janadhvani

Kannada Online News Paper

ಜಾರಿಗೆಬೈಲು ಮದ್ರಸದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ಜಾರಿಗೆಬೈಲು: ಬದ್ರಿಯಾ ಜುಮ್ಮಾ ಮಸ್ಜಿದ್ ಹಾಗೂ ಹಿದಾಯತುಲ್ ಇಸ್ಲಾಮ್ ಸೆಕೆಂಡರಿ ಮದ್ರಸ ಜಾರಿಗೆಬೈಲು ನಾಳ ಇದರ ಅಧೀನದಲ್ಲಿ 72 ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಹಾಗೂ ಸಭಾ ಕಾರ್ಯಕ್ರಮ ನಡೆಯಿತು.ಸ್ಥಳೀಯ ಖತೀಬರಾದ ಅಬ್ದುರ್ರಹ್ಮಾನ್ ಬಾಖವಿ ನೇತೃತ್ವ ನೀಡಿದರು.ಮದ್ರಸ ಮುಖ್ಯೋಪಾಧ್ಯಾಯರಾದ ಎನ್ ಎಂ ಶರೀಫ್ ಸಖಾಫಿ ಮುಖ್ಯ ಭಾಷಣ ಮಾಡಿದರು.

ಜಮಾಅತ್ ಉಪಾಧ್ಯಕ್ಷ ರಫೀಕ್ ಮುಸ್ಲಿಯಾರ್ ಸಂದೇಶ ಭಾಷಣ ಮಾಡಿದರೆ,ಎಸ್.ಬಿ.ಎಸ್ ಕಾರ್ಯದರ್ಶಿ ತಾಜುದ್ದೀನ್ ಪ್ರಾಸ್ತಾವಿಕ ಭಾಷಣ ಮಾಡಿದರು.ಎಸ್.ಬಿ.ಎಸ್ ಅಧ್ಯಕ್ಷ ಇರ್ಶಾದ್ ಪ್ರತಿಜ್ಞಾ ವಿಧಿ ಭೋಧಿಸಿದರು.

ಜಮಾಅತ್ ಉಪಾಧ್ಯಕ್ಷರಾದ ಅಬೂಬಕರ್ ಹಾಜಿ,ಮಾಜಿ ಅಧ್ಯಕ್ಷರಾದ ಮುಹಮ್ಮದ್ ಅಲೀ ಹಾಜಿ,ಸಂಶುಧ್ಧೀನ್,ಕೋಶಾಧಿಕಾರಿ ಅಬ್ದುಲ್ ಹಮೀದ್ ಮೆಸ್ಕಾಂ,ಆಡಳಿತ ಸಮಿತಿ ಪದಾಧಿಕಾರಿಗಳು,ಜಮಾಅತರು,ಎಸ್.ವೈ.ಎಸ್, ಎಸ್.ಎಸ್.ಎಫ್, ಕೆ.ಸಿ.ಎಫ್ ಹಾಗೂ ಎಸ್.ಬಿ.ಎಸ್ ಸದಸ್ಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಇದೇ ವೇಳೆ ಆಕರ್ಷಕ ಸ್ಕೌಟ್ ಪ್ರದರ್ಶಿಸಲಾಯಿತು.ಬಳಿಕ ಸಿಹಿತಿಂಡಿ ವಿತರಿಸಲಾಯಿತು.