janadhvani

Kannada Online News Paper

ವೀಸಾ ವಂಚನೆ- ಜಾಗರೂಕರಾಗುವಂತೆ ದುಬೈ ಎಮಿಗ್ರೇಷನ್ ಇಲಾಖೆ ಎಚ್ಚರಿಕೆ

ದುಬೈ: ಸಾಮಾಜಿಕ ಮಾಧ್ಯಮದ ಮೂಲಕ ನಡೆಸಲಾಗುವ ವೀಸಾ ವಂಚನೆಗಳ ಬಗ್ಗೆ ಜಾಗರೂಕರಾಗುವಂತೆ ದುಬೈ ಎಮಿಗ್ರೇಷನ್ ಇಲಾಖೆಯು ಎಚ್ಚರಿಕೆಯನ್ನು ನೀಡಿದೆ.

ನಕಲಿ ವೀಸಾ ಜಾಹಿರಾತು ಮತ್ತು ಉದ್ಯೋಗದ ಭರವಸೆಗಳಿಂದ ನೂರಾರು ಜನರು ವಂಚಿತರಾದ ಹಿನ್ನೆಲೆಯಲ್ಲಿ ಆ ಬಗ್ಗೆ ಖಾತರಿಪಡಿಸಬೇಕು ಎಂದು ವಲಸೆ ಇಲಾಖೆ ಸಲಹೆ ನೀಡಿದೆ.

ಅನಧಿಕೃತ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ನಂತಹ ಸಾಮಾಜಿಕ ಮಾಧ್ಯಮ ಸೈಟ್ಗಳಲ್ಲಿ ಕಂಡುಬರುವ ಕೆಲಸದ ಜಾಹೀರಾತುಗಳಿಂದ ವಂಚಿತರಾಗುವವರ ಸಂಖ್ಯೆಯು ಮಿತಿಮೀರುತ್ತಿದೆ. ಏಷ್ಯನ್ ದೇಶಗಳ ಹಲವಾರು ಮಂದಿ ಈ ವಂಚನಾ ಜಾಲಕ್ಕೆ ಸಿಲುಕಿದ್ದು, ಸಾಮಾಜಿಕ ಮಾಧ್ಯಮಗಳಿಗೆ ಪ್ರಾಧಾನ್ಯತೆ ನೀಡುವುದೇ ವಂಚಿರಾಗಲು ಕಾರಣ ಎಂದು ವಲಸೆ ಇಲಾಖೆಯ ಮುಖ್ಯಸ್ಥ ಬ್ರಿಗೇಡಿಯರ್ ಜನರಲ್ ಖಲಫ್ ಅಲ್-ಘೈಶ್ ವ್ಯಕ್ತಪಡಿಸಿದ್ದಾರೆ.

ಸಂದರ್ಶಕರು ಮತ್ತು ಮೂಲ ನಿವಾಸಿಗಳೂ ಮೋಸಹೋಗಿದ್ದು, ನಲಿ ಸಂಸ್ಥೆಗಳ ಭರವಸೆಯಲ್ಲಿ ಸಿಲುಕಿ ಹಲವರು ಹಣವನ್ನು ಕಳೆದುಕೊಳ್ಳುವ ದುರಂತಕ್ಕೆ ಸಿಲುಕಿದ್ದಾರೆ. ಅನಧಿಕೃತ ವೀಸಾ ಸಂಸ್ಥೆಗಳನ್ನು ಸಮೀಪಿಸದಂತೆ ಎಮಿಗ್ರೇಶನ್ ಡೈರೆಕ್ಟರ್ ಕರೆ ನೀಡಿದ್ದಾರೆ.

ದುಬೈಯಲ್ಲಿ 584ಕ್ಕಿಂತಲೂ ಹೆಚ್ಚಿನ ಸಂಸ್ಥೆಗಳಲ್ಲಿ ವಲಸೆ ವಿಭಾಗವು ಹುಡುಕಾಟ ನಡೆಸಿದ್ದು, ಅದರಲ್ಲಿ ವರ್ಷದಲ್ಲಿ 119 ಪ್ರವಾಸಿ ಕಂಪನಿಗಳು ಅನಧಿಕೃತ ವ್ಯವಹಾರ ನಡುಸುತ್ತಿರುವುದನ್ನು ಪತ್ತೆ ಹಚ್ಚಿದೆ. ಸಂದರ್ಶಕ ವೀಸಾದಲ್ಲಿರುವವರನ್ನು ಕೆಲಸಕ್ಕೆ ನೇಮಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಮಿಗ್ರೇಷನ್ ಅಧಿಕಾರಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com