹನೀಫಿಯವರ ಅಧ್ಯಕ್ಷತೆಯಲ್ಲಿ ಇತೀಚೆಗೆ ಕೆಸಿಎಫ್ ಭವನ ಶರಫಿಯ್ಯಾದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ತ್ವೈಬಾ ಎಜ್ಯುಕೇಶನಲ್ ಸೆಂಟರ್ ಈಶ್ವರ ಮಂಗಳ ಇದರ ಪ್ರ.ಕಾರ್ಯದರ್ಶಿ ಹಾಗೂ ಮುಹಿಮ್ಮಾತ್ ಖುರ್’ಆನ್ ರಿಸರ್ಚ್‌ ಸೆಂಟರ್ ವೈಸ್ ಪ್ರಾಂಶುಪಾಲರೂ ಆದ ಅಬ್ದುಲ್ ಅಝೀಝ್ ಮಿಸ್ಬಾಹಿ ಉದ್ಘಾಟಿಸಿದರು.

ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಕಿನ್ಯಾ ವರದಿ ಹಾಗೂ ಕೋಶಾಧಿಕಾರಿ ಇಂಜಿನಿಯರ್ ಮುಹಮ್ಮದ್ ಕಲ್ಲರ್ಬೆ ಲೆಕ್ಕ ಪತ್ರ ವನ್ನು ಮಂಡಿಸಿದರು ಯಾವುದೇ ತಿದ್ದುಪಡಿಗಳಿಲ್ಲದೆ ಸಭೆಯಲ್ಲಿ ಅಂಗೀಕರಿಸಲಾಯಿತು ರೀ- ಓರ್ಗನೈಸಿಂಗ್ ಆಫೀಸರಾಗಿ ಆಗಮಿಸಿದ ನ್ಯಾಷನಲ್ ನಾಯಕರಾದ ಸಿದ್ದೀಖ್ ಸಖಾಫಿ ಪೆರುವಾಯಿ ಮತ್ತು ಸ್ವಾಲಿಹ್ ಬೆಳ್ಳಾರೆ ರವರ ನೇತೃತ್ವದಲ್ಲಿ ಹಳೆಯ ಸಮಿತಿಯನ್ನು ಬರ್ಕಾಸ್ತುಗೊಳಿಸಿ ಹೊಸ ಕಮಿಟಿಯನ್ನು ಆಯ್ಕೆ ಮಾಡಿದರು.

ಅಧ್ಯಕ್ಷರಾಗಿ CH ಅಬ್ದುಲ್ಲಾ ಸಖಾಫಿ ಕಳಂಜಿಬೈಲ್ (ಬೇಷ್), ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಕಿನ್ಯಾ (ಬವಾದಿ) ಮರು ಆಯ್ಕೆ, ಕೋಶಾಧಿಕಾರಿಯಾಗಿ ಸಿದ್ದೀಖ್ ಬಾಳೆಹೊನ್ನೂರು (ಶರಫಿಯ್ಯಾ) ನೆಮಕಗೊಂಡರು.

ಸಂಘಟನೆ ಇಲಾಖೆ ಅಧ್ಯಕ್ಷರಾಗಿ ಹನೀಫ್ ಸಖಾಫಿ ಬೊಳ್ಮಾರ್ (ಮಕ್ಕಾ), ಕಾರ್ಯದರ್ಶಿಯಾಗಿ ಖಾಲಿದ್ ಕಬಕ (ಖಮೀಸ್), ಶಿಕ್ಷಣ ಇಲಾಖೆ ಅಧ್ಯಕ್ಷರಾಗಿ ಶರೀಫ್ ಮುಸ್ಲಿಯಾರ್ ವಿಟ್ಲ (ಖಮೀಸ್), ಕಾರ್ಯದರ್ಶಿಯಾಗಿ ಇಯಾಸ್ ಸಅದಿ ಉಳ್ಳಾಲ (ಶರಫಿಯ್ಯಾ), ಸಾಂತ್ವನ ಇಲಾಖೆ ಅಧ್ಯಕ್ಷರಾಗಿ ಮೂಸಾ ಹಾಜಿ ಕಿನ್ಯಾ (ಮಕ್ಕಾ), ಕಾರ್ಯದರ್ಶಿಯಾಗಿ ಸುಲೈಮಾನ್ ಬಂಡಾಡಿ (ಬವಾದಿ), ಪ್ರಕಾಶನ ಇಲಾಖೆ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಉಳ್ಳಾಲ (ಮಕ್ಕಾ), ಕಾರ್ಯದರ್ಶಿಯಾಗಿ ಸಿದ್ದೀಖ್ ಕರೋಪಾಡಿ (ತ್ವಾಯಿಫ್), ಆಡಳಿತ ಇಲಾಖೆ ಅಧ್ಯಕ್ಷರಾಗಿ ಮುಹಮ್ಮದ್ ಕಲ್ಲರ್ಬೆ (ಬವಾದಿ), ಕಾರ್ಯದರ್ಶಿಯಾಗಿ ಶಂಸುದ್ದೀನ್ ಕುಂತೂರು (ರಹೇಲಿ), ಇಹ್ಸಾನ್ ಇಲಾಖೆ ಅಧ್ಯಕ್ಷರಾಗಿ ಕೆ.ಎಚ್ ಇಕ್ಬಾಲ್ ಮದನಿ ಪಾವೂರು (ತ್ವಾಯಿಫ್), ಕಾರ್ಯದರ್ಶಿಯಾಗಿ ಅಬ್ದುಲ್ಲಾ ಕಿನ್ಯಾ (ಮಕ್ಕಾ).

ಕಾರ್ಯಕಾರಿ ಸದಸ್ಯರಾಗಿ ಸಯ್ಯಿದ್ ಝಕರಿಯ್ಯಾ ಸಖಾಫಿ ನಾವುಂದ, ಜಿ.ಎಂ. ಸುಲೈಮಾನ್ ಹನೀಫಿ, ಯಹ್ಯಾ ಬಿಳಿಯೂರು, ಅಬ್ದುಲ್ ಸಲಾಂ ಎಣ್ಮೂರು, ಅಯ್ಯೂಬ್ ಕುಂದಾಪುರ, ಶುಕೂರ್ ನಾಳ, ಆಸಿಫ್ ತುರ್ಕಳಿಕೆ, ನಾಸಿರ್ ಹೆಚ್.ಕಲ್ಲು, ಇಲ್ಯಾಸ್ ಲತೀಪಿ ಮಂಜನಾಡಿ, ಶಬೀರ್ ಅರಸಿನಮಕ್ಕಿ, ಹಾಗೂ 7 ಸೆಕ್ಟರ್ ಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿಗಳನ್ನು ಪದನಿಮಿತ್ತ ಕಾರ್ಯಕಾರಿ ಸದಸ್ಯರಾಗಿ ಆಯ್ಕೆ ಮಾಡಿದರು.

ಈ ಸಂದರ್ಭದಲ್ಲಿ ಝೋನ್ ಮಟ್ಟದ ಇಶಾರ ಅಭಿಯಾನ 2019 ಯಶಸ್ಸಿಗೆ ಕಾರಣರಾದ ಸೆಕ್ಟರ್‌ಗಳಿಗೆ 6 ಚಿನ್ನದ ನಾಣ್ಯ ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ದಾರುಲ್ ಇರ್ಷಾದ್ ಆರ್ಗನೈಝರ್ ಉಮರ್ ಮದನಿ ಖಾಮಿಲ್ ಸಖಾಫಿ ಪರಪ್ಪು ಹಾಗೂ ಮಕ್ಕತುಲ್ ಮುಕರ್ರಮಃ, ಶರಫಿಯ್ಯಾ, ಬವಾದಿ, ತ್ವಾಯಿಫ್, ಬೇಷ್, ಖಮಿಸ್ ಮುಷಯತ್, ರಹೇಲಿ ಸೆಕ್ಟರ್ ಪ್ರತಿನಿಧಿಗಳು ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಇಕ್ಬಾಲ್ ಕಕ್ಕಿಂಜೆ ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಕಿನ್ಯಾ ಧನ್ಯವಾದ ಗೈದರು.

Leave a Reply

Your email address will not be published. Required fields are marked *

error: Content is protected !!