ಪಉಳ್ಳಾಲ:ಪ್ರವಾದಿ (ಸ.ಅ) ರವರನ್ನು ನಿಂದನೆ ಮಾಡಿ ಕೋಮು ಸಂಘರ್ಷಕ್ಕೆ ಪ್ರಚೋದನೆ ಮಾಡುವ ರೀತಿಯಲ್ಲಿ ಮಾಧ್ಯಮದ ಸಿದ್ದಾಂತಕ್ಕೆ ಅಗೌರವ ತೋರಿ,ಮುಸ್ಲಿಮರ ಭಾವನೆಗಳನ್ನು ಕೆರಳಿಸಿದ ಸುವರ್ಣ ನ್ಯೂಸ್ ಚಾನಲ್ ನಿರೂಪಕ ಅಜಿತ್ ಹನುಮಕ್ಕನವರ್ ಹಾಗೂ ಸುವರ್ಣ ನ್ಯೂಸ್ ಚಾನಲ್ ವಿರುದ್ದ ಎಸ್ಸೆಸ್ಸೆಫ್ ಬಾಳೆಪುಣಿ ಸೆಕ್ಟರ್ ವತಿಯಿಂದ ದ.ಕ ಜಂಇಯ್ಯತುಲ್ ಉಲಮಾ ಪ್ರ.ಕಾರ್ಯದರ್ಶಿ ಮುಹ್ಯಿ ದ್ದೀನ್ ಕಾಮಿಲ್ ಸಖಾಫಿ ತೋಕೆ ಹಾಗೂ ಸೆಕ್ಟರ್ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಸಖಾಫಿ ಕಾಯಾರ್ ರವರ ನೇತೃತ್ವದಲ್ಲಿ ಕೋಣಾಜೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು.
ಈ ಸಮಯದಲ್ಲಿ ಎಸ್ಸೆಸ್ಸೆಫ್ ಬಾಳೆಪುಣಿ ಸೆಕ್ಟರ್ ಉಪಾಧ್ಯಕ್ಷ ಹೈದರ್ ಸಅದಿ ಪರಪ್ಪು.ಪ್ರ.ಕಾರ್ಯದರ್ಶಿ ಝೈನುದ್ದೀನ್ ಇರಾ ಸೈಟ್. ಕೋಶಾಧಿಕಾರಿ ಸಿದ್ದೀಕ್ ಪಂಜಿಕಲ್ ಕಾರ್ಯದರ್ಶಿಗಳಾದ ನೌಶಾದ್ ಮದನಿ ಎಚ್. ಕಲ್, ಜಬ್ಬಾರ್ ಉಮ್ಮನಮೂಲೆ ,ಮಾಜಿ ಉಪಾಧ್ಯಕ್ಷರಾದ ಮುಸ್ತಫಾ ಮದನಿ ಇರಾ ಹಾಗೂ ಸೆಕ್ಟರ್ ಸದಸ್ಯರೂ ಶಾಖಾ ನಾಯಕರು ಮೊದಲಾದವರು ಉಪಸ್ಥಿತರಿದ್ದರು.