janadhvani

Kannada Online News Paper

ಕೆ.ಸಿ.ಎಫ್ ನೂತನ ಸಿತ್ತೀನ್ ಯೂನಿಟ್ ಅಸ್ತಿತ್ವಕ್ಕೆ

ಜಿದ್ದಾ: ಕೆ.ಸಿ.ಎಫ್ ಜಿದ್ದಾ ಝೋನಿನ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಅಧೀನದಲ್ಲಿ ನೂತನ ಸಿತ್ತೀನ್ ಯೂನಿಟ್ ರಚನೆ ಹಾಗೂ ಆತ್ಮೀಯ ಮಜ್ಲಿಸ್ ಸೆಕ್ಟರ್ ಅಧ್ಯಕ್ಷರು ಹನೀಫ್ ಸಖಾಫಿ ಬೊಳ್ಮಾರ್ ರವರ ಅಧ್ಯಕ್ಷತೆಯಲ್ಲಿ ಸಿತ್ತೀನ್ ಅಲ್ ಬೈಕ್ ಮುಂಬಾಗದಲ್ಲಿರುವ ಬಿಲ್ಡಿಂಗ್ ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ನಝೀರ್ ಸೂರಿಂಜೆ ಉದ್ಘಾಟಿಸಿದರು. ಕೆಸಿಎಫ್ ನಲ್ಲಿ ಹೇಗೆ ಕಾರ್ಯಚರಿಸಬೇಕು, ಕೆಸಿಎಫ್ ನ ಮಹತ್ವ ಇನ್ನಿತರ ವಿಷಯವನ್ನು ಹನೀಫ್ ಸಖಾಫಿ ಬೊಳ್ಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಂತರ ಸೆಕ್ಟರ್ ನಿಂದ R.O ಆಗಿ ಆಗಮಿಸಿದ ಇಕ್ಬಾಲ್ ಕಕ್ಕಿಂಜೆ ನೂತನ ಪದಾಧಿಕಾರಿಗಳನ್ನು ಘೋಷಣೆ ಮಾಡಿದರು.

ಅಧ್ಯಕ್ಷರಾಗಿ ನಝೀರ್ ಸೂರಿಂಜೆ, ಪ್ರ.ಕಾರ್ಯದರ್ಶಿ ಅಬ್ದುರ್ರಹ್ಮಾನ್ ಸಂಸೆ, ಕೋಶಾಧಿಕಾರಿ ಅಬ್ದುರ್ರಹ್ಮಾನ್ ಕರೋಪಾಡಿ, ಉಪಾಧ್ಯಕ್ಷರುಗಳಾಗಿ ಕಬೀರ್ ಬಾಜಾರ್, ಮುಹಮ್ಮದ್ ಗಂಟಲ್ಕಟೆ. ಕಾರ್ಯದರ್ಶಿಗಳಾಗಿ ಉಸ್ಮಾನ್ ಪಡುಬಿದ್ರಿ, ಸುಮೀರ್ ಹಾಸನ. ಕಾರ್ಯಕಾರಿ ಸದಸ್ಯರಾಗಿ ಇಕ್ಬಾಲ್ ಕಕ್ಕಿಂಜೆ, ಅಬ್ದುಲ್ ಹಮೀದ್ ಉಳ್ಳಾಲ, ಮೊಯಿದಿನ್ ಕಾಜೂರು, ಅಕ್ಬರ್ ಅಲಿ ಮಾಚಾರ್, ರವೂಫ್ ಪೈಂಬೆಚ್ಚಾಲ್, ನವಾಝ್ ಕಾಜೂರು, ಅಬ್ದುಲ್ ಖಾದರ್ ಪಜೀರ್, ಮುಹಮ್ಮದ್ ಕುಂಞಿ ಸರಳಿಕಟ್ಟೆ, ಬಿಲಾಲ್ ಕೆರೆಬಳಿ ರವಗಳನ್ನು ಆಯ್ಕೆ ಮಾಡಲಾಯಿತು.

ಈ ವೇಳೆ ಮುಹಮ್ಮದ್ ಗಂಟಲ್ಕಟೆಯವರು ಶುಭ ಹಾರೈಸಿ ಮಾತನಾಡಿದರು.
ಕಾರ್ಯಕ್ರಮವನ್ನು ಯೂನಿಟ್ ನೂತನ ಪ್ರ.ಕಾರ್ಯದರ್ಶಿ ಅಬ್ದುರ್ರಹ್ಮಾನ್ ಸಂಸೆ ಸ್ವಾಗತಿಸಿ, ಕೋಶಾಧಿಕಾರಿ ಅಬ್ದುರ್ರಹ್ಮಾನ್ ಕರೋಪಾಡಿ ಧನ್ಯವಾದ ಸಲ್ಲಿಸಿದರು

error: Content is protected !! Not allowed copy content from janadhvani.com