janadhvani

Kannada Online News Paper

ಮಾನದಂಡಗಳನ್ನು ಪಾಲಿಸುವ ಆ್ಯಪ್ ಗಳಲ್ಲಿ ಧ್ವನಿ ಕರೆಗಳನ್ನು ಅನುಮತಿಸಲಾಗಿದೆ- ಸೌದಿ ಟೆಲಿಕಾಂ ಅಥಾರಿಟಿ

ರಿಯಾದ್: ಸೌದಿ ಅರೇಬಿಯಾದ ನಿಯಮಗಳಿಗೆ ಬದ್ದವಾಗಿರದೆ ವಾಟ್ಸ್ಆ್ಯಪ್ ಮೂಲಕ ಧ್ವನಿ ಕರೆ ಸೇವೆಯನ್ನು ಅನುಮತಿಸಲಾಗುವುದಿಲ್ಲ ಎಂದು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಆಯೋಗವು ತಿಳಿಸಿದೆ. ಕಳೆದ ವಾರ ಧ್ವನಿ ಕರೆ ಸೌದಿಯಲ್ಲಿ ಲಭ್ಯವಾಗಿತ್ತು ಆದರೆ, ನಂತರ ಅದನ್ನು ನಿರ್ಬಂಧಿಸಲಾಯಿತು.

ಇಂಟರ್ನೆಟ್ ಬಳಸಿ ವಾಯ್ಸ್ ಮತ್ತು ವೀಡಿಯೊ ಕರೆ ಸೇವೆಯನ್ನು ವಾಟ್ಸ್ ಆ್ಯಪ್‌ಗೆ ಅನುಮತಿಸಲಾಗಿಲ್ಲ ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಮತ್ತು ಮಾಹಿತಿ ತಂತ್ರಜ್ಞಾನ ಕಮಿಷನ್ ಗವರ್ನರ್ ಅಬ್ದುಲ್ ಅಝೀಝ್ ಅಲ್ ರುವೈಸ್ ಹೇಳಿದರು. ಮಾನದಂಡಗಳನ್ನು ಪಾಲಿಸುವ ಅಪ್ಲಿಕೇಶನ್ ಗಳಿಗೆ ಧ್ವನಿ ಕರೆಗಳನ್ನು ಅನುಮತಿಸಲಾಗಿದೆ. ಅನ್ ಲಿಮಿಟೆಡ್ ಪ್ರಿಪೇಡ್ ಸಿಮ್ ಕಾರ್ಡ್ ಗಳನ್ನೂ ದೇಶದಲ್ಲಿ ನಿಷೇಧಿಸಲಾಗಿಲ್ಲ ಎಂದು ಅವರು ಹೇಳಿದರು.

ಹೊಸ ದೂರಸಂಪರ್ಕ ಕಂಪನಿಗಳಿಗೆ ಪರವಾನಗಿಗಳನ್ನು ಅನುಮತಿಸಲು ಯಾವುದೇ ಉದ್ದೇಶವಿಲ್ಲ. ಈ ಬಗ್ಗೆ ವಿಸ್ತೃತವಾದ ಅಧ್ಯಯನದ ಅಗತ್ಯವಿದೆ. ಹೊಸ ಟೆಲಿಕಾಂ ಕಂಪನಿಗಳು ಮಾರುಕಟ್ಟೆಯಲ್ಲಿ ಅಗತ್ಯವಿದ್ದರೆ, ಪರವಾನಗಿಗಳನ್ನು ನೀಡಲಾಗುವುದು.

ಮೊಬೈಲ್ ಫೋನ್ ಇಂಟರ್ನೆಟ್ ಡೌನ್ಲೋಡ್ ವೇಗವು ಪ್ರತಿ ಸೆಕೆಂಡಿಗೆ 31.06 mb ಗೆ ಏರಿಕೆಯಾಗಿದೆ. ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ಸೆಕೆಂಡಿಗೆ ಸರಾಸರಿ 25.27 mb ಆಗಿದ್ದು, ಸೌದಿ ಅರೇಬಿಯಾ ಇಂಟರ್ನೆಟ್ ವೇಗದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದೆ. 5 ಜಿ ನೆಟ್ವರ್ಕ್ ಪ್ರಯೋಗಗಳಿಗೆ ತಾತ್ಕಾಲಿಕ ಪರವಾನಗಿ ನೀಡಲಾಗಿದೆ ಎಂದು ಆಯೋಗ ಹೇಳಿದೆ.

error: Content is protected !! Not allowed copy content from janadhvani.com