janadhvani

Kannada Online News Paper

ಸೌದಿ ಅರೇಬಿಯಾದ ಜುಬೈಲ್ ಸಮೀಪ ಗುಂಡಿನ ದಾಳಿ-ಇಬ್ಬರ ಹತ್ಯೆ

ರಿಯಾದ್: ಭಾರೀ ಶಸ್ತ್ರಾಸ್ತ್ರಗಳೊಂದಿಗೆ ನಾಲ್ವರು ದಾಳಿಕೋರರಿಂದ ಜುಬೈಲ್’ನ ಅಬು ಹದ್ರಿಯಾದ ಚೆಕ್ ಪಾಯಿಂಟ್ ಒಂದರಲ್ಲಿ ಗುಂಡಿನ ದಾಳಿ ನಡೆದಿದ್ದು, ಭದ್ರತಾ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ ಇಬ್ಬರು ದಾಳಿಕೋರರು ಹತ್ಯೆ ಗೊಂಡಿದ್ದಾರೆ.

ಘಟನೆಯಲ್ಲಿ ಇಬ್ಬರು ಭದ್ರತಾ ಪಡೆಗಳಿಗೆ ಗಾಯಗಳಾಗಿದ್ದು. ಇಬ್ಬರು ದಾಳಿಕೋರರು ಹತರಾಗಿದ್ದಾರೆ.ಇತರ ಇಬ್ಬರು ದಾಳಿಕೋರರನ್ನು ಸೌದಿ ಭದ್ರತಾ ಪಡೆಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ದಾಳಿಕೋರರು ಖತೀಫ್’ನವರಾಗಿದ್ದು, ವಾಂಟೆಡ್‌ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದರು. ಸೌದಿ ಅರೇಬಿಯಾದಿಂದ ಹೊರ ದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದರು ಎಂದು ಸೌದಿ ಅರೇಬಿಯಾದ ಮಾಧ್ಯಮ ಮೂಲಗಳು ವರದಿ ಮಾಡಿದೆ.

error: Content is protected !! Not allowed copy content from janadhvani.com