ಅಬುಧಾಬಿ: ಸಂಬಳ ನೀಡಲು ಎರಡು ತಿಂಗಳ ವಿಳಂಬ ಉಂಟಾದಲ್ಲಿ, ಕಂಪೆನಿ ಮುಚ್ಚಲ್ಪಟ್ಟಲ್ಲಿ ಪ್ರಾಯೋಜಕರ ಅನುಮತಿಯಿಲ್ಲದೆ ಕಾರ್ಮಿಕರಿಗೆ ಹೊಸ ಕಾರ್ಮಿಕ ಪರವಾನಗಿ ನೀಡಲಾಗುವುದು ಎಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಹೊಸ ಪ್ರಸ್ತಾಪಗಳನ್ನು ಹೊರಡಿಸಿದೆ.
ಮುನ್ನೆಚ್ಚರಿಕೆ ನೀಡದೆ ಕಂಪೆನಿಯಿಂದ ಹೊರಹಾಕುವುದು, ಕಾರ್ಮಿಕ ಒಪ್ಪಂದ ಅಸಾಧುಗೊಳಿಸುವುದು, ಕೆಲಸಗಾರನ ಯಾವುದೇ ಹಕ್ಕನ್ನು ನಿಷೇಧಿಸುವುದು, ಸೇವಾ ಸೌಲಭ್ಯಗಳನ್ನು ನೀಡದಿರುವುದು ಮುಂತಾದ ಸಂದರ್ಭದಲ್ಲಿಯೂ ಹೊಸ ಪರವಾನಗಿಗಾಗಿ ಸಚಿವಾಲಯವನ್ನು ಸಂಪರ್ಕಿಸಬಹುದಾಗಿದೆ.ಪ್ರಾಯೊಜಕ ಸ್ವತಃ ಕೆಲಸದಿಂದ ವಜಾ ಮಾಡಿದ್ರೆ ಅಥವಾ ಲೇಬರ್ ಕಾರ್ಡ್ ನವೀಕರಣ ಮಾಡದಿದ್ದರೂ ಸಚಿವಾಲಯ ಸಹಕಾರ ನೀಡಲಿದೆ.
ಕಂಪೆನಿ ಮುಚ್ಚಲ್ಪಟ್ಟ ಕಾರಣದಿಂದ ಕೆಲಸವನ್ನು ಕಳೆದುಕೊಳ್ಳುವವರಿಗೂ ಉದ್ಯೋಗ ಪರವಾನಗಿ ನೀಡಲಾಗುವುದು.ಸಚಿವಾಲಯದ ಅಧಿಕಾರಿಗಳ ವರದಿಯನ್ನು ಆಧರಿಸಿ, ಇದನ್ನು ಪರಿಗಣಿಸಲಾಗುತ್ತದೆ. 2 ತಿಂಗಳು ಕಂಪೆನಿ ಕೆಲಸ ಮಾಡಿಲ್ಲ ಎಂಬುದು ಸಾಬೀತಾಗಬೇಕು. ಕೆಲಸದಾತನ ನಿಷೇಧವನ್ನು ಕಾರ್ಮಿಕ ಸಚಿವಾಲಯ ಪರಿಹರಿಸಲು ಸಾಧ್ಯವಾಗದ ಸಂದರ್ಭಗಳಲ್ಲಿಯೂ ಹೊಸ ಕೆಲಸದ ಪರವಾನಿಗೆ ಪಡೆಯಬಹುದಾಗಿದೆ.
ಕಾರ್ಮಿಕರ ಕೆಲಸದ ತರ್ಕವನ್ನು ನ್ಯಾಯಾಲಯಕ್ಕೆ ವರ್ಗಾಯಿಸುವಾಗ, ಎರಡು ತಿಂಗಳುಗಳಿಗಿಂತ ಕಡಿಮೆಯಲ್ಲದ ವೇತನವನ್ನು ಪಡೆಯಲು ಕಾರ್ಮಿಕನಿಗೆ ಅರ್ಹತೆ ಇದೆ ಎಂದು ನ್ಯಾಯಾಲಯ ತೀರ್ಪು ನೀಡಿದರೆ ಸ್ಪೋನ್ಸರ್ ಅನುಮತಿ ಇಲ್ಲದೆ ಪರವಾನಗಿ ಲಭಿಸಲಿದೆ.
ಕಾರ್ಮಿಕ ಕಾನೂನನ್ನು ಪಾಲಿಸದ ನೌಕರರ ವೀಸಾವನ್ನು ನೋ ಎಂಟ್ರಿ ಮೂಲಕ ರದ್ದುಗೊಳಿಸಿ, ಒಂದು ವರ್ಷ ಯು.ಎ.ಇ ಪ್ರವೇಶವನ್ನು ನಿರ್ಬಂಧಿಸಲಾಗುವುದು ಎಂದು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು