janadhvani

Kannada Online News Paper

ಈ ವರದಿಯ ಧ್ವನಿಯನ್ನು ಆಲಿಸಿ


ನವದೆಹಲಿ: ಭಾರತದಲ್ಲಿ ಕತರ್ ಆರಂಭಿಸಲು ಉದ್ದೇಶಿಸಿರುವ ವೀಸಾ ಕೇಂದ್ರಗಳ ಪೈಕಿ ಪ್ರಥಮ ಕೇಂದ್ರವನ್ನು ದೆಹಲಿಯಲ್ಲಿ ಉದ್ಘಾಟಿಸಲಾಯ್ತು. ಕತರ್ ನಲ್ಲಿ ಲಭ್ಯವಾಗಲಿರುವ ಉದ್ಯೋಗಿಗಳ ಪೂರ್ಣ ವೀಸಾ ಪ್ರಕ್ರಿಯೆ ಈ ಕೇಂದ್ರದಲ್ಲಿ ಪೂರ್ಣಗೊಳ್ಳಲಿದೆ.

ಭಾರತದ ಏಳು ರಾಜ್ಯಗಳಲ್ಲಿ ಕತಾರ್ ಈ ರೀತಿಯ ಕೇಂದ್ರಗಳನ್ನು ಪ್ರಾರಂಭಿಸಲಿದ್ದು, ದೆಹಲಿಯಲ್ಲಿ ಮೊದಲನೆಯ ಕೇಂದ್ರ ಪ್ರಾರಂಭವಾಗಿದೆ. ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರತಿನಿಧಿಗಳು ಭಾರತದಲ್ಲಿನ ಕತರ್ ರಾಯಭಾರಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

ಈ ಮೂಲಕ ದೆಹಲಿ ಮತ್ತು ನೆರೆಯ ರಾಜ್ಯಗಳ ಉದ್ಯೋಗಿಗಳ ಸಂಪೂರ್ಣ ವೀಸಾ ಪ್ರಕ್ರಿಯೆಗೆ ಈ ಕೇಂದ್ರ ನೆರವಾಗಲಿದೆ.
ಸಹಿ ಒಪ್ಪಂದ, ಪ್ರಮಾಣಪತ್ರ ಪರೀಕ್ಷೆಗಳು, ವೈದ್ಯಕೀಯ ಪರೀಕ್ಷೆ, ಬೆರಳಚ್ಚುಗಳು ಮತ್ತು ಇತರ ಸೇವೆಗಳು ದೆಹಲಿಯ ವೀಸಾ ಕೇಂದ್ರದಲ್ಲಿ ಲಭ್ಯವಿರಲಿದ್ದು, ಅರೆಬಿಕ್, ಇಂಗ್ಲಿಷ್ ಭಾಷೆಗಳ ಹೊರತಾಗಿ, ಹಿಂದಿಯಲ್ಲಿ ಕೂಡ ಈ ಕೇಂದ್ರದಲ್ಲಿ ಸೇವೆ ಲಭ್ಯವಿದೆ.

ದೆಹಲಿ ನಂತರ ಮುಂಬೈನಲ್ಲಿ ಕಾರ್ಯಾಲಯ ಕಾರ್ಯನಿರ್ವಹಿಸಲಿದ್ದು, ನಂತರ ಚೆನ್ನೈ, ಹೈದರಾಬಾದ್, ಕೊಚ್ಚಿ, ಲಕ್ನೋ, ಕೋಲ್ಕತ್ತಾದಲ್ಲೂ ಮುಂದಿನ ತಿಂಗಳಿನಿಂದ ಕೇಂದ್ರಗಳು ಆರಂಭವಾಗಲಿವೆ. ಕತಾರ್ ಉದ್ಯೋಗ ಹುಡುಕುವವರು ಮತ್ತು ಕಂಪನಿಗಳಿಗೆ ಆರಾಮದಾಯಕವಾದ ರೀತಿಯಲ್ಲಿ ವೀಸಾ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸಲಿವೆ.

ಕಾರ್ಯವಿಧಾನಗಳನ್ನು ಸುಲಭಗೊಳಿಸುವ ಮತ್ತು ವೀಸಾ ವಂಚನೆಗಳನ್ನು ತಡೆಯುವ ಉದ್ದೇಶಕ್ಕಾಗಿ ಕಳೆದ ವರ್ಷ, ಕತಾರ್ ವೀಸಾ ಕೇಂದ್ರಗಳನ್ನು ಘೋಷಿಸಿತು. ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಅಕ್ಟೋಬರ್ ನಲ್ಲಿ ಮೊದಲ ಕೇಂದ್ರ ಪ್ರಾರಂಭಗೊಂಡಿದೆ.

error: Content is protected !! Not allowed copy content from janadhvani.com