ದುಬೈ: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ವತಿಯಿಂದ ಇದೇ ಬರುವ ದಿನಾಂಕ 28 ರಂದು ಸಂಜೆ 6 ಗಂಟೆಗೆ ಸರಿಯಾಗಿ ದುಬೈ ಸ್ಟೇಡಿಯಂ ಮೆಟ್ರೋ ಸ್ಟೇಷನ್ ಹತ್ತಿರದ ಕ್ರೆಸೆಂಟ್ ಸ್ಕೂಲ್ ಸಭಾಂಗಣದಲ್ಲಿ ಜಲಾಲಿಯ್ಯಾ ಮಜ್ಲಿಸ್ ನಡೆಯಲಿದ್ದು ಪ್ರಸ್ತುತ ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಸುನ್ನೀ ಜಂಇಯ್ಯತ್ತುಲ್ ಉಲಮಾ ಕೇಂದ್ರ ಸಮಿತಿ ಸದಸ್ಯರು ಜಾಮಿಯಾ ಸಅದಿಯ್ಯಾ ಅರಬಿಯ್ಯಾ ಇದರ ಅಧ್ಯಕ್ಷರು ಡಿ ಕೆ ಎಸ್ ಸಿ ಇದರ ಸಾರಥಿಯೂ ಸುನ್ನೀ ಕುಟುಂಬದ ಆಧ್ಯಾತ್ಮಿಕ ನೇತಾರರು ಆದ ಸಯ್ಯಿದ್ ಕೆ.ಎಸ್ ಆಟಕೋಯ ತಂಗಳ್ ಕುಂಬೋಳ್ ನೇತೃತ್ವದ ವಹಿಸಲಿದ್ದು,
ಭಾಷಣ ಲೋಕದ ಇತಿಹಾಸ ಪ್ರವಾದಿ ಪ್ರೇಮಿಗಳಿಗೆ ಪ್ರವಾದಿ ಪ್ರೇಮದ ರಸದೌತಣ ನೀಡಿ ಜನ ಮನಸ್ಸುಗಳನ್ನು ಮದೀನಾದ ಕಡೆ ಕೊಂಡೊಯ್ಯುವ ಭಾಷಣಗಾರ ಕೇರಳ ರಾಜ್ಯ ಸುನ್ನೀ ಸ್ಟುಡೆಂಟ್ ಫೆಡರೇಶನ್ ಇದರ ರಾಜ್ಯಾಧ್ಯಕ್ಷರು ಆಗಿರುವ ಬಹು ಮುಹಮ್ಮದ್ ಫಾರೂಕ್ ನಈಮಿ ಕೊಲ್ಲಂ ಮುಖ್ಯ ಭಾಷಣ ಮಾಡಲಿದ್ದಾರೆ
ಸಯ್ಯಿದ್ ಹಾಮಿದ್ ಕೋಯಮ್ಮ ತಂಗಳ್ ಪಾಪಿನಿಶ್ಶೇರಿ , ಸಯ್ಯಿದ್ ತ್ವಾಹ ಭಾಫ಼ಖಿ ತಂಘಲ್ ಸೇರಿದಂತೆ ಹಲವಾರು ಧಾರ್ಮಿಕ ನಾಯಕರು ಭಾಗವಹಿಸಲಿದ್ದಾರೆ
ಯು.ಎ.ಇ ಯಲ್ಲಿ ನೆಲೆಸಿರುವ ಎಲ್ಲಾ ಅನಿವಾಸಿ ಕರ್ನಾಟಕ ಮುಸ್ಲಿಂ ಸಹೋದರರು ಭಾಗವಹಿಸಿ ಯಶಸ್ವಿಗೊಳಿಸಿ ಕೊಡಬೇಕಾಗಿ ಕರ್ನಾಟಕ ಕಲ್ಚರಲ್ ಫೌಂಡೇಶನ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಿಲ ಹಾಗು ಪ್ರಧಾನ ಕಾರ್ಯದರ್ಶಿ ಇಖ್ಬಾಲ್ ಕಾಜೂರು ಜಂಟಿ ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ