ಬೆಂಗಳೂರು:ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ರಾಜ್ಯ ಪ್ರತಿನಿಧಿ ಸಮಾವೇಶ ಉಂದುಲುಸ್-2019 ಕಾರ್ಯಕ್ರಮವು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ನಿಕಟಪೂರ್ವ ಅಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಡಗುರವರ ಅಧ್ಯಕ್ಷತೆಯಲ್ಲಿ ಎರಡು ದಿನಗಳಲ್ಲಿ ಖುದ್ದೂಸ್ ಈದ್ಗಾ ಮೈದಾನ ಬೆಂಗಳೂರಿನಲ್ಲಿ ಅದ್ದೂರಿಯಿಂದ ನಡೆಯಿತು.ಜನವರಿ 26 ರಂದು ಬೆಳಿಗ್ಗೆ 9:00ಗಂಟೆಗೆ ಜಲಾಲುದ್ದೀನ್ ಮುಸ್ಲಿಯಾರ್ ಉಸ್ತಾದರು ರಾಷ್ಟ್ರ ಧ್ವಜವನ್ನು ಆರೋಹಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಎಸ್ಸೆಸ್ಸೆಫ್ 30 ನೇ ವರ್ಷದ ಸಂಭ್ರಮಾಚರಣೆಯಲ್ಲಿರುವುದರಿಂದ 30 ಎಸ್ಸೆಸ್ಸೆಫ್ ದ್ವಜಗಳನ್ನು ಎಸ್ಸೆಸ್ಸೆಫ್ ನ ಗತಕಾಲ ನಾಯಕರು ಆರೋಹಣ ಮಾಡಿದರು.
ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ಸಯ್ಯದ್ ಸಿ.ಟಿ.ಎಮ್ ಉಮ್ಮರ್ ಸಖಾಫಿ ತಂಙಳ್ ಮನ್ಶರ್ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾ ಅಧ್ಯಕ್ಷ ತಾಜುಲ್ ಪುಖಹಾಹ್ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್,ಮಂಜನಾಡಿ ಅಲ್-ಮದೀನಾ ಶಿಲ್ಪಿ ಶರಪುಲ್ ಉಲಮಾ ಅಬ್ಬಾಸ್ ಉಸ್ತಾದ್, ಡಾ ಹಕೀಂ ಅಝ್ಹರಿ , ಇಸ್ಮಾಯಿಲ್ ವಫಾ ಸರ್, ಎಸ್.ಪಿ.ಹಂಝ ಸಖಾಫಿ ಬಂಟ್ವಾಳ, ಉಮರ್ ಸಖಾಫಿ ಎಡಪ್ಪಾಲ, ಡಾ ಫಾರೂಖ್ ನಯೀಮಿ ಕೊಲ್ಲಂ ಮೊದಲಾದವರು ರಾಜ್ಯದ 30 ಜಿಲ್ಲೆಗಳಿಂದ ಬಂದ ಆಯ್ದ 3000 ಪ್ರತಿನಿಧಿಗಳಿಗೆ ತರಗತಿಯನ್ನು ನಡೆಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಸ್ವಾಗತಿಸಿದರು.ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ವಂದಿಸಿದರು.
ಜನವರಿ 27 ಮದ್ಯಾಹ್ನ 12:00 ಗಂಟೆಗೆ ನಡೆದ ಸಮರೋಪ ಸಮಾರಂಭವನ್ನು ಬದ್ರುಸ್ಸಾದಾತ್ ಇಬ್ರಾಹಿಂ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಉದ್ಘಾಟಿಸಿದರು.
ದ.ಕ ಜಿಲ್ಲಾ ಸಂಯುಕ್ತ ಖಾಝಿ ಖುರ್ರತುಸ್ಸಾದಾತ್ ಕೂರತ್ ತಂಙಳ್ ದುಆ:ನೆರವೇರಿಸಿದರು.ಅಖಿಲ ಭಾರತ ಜಂ ಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಮುಖ್ಯ ಪ್ರಭಾಷಣ ನಡೆಸಿದರು.
ಎಸ್.ಎಸ್. ಎ ಖಾದರ್ ಹಾಜಿ ಬೆಂಗಳೂರು,ಮಾಜಿ ಸಚಿವ ರೋಷಣ್ ಬೇಗ್,ಕೊಡಗು ಸಹಾಯಕ ಖಾಝಿ ಎಡಪ್ಪಾಲ ಉಸ್ತಾದ್,ಸಯ್ಯದ್ ಹಾಮಿಮ್ ತಂಙಳ್ ಚಿಕ್ಕಮಂಗಳೂರು,ಎಂ.ಎಸ್.ಎಂ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ಜಿ.ಎಂ ಮಹಮ್ಮದ್ ಕಾಮಿಲ್ ಸಖಾಫಿ, ಶಾಫಿ ಸಅದಿ ಬೆಂಗಳೂರು, ಹಮೀದ್ ಬಜ್ಪೆ, ಯಾಕೂಬ್ ಯೂಸುಫ್ ಹೊಸನಗರ, ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು , ಕೆ.ಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಸಂದೇಶ ಭಾಷಣ ಮಾಡಿದರು.
ಎಸ್ಸೆಸ್ಸೆಫ್ ರಾಜ್ಯ ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ನಾವುಂದ ಸ್ವಾಗತಿಸಿದರು.ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಳ್ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ ವಂದಿಸಿದರು.