ಮಾಣಿ : ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಮಾಣಿ ರೇಂಜ್ ಇದರ ವತಿಯಿಂದ ಮದ್ರಸಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನೊಳಗೊಂಡ “ಪ್ರತಿಭಾ ಸಂಗಮ” ಕಾರ್ಯಕ್ರಮವು ಆದಿತ್ಯವಾರ ಮಾಣಿ ದಾರುಲ್ ಇರ್ಶಾದ್ ವಠಾರದಲ್ಲಿ ನಡೆಯಿತು,ಮಾಣಿ ರೇಂಜ್ ಎಸ್ ಜೆ ಎಂ ಅಧ್ಯಕ್ಷರಾದ ಅಬೂಬಕರ್ ಸಖಾಫಿ ಗಡಿಯಾರ್ ರವರ ಅಧ್ಯಕ್ಷತೆಯಲ್ಲಿ,ಝೈನುಲ್ ಉಲಮಾ ಮಾಣಿ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು,ಆದಂ ಮದನಿ ಪುತ್ತೂರು ಪ್ರಾಸ್ತಾವಿಕ ಭಾಷಣ ಮಾಡಿದರು,ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿಯ ಪ್ರಿನ್ಸಿಪಾಲ್ ಟಿ ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಮುಖ್ಯ ಪ್ರಭಾಷಣ ನಡೆಸಿದರು,

ವೇದಿಕೆಯಲ್ಲಿ ಶರೀಫ್ ಸಖಾಫಿ ಮಾಣಿ,ಹನೀಫ್ ಸಖಾಫಿ ಸೂರ್ಯ,ನಾಸಿರ್ ಸಖಾಫಿ ಪೇರಮೊಗರು,ಜಬ್ಬಾರ್ ಮದನಿ ಪೇರಮೊಗರು,ಶರೀಫ್ ಝುಹ್ರಿ ಸತ್ತಿಕಲ್ಲು,ಹೈದರ್ ಸಖಾಫಿ ಕೆಮ್ಮಾನ್ ಕಜೆ,ಇಬ್ರಾಹಿಂ ಮದನಿ ಬುಡೋಳಿ,ರಫೀಕ್ ಮದನಿ ಬರಿಮಾರು,ಹಬೀಬ್ ಶೇರಾ,ಮುಂತಾದ ಹಲವಾರು ಉಲಮಾ ಉಮರಾ ನೇತಾರರು ಉಪಸ್ಥಿತರಿದ್ದರು,ಒಟ್ಟು ಒಂಭತ್ತು ಮದ್ರಸಾಗಳು ಭಾಗವಹಿಸಿದ್ದ ಪ್ರತಿಭಾ ಸಂಗಮದಲ್ಲಿ ಪ್ರಥಮ ಪೇರಮೊಗರು ಮದ್ರಸಾ ದ್ವಿತೀಯ ಕೆಮ್ಮಾನ್ ಕಜೆ ಮದ್ರಸಾ ತೃತೀಯ ಶೇರಾ ಮದ್ರಸಾ ಪ್ರಶಸ್ತಿಗಳನ್ನು ಪಡೆದುಕೊಂಡಿತು, ವೈಯಕ್ತಿಕ ಚಾಂಪಿಯನ್ ಗಳಾಗಿ ಇಯಾಝ್ ಕೆಮ್ಮಾನ್ ಕಜೆ,ಅಜ್ಮಲ್ ಮಾಣಿ,ಅಶ್’ಹರ್ ಪೇರಮೊಗರು ಪ್ರಶಸ್ತಿಗಳನ್ನು ಪಡೆದುಕೊಂಡರು,ಸಮಿತಿಯ ಕನ್ವೀನರ್ ಅಬ್ದುಲ್ ಲತೀಫ್ ಸಅದಿ ಶೇರಾ ಸ್ವಾಗತಿಸಿದರು,ದಾರುಲ್ ಇರ್ಶಾದ್ ಅಧ್ಯಾಪಕರಾದ ನಝೀರ್ ಅಹ್ಮದ್ ಅಮ್ಜದಿ ಸರಳಿಕಟ್ಟೆ ಧನ್ಯವಾದ ಸಮರ್ಪಿಸಿದರು.















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ