ರಿಯಾದ್: ಸೌದಿ ಅರೇಬಿಯಾದಲ್ಲಿ ಈ ವರ್ಷ ಹೆಚ್ಚಿನ ವಿದೇಶಿ ನೌಕರರು ತಮ್ಮ ಕೆಲಸವನ್ನು ಕಳೆದುಕೊಳ್ಳಲಿದ್ದಾರೆ ಎಂದು ತಜ್ಞರು ಹೇಳುತ್ತಾರೆ. ದೇಶಿಯ ನಾಗರಿಕರ ನಿರುದ್ಯೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಪರಿವರ್ತನೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಯೋಜನೆಗಳು ಯಶಸ್ಸನ್ನು ಕಾಣಲಿದೆ.
ಸ್ವದೇಶೀಕರಣ ಯೋಜನೆಗಳು ಮತ್ತು ಆರ್ಥಿಕ ನೀತಿಗಳು ಹೆಚ್ಚಿನ ದೇಶೀಯರಿಗೆ ಉದ್ಯೋಗಗಳನ್ನು ಹುಡುಕಲು ಸಹಾಯ ಮಾಡಲಿದೆ. ಇದರ ಜೊತೆಯಲ್ಲಿ, ಲಕ್ಷಾಂತರ ವಿದೇಶಿ ಕೆಲಸಗಾರರು ದೇಶವನ್ನು ತೊರೆಯಲಿದ್ದಾರೆ. ಆದ್ದರಿಂದಲೇ ಸೌದಿ ದೇಶೀಕರಣ ಯೋಜನೆಗಳು 2020 ರ ಹೊತ್ತಿಗೆ ಯಶಸ್ವಿಯಾಗಬಹುದೆಂದು ಅಮೆರಿಕಾದ ಬ್ಲೂಮ್ಬರ್ಗ್ ವಾರ್ತಾ ಸಂಸ್ಥೆ ಅಭಿಪ್ರಾಯ ಪಟ್ಟಿಡಿದೆ.
ತೈಲೇತರ ಆದಾಯವನ್ನು ಹೆಚ್ಚಿಸಲು ಸೌದಿ ಅರೇಬಿಯಾ ದೊಡ್ಡ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದಲ್ಲದೆ, ವಿದೇಶಿ ಕೆಲಸಗಾರರು ತಮ್ಮ ತಾಯ್ನಾಡಿಗೆ ಕಳುಹಿಸುವ ಹಣದ ಪ್ರಮಾಣವನ್ನು ಕಡಿಮೆಗೊಳಿಸಲು ಮತ್ತು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಲು ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ.
ಮಹಿಳೆಯರಿಗೆ ಚಾಲನಾ ಪರವಾನಿಗೆ ನೀಡಿರುವ ಯೊಜನೆಯು ಆರ್ಥಿಕತೆಯಲ್ಲಿ ಪ್ರತಿಫಲಿಸಲಿದೆ ಎಂದು ನಂಬಲಾಗಿದೆ.ಕೈಗಾರಿಕಾ ಮತ್ತು ವಾಣಿಜ್ಯ ರಂಗದಲ್ಲಿ ಕ್ಷೀಣತೆ ಕಂಡುಬಂದರೂ ಸಾಗರೋತ್ತರ ಕೆಲಸಗಾರರಿಗೆ ವಿಧಿಸಲಾಗುವ ಲೆವಿ, ಮುಂದಿನ ವರ್ಷದಿಂದ 600 ರಿಯಾಲ್‌ಗೆ ಏರಿಸಲಾಗುತ್ತದೆ.
ದೇಶೀಯರಿಗೆ ಇದು ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ವಿದೇಶಿ ಕೆಲಸಗಾರರಿಂದ ಉದ್ಯೋಗ ಹುಡುಕುವವರ ಸಂಖ್ಯೆಯನ್ನು ಕಡಿತಗೊಳಿಸುವಲ್ಲಿ ದೇಶೀಕರಣ ಮತ್ತು ಲೆವಿ ಹೇರಿಕೆಯು ಕಾರಣವಾಗಿದೆ. ಮಾತ್ರವಲ್ಲದೆ ಸೌದಿ ಅರೇಬಿಯಾದಲ್ಲಿ 15 ತಿಂಗಳುಗಳಲ್ಲಿ 7 ಲಕ್ಷ ವಿದೇಶಿ ಕೆಲಸಗಾರರು ಹಿಂದಿರುಗಿದ್ದು ದೇಶದ ಆರ್ಥಿಕತೆಗೆ ಪ್ರಯೋಜನವನ್ನು ನೀಡಲಿದೆ ಎಂದು ಅಂದಾಜಿಸಲಾಗಿದೆ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ