ವಿಟ್ಲ : ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ SYS ಕೊಡಂಗಾಯಿ ಬ್ರಾಂಚ್ ಇದರ ಫಸ್ಟ್ ಅಸೆಂಬ್ಲಿ (ಪ್ರಥಮ ವಾರ್ಷಿಕ)ಯು ಸೆಪ್ಟೆಂಬರ್ 20ರಂದು ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಇಶಾ ನಮಾಜಿನ ಬಳಿಕ ಇಲ್ಲಿನ ಸುನ್ನೀ ಸೆಂಟರ್ ನಲ್ಲಿ ನಡೆಯಲಿದೆ.
ಸುನ್ನೀ ಜಂಇಯ್ಯತುಲ್ ಉಲಮಾ ದ.ಕ ಜಿಲ್ಲಾ ಉಪಾಧ್ಯಕ್ಷರಾದ ಶೈಖುನಾ ಮಹ್ಮೂದುಲ್ ಫೈಝಿ ಓಲೆಮುಂಡೋವುರವರ ದುಆದೊಂದಿಗೆ ಆರಂಭ ವಾಗುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಾಂಚ್ ಸಮಿತಿ ಅಧ್ಯಕ್ಷರಾದ ಪಿ ಹುಸೈನ್ ಜಾರರವರು ವಹಿಸಲಿರುವರು.ಸುನ್ನೀ ಸೆಂಟರ್ ಅಧ್ಯಕ್ಷರಾದ ಕೆಎ ಹಮೀದ್ ಹಾಜಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಟಿಪ್ಪು ನಗರ ಅಧ್ಯಕ್ಷರಾದ ಬಹು ಪಿಕೆ ಅಬೂಬಕರ್ ಉಸ್ತಾದ್ ರವರು ಮಹ್’ಳರ ಮಜ್ಲಿಸಿಗೆ ನಾಯಕತ್ವ ನೀಡಲಿರುವರು.
ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ವಿಟ್ಲ ಸೆಂಟರ್ ಇಸಾಬ ಟೀಮ್ ಚೀಫ್ ಅಮೀರ್ ಇಬ್ರಾಹೀಂ ಮುಸ್ಲಿಯಾರ್,ದಕ ಜಿಲ್ಲಾ ಎಸ್ ವೈ ಎಸ್ ಸದಸ್ಯರಾದ ಕೆಎಂ ಅಬ್ದುಲ್ ಹಮೀದ್ ಸಖಾಫಿ, ವಿಟ್ಲ ಸೌತ್ ಸೆಕ್ಟರ್ ಎಸ್ಸೆಸ್ಸೆಫ್ ಅಧ್ಯಕ್ಷರಾದ ಸಿಎಚ್ ಅಬ್ದುಲ್ ಖಾದರ್, ಸುನ್ನೀ ಸೆಂಟರ್ ಪ್ರಧಾನ ಕಾರ್ಯದರ್ಶಿ ಸಿ ಎಚ್ ಮುಹಮ್ಮದ್ ಮುಸ್ಲಿಯಾರ್, ವಿಟ್ಲ ಟೌನ್ ಜುಮಾ ಮಸ್ಜಿದ್ ಇಮಾಮ್ ಅಬ್ಬಾಸ್ ಮದನಿ ಮೊದಲಾದವರು ಉಪಸ್ಥಿತರಿರುವರು.















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ