janadhvani

Kannada Online News Paper

SSF ಕಟ್ಟತ್ತಿಲ ಶಾಖೆ ; ಯುನಿಟ್ ಸಮ್ಮೇಳನ ಮತ್ತು ಮಹ್’ಳರತುಲ್ ಬದ್ರಿಯ್ಯಾ ಇಂದು

ಕಟ್ಟತ್ತಿಲ (ಜನಧ್ವನಿ ವಾರ್ತೆ)ಅ.25; SSF ಕಟ್ಟತ್ತಿಲ ಶಾಖೆಯ ವತಿಯಿಂದ ಯುನಿಟ್ ಸಮ್ಮೇಳನ ಇಂದು ಸಂಜೆ 6:30ಕ್ಕೆ ವಿಜೃಂಭಣೆಯಿಂದ ಕಟ್ಟತ್ತಿಲ ಶಾಖಾ ವಠಾರದಲ್ಲಿ ನಡೆಯಲಿದೆ. ‘ಯೌವ್ವನ ಮರೆಯಾಗುವ ಮುನ್ನ’ ಎಂಬ ಧ್ಯೇಯ ವಾಕ್ಯದೊಂದಿಗೆ, ಸಮ್ಮೇಳನ ಹಾಗೂ ಮಹ್’ಳರತುಲ್ ಬದ್ರಿಯ್ಯಾ ನಡೆಯಲಿದೆ.

ಇಂದು ಮಗ್ರಿಬ್ ನಮಾಜಿನ ಬಳಿಕ ಬಹು ಅಸ್ಸಯ್ಯದ್ ಶಿಹಾಬುದ್ದೀನ್ ತಂಙಳ್ ನೇತ್ರತ್ವ ವಹಿಸಲಿದ್ದಾರೆ. ಹೈದರ್ ಅಶ್ರಫಿ ಕಟ್ಟತ್ತಿಲ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.