ಉಳ್ಳಾಲ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಕಿನ್ಯ ಸೆಕ್ಟರ್ ಇದರ ಅಧೀನದ ಎಸ್ ಎಸ್ ಎಫ್ ಬೆಳರಿಂಗೆ ಶಾಖೆಯ ವತಿಯಿಂದ ಧ್ವಜ ದಿನದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವು ಬೆಳರಿಂಗೆ ಸುನ್ನೀ ಸೆಂಟರ್ ನಲ್ಲಿ ನಡೆಯ್ತು.
ನೂರುಲ್ ಉಲಮಾ ಮದ್ರಸ ಸದರ್ ಮುಅಲ್ಲಿಮ್ ಶೌಕತ್ ಸಖಾಫಿ ಉಸ್ತಾದ್ ದುಆ ನಿರ್ವಹಿಸಿ ಧ್ವಜ ದಿನದ ಬಗ್ಗೆ ಇಸ್ಲಾಮಿನಲ್ಲಿರುವ ಸಂಭಂಧವನ್ನು ವಿವರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಎಲ್ಲಾ ನಾಯಕರ ಸಮ್ಮುಖದಲ್ಲಿ ಧ್ವಜಾರೋಹಣ ನಡೆಸಲಾಯ್ತು.
ಇದೇ ಸಂದರ್ಭದಲ್ಲಿ ಸಂಘಟನಾ ನಾಯಕರಾದ K.H ಇಸ್ಮಾಯಿಲ್ ಸಅದಿ ಕಿನ್ಯ ಮಾತನಾಡಿ, ಎಸ್ಸೆಸ್ಸೆಫ್ ಸಂಘಟನೆಯ ಕಾರ್ಯವೈಖರಿಯನ್ನು ವಿವರಿಸಿ ಸಂಘಟನೆಯ ಅಭಿವೃದ್ದಿಗೆ ಎಲ್ಲರೂ ಜತೆಗೂಡಿ ಸಹಕರಿಸಿ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕೆಂದು ಸಂದೇಶ ನೀಡಿದರು.
ಕಿನ್ಯ ಗ್ರಾಮ ಪಂಚಾಯತ್ ಸದಸ್ಯರಾದ ಫಾರೂಕ್ ಕಿನ್ಯ ಹಾಗೂ V.A ಮೊಹಮ್ಮದ್ ಉಸ್ತಾದ್, ಶರೀಫ್ ಸಅದಿ ಕಿನ್ಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಬುಖಾರಿ ಜುಮಾ ಮಸ್ಜಿದ್ ಉಪಾಧ್ಯಕ್ಷರಾದ K.H ಮೂಸಕುಂಞ, KCF ಸದಸ್ಯ ಇಬ್ರಾಹಿಂ ಖಲೀಲ್,ಅಝೀಝ್ ಕೋಟಡಿ,ಶರೀಫ್ ಸಖಾಫಿ, ಇರ್ಷಾದ್ ಮುಸ್ಲಿಯಾರ್,SSF ನಾಯಕರಾದ ನುಹ್ಮಾನ್, ಸಿಧ್ಧೀಕ್,ಸುಫೈಲ್,ಸಾಧಿಕ್,ಝಿಯಾದ್ ಸಹಿತ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಫಯಾಝ್ ಕಿನ್ಯ ಕಾರ್ಯಕ್ರಮಕ್ಕೆ ಸ್ವಾಗತಿಸಿ ನಿರೂಪಿಸಿದರು.















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ