janadhvani

Kannada Online News Paper

ಕರ್ನಾಟಕ ಬಂದ್ ಮುಂದೂಡಿಕೆ- ಫೆ.19ರಂದು ಕರಾಳ ದಿನಾಚರಣೆ

ಬೆಂಗಳೂರು: ಪುಲ್ವಾಮದಲ್ಲಿ ಭಾರತೀಯ ಯೋಧರ ಮೇಲಿನ ಉಗ್ರದಾಳಿಯನ್ನು ಖಂಡಿಸಿ ಫೆಬ್ರವರಿ 19ರಂದು ವಾಟಾಳ್ ಪಕ್ಷವು ಕರೆನೀಡಿದ್ದ ರಾಜ್ಯ ಬಂದ್ ಅನ್ನು ಕೈ ಬಿಡಲಾಗಿದೆ.

ಧರ್ಮಸ್ಥಳದಲ್ಲಿ ಬಾಹುಬಲಿಗೆ ಮಹಾಮಸ್ತಕಾಭಿಷೇಕ ಮತ್ತು ಕುಂಭ ಮೇಳ ನಡೆಯುತ್ತಿರುವ ಹಿನ್ನಲೆಯಲ್ಲಿ ರಾಜ್ಯದ ಜನತೆಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಮಂಗಳವಾರ ನಡೆಸಲುದ್ದೇಶಿಸಲಾಗಿರುವ ರಾಜ್ಯ ಬಂದ್ ಅನ್ನು ಮುಂದೂಡಲಾಗಿದೆ ಎಂದು ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರು ತಿಳಿಸಿದ್ದಾರೆ.

ಮಂಗಳವಾರದಂದು ರಾಜ್ಯ ಬಂದ್ ಇರುವುದಿಲ್ಲ ಬದಲಾಗಿ ಕಪ್ಪುಪಟ್ಟಿ ಧರಿಸಿ ಕರಾಳ ದಿನಾಚರಣೆಯನ್ನು ನಡೆಸಲಾಗುವುದು ಎಂದು ವಾಟಾಳ್ ನಾಗರಾಜ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

error: Content is protected !! Not allowed copy content from janadhvani.com