ಪ್ರವಾದಿ (ಸ) ರ 1493 ನೇ ಜನ್ಮದಿನಾಚರಣೆ ಅಂಗವಾಗಿ ಕರ್ನಾಟಕದ ಪ್ರತಿಷ್ಟಿತ ವಿದ್ಯಾ ಸಂಸ್ಥೆ ಅನ್ವಾರುಲ್ ಹುದಾ ವಿದ್ಯಾರ್ಥಿ ಸಂಘಟನೆಯಾದ ನಹ್ದತುಸ್ಸುನ್ನ ಸ್ಟೂಡೆಂಟ್ ಅಸೋಷಿಯೇಷನ್ (NSSA) ಅದೀನದಲ್ಲಿ ವರ್ಷಂಪ್ರತೀ ನಡೆಸಿಕೊಂಡು ಬರುತ್ತಿರುವ ಹುಬ್ಬುನ್ನಬಿ ಕಾನ್ಫರೆನ್ಸ್ ನ ಸ್ವಾಗತ ಸಮಿತಿ ರಚಿಸಲಾಯಿತು.
ಗೌರವಾದ್ಯಕ್ಷರಾದ ಉಸ್ತಾದ್ ಇಸ್ಮಾಯಿಲ್ ಸಖಾಫಿಯವರ ಅದ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಉಸ್ತಾದ್ ಮುಹಮ್ಮದ್ ಶಫೀಕ್ ಸಖಾಫಿ ಉದ್ಘಾಟಿಸಿದರು. ಶೈಖುನಾ ಅಹ್ಸನಿ ಉಸ್ತಾದರ ನಿರ್ದೇಶನದಂತೆ 2018 ನವಂಬರ್ 28.29.30 ರಂದು ಹುಬ್ಬುನ್ನಬಿ ಸಮಾವೇಶವನ್ನು ನಡೆಸಲು ತೀರ್ಮಾನಿಸಲಾಯಿತು*. ಸಭೆಯಲ್ಲಿ ಪ್ರಾಂಶುಪಾಲರಾದ ಉಸ್ತಾದ್ ಅಬ್ದುರ್ರಶೀದ್ ಸಅದಿರವರು ಕಾರ್ಯಕ್ರಮದ ದಿನಾಂಕವನ್ನು ಪ್ರಕಟಿಸಿ ಸ್ವಾಗತ ಸಮಿತಿ ಸದಸ್ಯರನ್ನು ಆಯ್ಕೆ ಮಾಡಿದರು.ಸ್ವಾಗತ ಸಮಿತಿ ಚೇರ್ಮ್ಯಾನ್: ಅಬ್ದುರ್ರಹ್ಮಾನ್ ಅಹ್ಸನಿ ಕೊಳಕೇರಿ. ವೈಸ್ ಚೇರ್ಮ್ಯಾನ್: ಯಾಕೂಬ್ ಮಾಷ್ಟರ್ ಕೊಳಕೇರಿ, ಶಿಹಾಬುದ್ದೀನ್ ಪಾಲಿಬಟ್ಟ. ಕನ್ವೀನರ್:ಶಾಫಿ ಅನ್ವಾರಿ ಅಸ್ಸಖಾಫಿ ಕೊಡಗರಹಳ್ಳಿ. ವೈಸ್ ಕನ್ವೀನರ್: ಕಮರುದ್ದೀನ್ ಮಾಲ್ದಾರೆ* ಮತ್ತು 33 ಸದಸ್ಯರನ್ನು ಆಯ್ಕೆ ಮಾಡಲಾಯಿತು. ಪ್ರಸ್ತುತ ಸಭೆಯಲ್ಲಿ NSSA ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.ಸಂಘಟನೆ ಕನ್ವೀನರ್ ಶಾಕಿರ್ ಶಿವಮೊಗ್ಗ ಸ್ವಾಗತಿಸಿ ಅಬ್ದುರ್ರಹ್ಮಾನ್ ಪುತ್ತೂರು ವಂದಿಸಿದರು.