ತಿರುವನಂತಪುರಂ:ವಿದೇಶೀ ವಲಸಿಗರಿಗೆ ಖತರ್ ಏರ್ವೇಸ್ ನ ದರವನ್ನು ಕಡಿತಗೊಳಿಸುವ ಒಪ್ಪಂದಕ್ಕೆ ಕೇರಳ ರಾಜ್ಯ ಸರಕಾರವು ಸಹಿ ಹಾಕಲಿದೆ.ಇದೇ ರೀತಿ ದರಕಡಿತ ಬಗ್ಗೆ ಕುವೈತ್ ಮತ್ತು ಎಮಿರೇಟ್ಸ್ ಏರ್ಲೈನ್ ಕಂಪೆನಿಗಳ ನಡುವೆಯೂ ಮಾತುಕತೆ ಮುಂದುವರಿಯುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಫೇಸ್ಬುಕ್ ಪುಟದಲ್ಲಿ ಪ್ರಕಟಿಸಿದ್ದಾರೆ.
ರಜೆಯ ಋತುವಿನಲ್ಲಿ ವಾಯುಯಾನ ದರಗಳಲ್ಲಿನ ಹೆಚ್ಚಳವು ವಲಸಿಗರಲ್ಲಿ ಉಂಟುಮಾಡುವ ಅತಿದೊಡ್ಡ ತೊಂದರೆಗಳಲ್ಲಿ ಒಂದಾಗಿದೆ. ನೋರ್ಕ ರೂಟ್ಸ್ ಈ ತೊಂದರೆಯನ್ನು ನಿಭಾಯಿಸಲು ಈ ತೀರ್ಮಾನ ಕೈಗೊಂಡಿದೆ.
ಪ್ರಸ್ತುತ ಒಮನ್ ಏರ್ ನಲ್ಲಿ ನೋರ್ಕಾ ರೂಟ್ ಐಡಿ ಕಾರ್ಡ್ ಹೊಂದಿರುವ ಅನಿವಾಸಿಗಳು ಮತ್ತು ಕುಟುಂಬದ ಸದಸ್ಯರಿಗೆ ಏಳು ಶೇಕಡಾ ರಿಯಾಯಿತಿ ಲಭ್ಯವಿದೆ. ಕತಾರ್ ಏರ್ ವೇಸ್ ಕೂಡ ಇದೇ ಯೋಜನೆಯನ್ನು ಪ್ರಾರಂಭಿಸಲಿದೆ. ಈ ಬಗ್ಗೆ ಮಾತುಕತೆಗಳು ಅಂತಿಮ ಹಂತದಲ್ಲಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದು, ಈ ತಿಂಗಳು ಒಪ್ಪಂದಕ್ಕೆ ಸಹಿ ಹಾಕುವ ಭರವಸೆ ಇದೆ ಎಂದು ಹೇಳಿದರು.
ಕುವೈತ್ ಮತ್ತು ಎಮಿರೇಟ್ಸ್ ಏರ್ಲೈನ್ ಕಂಪನಿಗಳೊಂದಿಗೆ ಕೂಡ ಈ ಬಗೆಗಿನ ಮಾತುಕತೆ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಅದೇ ವೇಳೆ ಆಗಸ್ಟ್ 1 ರಿಂದ ಡಿಸೆಂಬರ್ 30 ರ ವರೆಗೆ ಯುಎಇಯಲ್ಲಿ ಘೋಷಿಸಲ್ಪಟ್ಟ ಸಾರ್ವಜನಿಕ ಕ್ಷಮಾಪಣೆಯನ್ನು ಬಳಸಿರುವ ಮುನ್ನೂರಕ್ಕಿಂತಲೂ ಹೆಚ್ಚಿನ ಕೇರಳೀಯರನ್ನು ಉಚಿತವಾಗಿ ಕರೆತರಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.















ಇನ್ನಷ್ಟು ಸುದ್ದಿಗಳು
‘ಈದುಲ್ ಫಿತ್ರ್’ ಖುತ್ಬಾ ವೇಳೆ ಇಮಾಮ್ ಕುಸಿದು ಬಿದ್ದು ಮೃತ್ಯು
ಚುನಾವಣಾ ಸಂಭ್ರಮಾಚರಣೆ: ಪಟಾಕಿ ಸಿಡಿದು ಮುಸ್ಲಿಂ ಲೀಗ್ ಕಾರ್ಯಕರ್ತ ಮೃತ್ಯು
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಬಿಗ್ ಬಾಸ್ ನ ಒಳಗೇನು? ತನಿಖೆಗೆ ಆದೇಶಿಸಿದ ಹೈಕೋರ್ಟ್
ರಹೀಮ್ ವಿಮೋಚನಾ ಅಭಿಯಾನ: ಮೊಬೈಲ್ ಆಪ್ ಸಿದ್ಧಪಡಿಸಿದವರರು ಇವರು
ರಿಯಾಜ್ ಮೌಲವಿ ಹತ್ಯೆ ಪ್ರಕರಣದ ನ್ಯಾಯಾಧೀಶರ ವರ್ಗಾವಣೆಗೆ ಕೆಟಿ ಜಲೀಲ್ ಟೀಕೆ
ರಿಯಾಜ್ ಮೌಲ್ವಿ ಹತ್ಯೆ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶ ವರ್ಗಾವಣೆ
ತಾಂತ್ರಿಕ ವಿವಿಗಳಲ್ಲಿ ಸರ್ಚ್ ಸಮಿತಿ ರಚನೆ ಗೆ ಮುಂದಾದ ಕೇರಳ ಸರಕಾರ- ವಿವಿ ಕುಲಾಧಿಪತಿ ರಾಜ್ಯಪಾಲರಿಗೆ ಸಡ್ಡು
ರಿಯಾಝ್ ಮೌಲವಿ ಹತ್ಯೆ: ತೀರ್ಪಿನಲ್ಲಿ ಪ್ರಾಸಿಕ್ಯೂಷನ್ ಮತ್ತು ತನಿಖಾಧಿಕಾರಿ ವಿರುದ್ಧ ಗಂಭೀರ ಆರೋಪ
ರಿಯಾಝ್ ಮೌಲವಿ ಹತ್ಯೆ: ಅನಿರೀಕ್ಷಿತ ತೀರ್ಪು ನ್ಯಾಯಾಂಗದ ಮೇಲಿನ ನಂಬಿಕೆ ಕಳೆದುಕೊಳ್ಳಲಿದೆ- ಎಸ್ವೈಎಸ್