ವೈಯಕ್ತಿಕ ಪ್ರಾಯೋಜಕತ್ವ ವ್ಯವಸ್ಥೆಯನ್ನು ರದ್ದು ಪಡಿಸಲು ಆಗ್ರಹ

ಕುವೈತ್ ಸಿಟಿ: ದೇಶದಲ್ಲಿ ಅಸ್ತಿತ್ವದಲ್ಲಿರುವ ವೈಯಕ್ತಿಕ ಪ್ರಾಯೋಜಕತ್ವ ವ್ಯವಸ್ಥೆಯನ್ನು ಆದಷ್ಟು ಬೇಗ ನಿಲ್ಲಿಸುವಂತೆ ಕುವೈಟ್ ಮಾನವ ಹಕ್ಕುಗಳ ಸಂಘವು ಸರಕಾರವನ್ನು ಒತ್ತಾಯಿಸಿದೆ.

ದೇಶದ ಅಭಿಮಾನಕ್ಕೆ ಕುಂದು ಉಂಟುಮಾಡಬಲ್ಲ ಸಂಪ್ರದಾಯವು ಅಂತರಾಷ್ಟ್ರೀಯ ಮಾನದಂಡಗಳಿಗೆ ಹೊಂದಿಕೆಯಾಗುವುದಿಲ್ಲ ಮತ್ತು ಅದು ವಿವಾದಗಳನ್ನು ಉಂಟುಮಾಡುತ್ತದೆ ಎಂದು ಮಾನವ ಹಕ್ಕುಗಳ ಸಂಘವು ಸಮರ್ಪಿಸಿದ ವರದಿಯಲ್ಲಿ ತಿಳಿಸಿದೆ.

ಪಾರದರ್ಶಕ ಮತ್ತು ನ್ಯಾಯೋಚಿತ ಪರ್ಯಾಯ ವ್ಯವಸ್ಥೆಯನ್ನು ಅಳವಡಿಸುವಂತೆ ಪ್ರಸ್ತಾಪಿಸಿರುವ ವರದಿಯಲ್ಲಿ, ವಿದೇಶಿ ನೌಕರರ ಹಕ್ಕುಗಳನ್ನು ರಕ್ಷಿಸುವ ನೇಮಕಾತಿ ಕಾರ್ಯವಿಧಾನವನ್ನು ಕೂಡ ಜಾರಿಗೊಳಿಸಬೇಕು ಎಂದಿದೆ. ಮನೆಯ ಕೆಲಸಗಾರರು ಕೆಲಸ ಸ್ಥಳಗಳಲ್ಲಿ ಅನುಭವಿಸುತ್ತಿರುವ ಶೋಷಣೆಗಳನ್ನು ಕೊನೆಗೊಳಿಸಬೇಕು.ಅವರ ಪಾಸ್ಪೋರ್ಟ್ ಅನ್ನು ತಡೆದಿಡಬಾರದು, ಅವರ ವಾರಾಂತ್ಯ ಮತ್ತು ವಾರ್ಷಿಕ ರಜಾದಿನಗಳನ್ನು ನಿರಾಕರಿಸ ಬಾರದು.

ವಿದೇಶಿ ಕಾರ್ಮಿಕರ ಹಕ್ಕುಗಳನ್ನು ನಿರಾಕರಿಸದಿರುವಂತೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕೆಲಸದ ಸ್ಥಳಗಳನ್ನು ಪರಿಶೀಲಿಸಬೇಕು. ವಿದೇಶಿ ನೌಕರರ ಹಕ್ಕನ್ನು ನಿರಾಕರಿಸುವ ಮಾಲೀಕರಿಗೆ ದಂಡಗಳನ್ನು ಅನುಷ್ಠಾನಗೊಳಿಸಬೇಕು ಮುಂತಾದ ಪ್ರಸ್ತಾಪಗಳನ್ನು ಸಮಿತಿಯು ಸರಕಾರಕ್ಕೆ ಸಲ್ಲಿಸಿದೆ.

Leave a Reply

Your email address will not be published. Required fields are marked *

error: Content is protected !!