janadhvani

Kannada Online News Paper

ಡಿ.ಕೆ.ಎಸ್.ಸಿ. ಜಲಾಲಿಯ್ಯಾ ಮಜ್ಲಿಸ್ ಯಶಸ್ವಿಗೆ ಕೆಸಿಎಫ್ ಯುಎಇ ಕರೆ

ದುಬೈ: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ವತಿಯಿಂದ ಇದೇ ಬರುವ ದಿನಾಂಕ 28 ರಂದು‌ ಸಂಜೆ 6 ಗಂಟೆಗೆ ಸರಿಯಾಗಿ ದುಬೈ ಸ್ಟೇಡಿಯಂ ಮೆಟ್ರೋ ಸ್ಟೇಷನ್ ಹತ್ತಿರದ ಕ್ರೆಸೆಂಟ್ ಸ್ಕೂಲ್ ಸಭಾಂಗಣದಲ್ಲಿ ಜಲಾಲಿಯ್ಯಾ ಮಜ್ಲಿಸ್ ನಡೆಯಲಿದ್ದು ಪ್ರಸ್ತುತ ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಸುನ್ನೀ ಜಂಇಯ್ಯತ್ತುಲ್ ಉಲಮಾ ಕೇಂದ್ರ ಸಮಿತಿ ಸದಸ್ಯರು ಜಾಮಿಯಾ ಸಅದಿಯ್ಯಾ ಅರಬಿಯ್ಯಾ ಇದರ ಅಧ್ಯಕ್ಷರು ಡಿ ಕೆ ಎಸ್ ಸಿ ಇದರ ಸಾರಥಿಯೂ ಸುನ್ನೀ ಕುಟುಂಬದ ಆಧ್ಯಾತ್ಮಿಕ ನೇತಾರರು ಆದ ಸಯ್ಯಿದ್ ಕೆ.ಎಸ್ ಆಟಕೋಯ ತಂಗಳ್ ಕುಂಬೋಳ್ ನೇತೃತ್ವದ ವಹಿಸಲಿದ್ದು,
ಭಾಷಣ ಲೋಕದ ಇತಿಹಾಸ ಪ್ರವಾದಿ ಪ್ರೇಮಿಗಳಿಗೆ ಪ್ರವಾದಿ ಪ್ರೇಮದ ರಸದೌತಣ ನೀಡಿ ಜನ ಮನಸ್ಸುಗಳನ್ನು ಮದೀನಾದ ಕಡೆ ಕೊಂಡೊಯ್ಯುವ ಭಾಷಣಗಾರ ಕೇರಳ ರಾಜ್ಯ ಸುನ್ನೀ ಸ್ಟುಡೆಂಟ್ ಫೆಡರೇಶನ್ ಇದರ ರಾಜ್ಯಾಧ್ಯಕ್ಷರು ಆಗಿರುವ ಬಹು ಮುಹಮ್ಮದ್ ಫಾರೂಕ್ ನಈಮಿ ಕೊಲ್ಲಂ ಮುಖ್ಯ ಭಾಷಣ ಮಾಡಲಿದ್ದಾರೆ

ಸಯ್ಯಿದ್ ಹಾಮಿದ್ ಕೋಯಮ್ಮ ತಂಗಳ್ ಪಾಪಿನಿಶ್ಶೇರಿ , ಸಯ್ಯಿದ್ ತ್ವಾಹ ಭಾಫ಼ಖಿ ತಂಘಲ್ ಸೇರಿದಂತೆ ಹಲವಾರು ಧಾರ್ಮಿಕ ನಾಯಕರು ಭಾಗವಹಿಸಲಿದ್ದಾರೆ

ಯು.ಎ.ಇ ಯಲ್ಲಿ ನೆಲೆಸಿರುವ ಎಲ್ಲಾ ಅನಿವಾಸಿ ಕರ್ನಾಟಕ ಮುಸ್ಲಿಂ ಸಹೋದರರು ಭಾಗವಹಿಸಿ ಯಶಸ್ವಿಗೊಳಿಸಿ ಕೊಡಬೇಕಾಗಿ ಕರ್ನಾಟಕ ಕಲ್ಚರಲ್ ಫೌಂಡೇಶನ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಿಲ ಹಾಗು ಪ್ರಧಾನ ಕಾರ್ಯದರ್ಶಿ ಇಖ್ಬಾಲ್ ಕಾಜೂರು ಜಂಟಿ ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.

error: Content is protected !! Not allowed copy content from janadhvani.com