ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಇದರ 2018ನೇ ಸಾಲಿನ ಚುನಾವಣಾ ಪ್ರಕ್ರಿಯೆಯು ಪ್ರಾರಂಭವಾಗಿದ್ದು ಚಿಕ್ಕಮಗಳೂರು ಜಿಲ್ಲೆಯ ವಿವಿಧ ಘಟಕಗಳ ಅಧಿಕಾರಿಗಳು, ಮತ್ತು ನಾಯಕರಿಗೆ ಎಲೆಕ್ಷನ್ ವರ್ಕ್ ಶಾಪ್-18 ಕಾರ್ಯಕ್ರಮವನ್ನು ಬಾಳೆಹೊಣ್ಣೂರಿನಲ್ಲಿರುವ ಅಲ್ ಮಂಝಿಲ್ ಅಕಾಡೆಮಿಯಲ್ಲಿ ಜಿಲ್ಲಾಧ್ಯಕ್ಷ ಸಯ್ಯಿದ್ ಹಾಮೀಂ ಶಿಹಾಬ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಹಮೀದ್ ಉಸ್ತಾದ್ ನಗರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ರಾಜ್ಯ ಚುನಾವಣಾ ಮಂಡಳಿ ಕಾರ್ಯದರ್ಶಿ ಹಾಫಿಳ್ ಯಾಕೂಬ್ ಸಅದಿ ಅಲ್ ಅಫ್ಳಲಿ ವರ್ಕ್ ಶಾಪ್ ನಡೆಸಿ ಕೊಟ್ಟರು.
ರಾಜ್ಯ ತಾಂತ್ರಿಕ ಅಧಿಕಾರಿ ರವೂಫ್ ಉಡುಪಿ ತಾಂತ್ರಿಕ ಮಾಹಿತಿ ನೀಡಿದರು.ಹುಸೈನ್ ಸಅದಿ ಹೊಸ್ಮಾರ್ ಯುನಿಟ್ ಕಾನ್ಫರೆನ್ಸ್ ಬಗ್ಗೆ ಮಾಹಿತಿ ನೀಡಿದರು.
ರಾಜ್ಯ ನಾಯಕರಾದ ಉಸ್ಮಾನ್ ಉಪ್ಪಳ್ಳಿ, ಇಬ್ರಾಹಿಮ್ ಮೂಡಿಗೆರೆ ಜಿಲ್ಲಾ ನಾಯಕರಾದ ಮುನೀರ್ ಚಿಕ್ಕಮಗಳೂರು, ಆಬಿದ್ ಸಖಾಫಿ ಮಾಗುಂಡಿ, ಸುಲೈಮಾನ್ ಶೆಟ್ಟಿ ಕೊಪ್ಪ, ಅಝೀಝ್ ಮಾಗುಂಡಿ , ಸೈದಲವಿ ಚಿಕ್ಕಮಗಳೂರು, ನಸೀರ್ ಅಹ್ಮದ್ ಉಪ್ಪಳ್ಳಿ, ಅಬ್ದುಲ್ ರಹಿಮಾನ್ ಕೊಪ್ಪ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಸ್ತಫ ಝುಹ್ರಿ ಕಲ್ದೊಡ್ಡಿ ಸ್ವಾಗತಿಸಿ ಸಫ್ವಾನ್ ಸಖಾಫಿ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ