janadhvani

Kannada Online News Paper

ಇಂದು ನೆಕ್ಕಿಲ್ ನಲ್ಲಿ ಯುನಿಟ್ ಕಾನ್ಫರೆನ್ಸ್ ಮತ್ತು ಜಲಾಲಿಯ್ಯ ದ್ವಿತೀಯ ವಾರ್ಷಿಕ ಸಮಾರಂಭ

ನೆಕ್ಕಿಲ್: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ SSF ನೆಕ್ಕಿಲ್ ಶಾಖೆ ಅಧೀನದಲ್ಲಿ ರಾಜ್ಯ ಸಮಿತಿಯ ನಿರ್ದೇಶನದಂತೆ “ಯುನಿಟ್ ಕಾನ್ಫರೆನ್ಸ್” ಹಾಗೂ ಶಾಖೆ ಅಧೀನದಲ್ಲಿ ತ್ರೈಮಾಸಿಕವಾಗಿ ನಡೆಸಿಕೊಂಡು ಬರುವ “ಜಲಾಲಿಯ್ಯ ಮಜ್ಲಿಸ್” ನ ದ್ವಿತೀಯ ವಾರ್ಷಿಕ ಮಹಾ ಸಮಾವೇಶವು, ಇಂದು ಅಕ್ಟೋಬರ್ 25 ಗುರುವಾರ ಮಗ್ರಿಬ್ ಬಳಿಕ ಅಬೂಬಕರ್ ಸಿದ್ದೀಕ್ ಜುಮ್ಮಾ ಮಸ್ಜಿದ್ ಸಭಾಂಗಣದ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.

ಬಹು ಅಸ್ಸಯ್ಯಿದ್ ಜಅಫರ್ ಸ್ವಾದಿಕ್ ತಂಙಳ್ ಕುಂಬೋಳ್ ದುಆಶೀರ್ವಚನ ಹಾಗೂ ಜಲಾಲಿಯ್ಯ ಮಜ್ಲಿಸ್ ನ ನೇತೃತ್ವ ವಹಿಸಲಿದ್ದಾರೆ.
ಬಹು ಮಸ್ಊದ್ ಸಅದಿ ಪದ್ಮುಂಜ ಜಲಾಲಿಯ್ಯ ಆಲಾಪಣೆ ನಡೆಸಲಿದ್ದಾರೆ.
ಖ್ಯಾತ ವಾಗ್ಮಿ,ರಾಜ್ಯ SSF ಕಾರ್ಯದರ್ಶಿ,ಯುವ ವಿದ್ವಾಂಸ ಹಾಫಿಳ್ ಸುಫ್ಯಾನ್ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಸ್ಥಳೀಯ ಖತೀಬ್ ನೌಶಾದ್ ಸಅದಿ ಉದ್ಘಾಟಿಸುವ ಸಮಾರಂಭದಲ್ಲಿ,SSF ಜಿಲ್ಲಾ ಸದಸ್ಯ NM ಶರೀಫ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.ಶಾಖಾಧ್ಯಕ್ಷ ಹನೀಫ್ ನೆಕ್ಕಿಲ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸ್ಥಳೀಯ ಅಧ್ಯಾಪಕರಾದ ರಫೀಕ್ ಝೈನಿ,ಹಾರಿಸ್ ಲತೀಫಿ, ಜಮಾಅತ್ ಆಡಳಿತ ಸಮಿತಿ ಅಧ್ಯಕ್ಷರಾದ ರಫೀಕ್ ಸಅದಿ,ಸ್ಥಳೀಯ SYS ಅಧ್ಯಕ್ಷರಾದ KP ರಮ್ಲಾನ್ ಹಾಜಿ,AYF ಅಧ್ಯಕ್ಷ ಮುಹಮ್ಮದ್ ಅಶ್ರಫ್,ಸೆಕ್ಟರ್,ಡಿವಿಶನ್ ಅಧ್ಯಕ್ಷರ ಸಹಿತ ಸಾಂಘಿಕ,ಸಾಮಾಜಿಕ ನಾಯಕರು ಭಾಗವಹಿಸಲಿದ್ದಾರೆ. ಸ್ತೀಯರಿಗೆ ಪ್ರತ್ಯೇಕ ಸ್ಥಳಾವಕಾಶದೊಂದಿಗೆ,silsila media ದಲ್ಲಿ ಕಾರ್ಯಕ್ರಮ ನೇರಪ್ರಸಾರವಾಗಲಿದೆ.ಕೊನೆಯಲ್ಲಿ ತಬರ್ರುಕ್ ವಿತರಣೆ ಕೂಡಾ ನಡೆಯಲಿದೆ ಎಂದು ಶಾಖಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಮದನಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com