janadhvani

Kannada Online News Paper

ದೇರಳಕಟ್ಟೆ: ಫಹಿಮಾ ಹಜ್ಜ್ ಉಮ್ರಾ ಟ್ರಾವೆಲ್ಸ್ ಆಫೀಸ್ ಗೆ ಎ.ಪಿ.ಉಸ್ತಾದ್ ಭೇಟಿ

ದೇರಳಕಟ್ಟೆ: ದೇರಳಕಟ್ಟೆಯಲ್ಲಿ ಕಳೆದ ಐದು ವರ್ಷಗಳಿಂದ ಉತ್ತಮ ಸೇವೆ ಯೊಂದಿಗೆ ಉಮ್ರಾ ಯಾತ್ರಾರ್ಥಿಗಳ ಮನೆ ಮಾತಾಗಿರುವ ಫಹಿಮಾ ಇಂಟರ್ ನ್ಯಾಷನಲ್ ಹಜ್ಜ್ ಉಮ್ರಾ ಟೂರ್ಸ್ & ಟ್ರಾವೆಲ್ಸ್ ಆಫೀಸ್ ಗೆ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ. ಪಿ ಉಸ್ತಾದ್ ಭೇಟಿ ಕೊಟ್ಟು ದುಆಃ ಮಾಡಿ ಶುಭ ಹಾರೈಸಿದರು.

ಉಸ್ತಾದರನ್ನು ನೂರಾರು ಸುನ್ನಿ ಕಾರ್ಯಕರ್ತರ ತಕ್ಬೀರ್ ಧ್ವನಿಗಳೊಂದಿಗೆ ಫಹಿಮಾ ಟ್ರಾವೆಲ್ಸ್ ನ M.D ಮಹ್ಸೂಖ್ ದೇರಳಕಟ್ಟೆ, ಅಮೀರ್ ಗಲಾದ ಅಬ್ದುಲ್ ಅಝೀಝ್ ಝುಹ್ರಿ ಕಿಲ್ಲೂರು, ಇಲ್ಯಾಸ್ ಸಖಾಫಿ ಬರಮಾಡಿಕೊಂಡರು. ಹಾಗೂ ಉಸ್ತಾದರೊಂದಿಗೆ ಡಾ. ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಕಕ್ಕಿಂಜೆ, ಹಾಫಿಲ್ ಅಬ್ದುಲ್ ಮಜೀದ್ ಸಖಾಫಿ ಗಾಣೆಮಾರ್, ಪರಪ್ಪು ಸಖಾಫಿ, ಇಸ್ಮಾಯಿಲ್ ಜಸ್ಮೀನ್, ಹಕೀಮ್ ದಾನಿಶ್, ಹನೀಫ್ ಬದ್ಯಾರ್, ಸುಹೈಲ್ S.M, ಅರಫತ್ S.M, ಅಶ್ರಫ್ H.H ಹಾಗು ಇನ್ನಿತರ ಉಲಮಾ ಉಮರಾ ನೇತಾರರು ‌ಭಾಗವಹಿಸಿದ್ದರು.

error: Content is protected !! Not allowed copy content from janadhvani.com