janadhvani

Kannada Online News Paper

ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್

ಬುರೈದ (ಸೌದಿ ಅರೇಬಿಯಾ), ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಅಲ್ ಕಸೀಮ್ ಝೋನ್ ವತಿಯಿಂದ ಆಯೋಜಿಸಿದ್ದ LEGACY NIGHT-2026 ಫ್ಯಾಮಿಲಿ ಮೀಟ್ ಕಾರ್ಯಕ್ರಮವು ಬುರೈದದ ರೆಸಾರ್ಟ್ ನಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಸ್ವಾಗತ ಸಮಿತಿ ಚೇರ್ಮನ್ ಅಬ್ದುಲ್ ಖಾದರ್ ಕಣ್ಣಂಗಾರ್ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ಕನ್ವೀನರ್ ಸಾಲಿಹ್ ಬೆಳ್ಳಾರೆ ಸ್ವಾಗತಿಸಿದರು. KCF ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಸಖಾಫಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ KCF ರಿಯಾದ್ ಝೋನ್ ಕೋಶಾಧಿಕಾರಿ ಹಬೀಬುಲ್ಲಾ ತೆಕ್ಕಾರ್ ಅವರು KCF ನ ಕಾರ್ಯವೈಖರಿ ಮತ್ತು ಸೇವಾ ಚಟುವಟಿಕೆಗಳ ಕುರಿತು ಮುಖ್ಯ ಭಾಷಣ ಮಾಡಿದರು.

ಮಕ್ಕಳ ಪ್ರತಿಭಾ ಅನಾವರಣ ಕಾರ್ಯಕ್ರಮದಲ್ಲಿ ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕ್ವಿಜ್, ಕಿರಾಅತ್, ಪ್ರವಾದಿ ಮದ್ಹ್ ಗೀತೆ, ಭಾಷಣ, ಕಲರಿಂಗ್ ಮತ್ತು ಕ್ಯಾಲಿಗ್ರಫಿ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಮಹಿಳೆಯರಿಗೆ Cook Without Fire ಸ್ಪರ್ಧೆ ಹಾಗೂ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಡಿಜಿಟಲ್ ಕ್ವಿಜ್ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಚಿನ್ನದ ನಾಣ್ಯವನ್ನು ಬಹುಮಾನವಾಗಿ ನೀಡಲಾಯಿತು.

ಪುರುಷರಿಗಾಗಿ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾಟದಲ್ಲಿ ಹರಬಿ ಸ್ಪೋರ್ಟ್ಸ್ ಬುರೈದ ತಂಡ ಪ್ರಥಮ ಹಾಗೂ ಕುಕ್ಕುವಳ್ಳಿ ಫ್ರೆಂಡ್ಸ್ ಬುರೈದ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ KCF ಸುಲ್ತಾನ ಯೂನಿಟ್ ಪ್ರಥಮ ಹಾಗೂ ಬರಕಾ ಸ್ವೀಟ್ಸ್ ಬುರೈದ ದ್ವಿತೀಯ ಸ್ಥಾನ ಪಡೆದವು.

ಬುರೈದ ಭಾಗದಲ್ಲಿರುವ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಸಾಮಾಜಿಕ, ಸಾಮುದಾಯಿಕ ಮತ್ತು ಶೈಕ್ಷಣಿಕ ನಾಯಕರನ್ನು ಒಳಗೊಂಡ ಸೌಹಾರ್ದ ಸಂಗಮವು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ರಿಯಾದ್ KCF ತಂಡದಿಂದ ದಫ್ ಮತ್ತು ಕವಾಲಿ ಪ್ರದರ್ಶನವು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು.

ಇಸ್ಲಾಮಿಕ್ ಪ್ರಭಾಷಣ ವೇದಿಕೆಯಲ್ಲಿ ಸುಮಾರು 3000 ವಿದ್ಯಾರ್ಥಿಗಳು ಕಲಿಯುತ್ತಿರುವ ಮಲಪ್ಪುರಂ ನಿಲಂಬೂರು ಮಜ್ಮಉ ಸಖಾಫತಿ ಸಂಸ್ಥೆಯ ಸಾರಥಿ, ಖ್ಯಾತ ಇಸ್ಲಾಮಿಕ್ ವಿದ್ವಾಂಸ ಶೈಖುನಾ ಕೂಟಂಬಾರ ಅಬ್ದುಲ್ ರಹ್ಮಾನ್ ದಾರಿಮಿ ಅವರು ಅರ್ಥಗರ್ಭಿತ ಪ್ರಭಾಷಣ ಮಾಡಿದರು.

ಇದೇ ವೇದಿಕೆಯಲ್ಲಿ ಡಾ. ಫಾರೂಕ್ ನಈಮಿ ಉಸ್ತಾದರು ಬರೆದ “ಹಿಜ್ರಾ ಹೆಜ್ಜೆ ಗುರುತುಗಳು” ಎಂಬ ಪುಸ್ತಕದ ಕನ್ನಡ ಆವೃತ್ತಿಯನ್ನು ಬಿಡುಗಡೆಗೊಳಿಸಲಾಯಿತು. ಕಳೆದ ವರ್ಷಗಳಲ್ಲಿ ನಮ್ಮನ್ನಗಲಿದ KCF ಕಾರ್ಯಕರ್ತರ ಅನುಸ್ಮರಣೆ ಕಾರ್ಯಕ್ರಮವೂ ನಡೆಯಿತು.

ಕಾರ್ಯಕ್ರಮದಲ್ಲಿ ಹಲವಾರು ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಖ್ಯಾತ ಸಮಾಜ ಸೇವಕ ಮುಹಮ್ಮದ್ ಹಾಜಿ ಕುಕ್ಕುವಳ್ಳಿ ಅವರಿಗೆ KCF AL QASSIM ZONE INSPIRE AWARD-2026 ನೀಡಿ ಗೌರವಿಸಲಾಯಿತು.

KCF ಅಲ್ ಕಸೀಮ್ ಝೋನ್ ಅಧ್ಯಕ್ಷ ಅಬ್ದುಲ್ ಕರೀಮ್ ಇಮ್ದಾದಿ ಅವರು ಸಮಾರೋಪ ಅಧ್ಯಕ್ಷತೆ ವಹಿಸಿದ್ದರು. ಬುರೈದ ICF ಹಿರಿಯ ನಾಯಕ ಅಬ್ದುಲ್ ಖಾದರ್ ದಾರಿಮಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಝೋನ್ ಕಾರ್ಯದರ್ಶಿ ಶಾಹುಲ್ ಹಮೀದ್ ಮಣ್ಣಾಪು ಮತ್ತು ಸಂಘಟನಾ ಇಲಾಖೆ ಅಧ್ಯಕ್ಷ ಮುಸ್ತಾಫಾ ಲತೀಫಿ ಧನ್ಯವಾದ ಸಮರ್ಪಿಸಿದರು.

ಇದನ್ನೂ ಓದಿರಿ...