janadhvani

Kannada Online News Paper

ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್‌ಲೈನ್ ಸಂವಾದ

ಸೌದಿ ಅರೇಬಿಯಾ: ಭಾರತದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಸೌದಿ ಅರೇಬಿಯಾ ವತಿಯಿಂದ ‘ನಮ್ಮ ಭಾರತ ನಮ್ಮ ಹೆಮ್ಮೆ’ ಎಂಬ ಶೀರ್ಷಿಕೆಯಡಿ ರಾಷ್ಟ್ರೀಯ ಮಟ್ಟದ ಆನ್‌ಲೈನ್ ಸಂವಾದ ಕಾರ್ಯಕ್ರಮವು ಆಗಸ್ಟ್ 15ರಂದು ಸಂಜೆ 7:30ಕ್ಕೆ ಝೂಮ್ ಮೂಲಕ ನಡೆಯಿತು.

ಕೆಸಿಎಫ್ ಸೌದಿ ಅರೇಬಿಯಾ ಅಧ್ಯಕ್ಷರಾದ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಕೆಸಿಎಫ್ ಸೌದಿ ಅರೇಬಿಯಾ ಪ್ರಧಾನ ಕಾರ್ಯದರ್ಶಿ ಬಶೀರ್ ತಲಪಾಡಿ ಸ್ವಾಗತ ಕೋರಿದರು. ಕೆಸಿಎಫ್ ಇಂಟರ್‌ನ್ಯಾಷನಲ್ ಪ್ರಧಾನ ಕಾರ್ಯದರ್ಶಿ ಡಾ. ಇಕ್ಬಾಲ್ ಹಾಜಿ ಬರಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

IC ಪ್ಲಾನಿಂಗ್ ಬೋರ್ಡ್ ಚೇರ್ಮನ್ DP ಬೈತಾರ್ ಸಖಾಫಿ ಅವರು ಸಂವಾದದ ಮೀಡಿಯೇಟರ್ ಆಗಿ ಕಾರ್ಯನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ, ಕರ್ನಾಟಕ ಹೈಕೋರ್ಟ್ ವಕೀಲರಾದ ಸುಧೀರ್ ಕುಮಾರ್ ಮುರೊಳ್ಳಿ ಹಾಗೂ SYS ಕರ್ನಾಟಕ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ KM ಸಿದ್ದೀಕ್ ಮೋಂಟುಗೊಳಿ ಅವರು ಭಾಗವಹಿಸಿ, ವಿವಿಧ ಪ್ರಮುಖ ವಿಚಾರಗಳನ್ನು ಮಂಡಿಸಿದರು. ಪ್ರಸ್ತುತ ಪರಿಸ್ಥಿತಿಗೆ ಸಂಬಂಧಿಸಿದಂತೆ ಕಾರ್ಯಕರ್ತರು ಕೇಳಿದ ಪ್ರಶ್ನೆಗಳಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಅವರು, ಹಲವು ಸಮಸ್ಯೆಗಳಿಗೆ ಕೈಗೊಳ್ಳಬಹುದಾದ ಪರಿಹಾರ ಕ್ರಮಗಳ ಬಗ್ಗೆಯೂ ವಿವರಿಸಿದರು.

ಭಾರತದ ಸ್ವಾತಂತ್ರ್ಯ, ರಾಷ್ಟ್ರ ನಿರ್ಮಾಣದಲ್ಲಿ ಪ್ರವಾಸಿ ಭಾರತೀಯರ ಪಾತ್ರ, ದೇಶದ ಸಾಮಾಜಿಕ–ಸಾಂಸ್ಕೃತಿಕ ಅಭಿವೃದ್ಧಿ ಹಾಗೂ ಜಾಗತಿಕ ಮಟ್ಟದಲ್ಲಿ ಭಾರತೀಯರ ಜವಾಬ್ದಾರಿಗಳ ಕುರಿತು ಕಾರ್ಯಕ್ರಮದಲ್ಲಿ ವಿಚಾರ ವಿನಿಮಯ ನಡೆಯಿತು.

ಅದೇ ರೀತಿ, ಕೆಸಿಎಫ್ ಇಂಟರ್‌ನ್ಯಾಷನಲ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಲ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಈ ಸಾಲಿನ ರಾಷ್ಟ್ರೀಯ ಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರನ್ನು ಘೋಷಿಸಿದರು. ಜೊತೆಗೆ ಕಾರ್ಯಕ್ರಮದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಪ್ರಬಂಧ ಸ್ಪರ್ದೆಯ ಫಲಿತಾಂಶ

ಪ್ರಥಮ: ಜಾಕೀರ್ ಹುಸೈನ್ – ಜುಬೈಲ್ ಝೋನ್

ಧ್ವಿತೀಯ: ಯಝೀದ್ ಅಬ್ದುಲ್ಲ – ಮದೀನ ಝೋನ್

ತೃತೀಯ: ಮುಹಮ್ಮದ್ ಹಿದಾಯತ್ – ರಿಯಾದ್ ಝೋನ್

ಪ್ರಬಂಧ ಸ್ಪರ್ದೆಯ ತೀರ್ಪುಗಾರರಾಗಿ: ಶಿಹಾಬ್ ಸಖಾಫಿ ಮರವೂರು ಹಾಗು ಶಫೀಕ್ ಸಖಾಫಿ ಪದ್ಮುಂಜ ಸಹಕರಿಸಿದರು

ರಾಷ್ಟ್ರೀಯ ಅಡ್ಮಿನ್ ಚೇರ್ಮಾನ್ ಸಂಶುದ್ದೀನ್ ಮಡಂತ್ಯಾರ್ ಕಾರ್ಯಕ್ರಮವನ್ನು ನಿರೂಪಿಸಿ, IC ಇಹ್ಸಾನ್ ಇಲಾಖೆಯ ಕಾರ್ಯದರ್ಶಿ ಸಾಲಿ ಬೆಳ್ಳಾರೆ ಧನ್ಯವಾದಗೈದರು.

ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದೇಶಭಕ್ತಿ, ರಾಷ್ಟ್ರೀಯ ಐಕ್ಯತೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಸಂದೇಶವನ್ನು ಸಾರಿದ ಈ ಆನ್‌ಲೈನ್ ಸಂವಾದ ಕಾರ್ಯಕ್ರಮವು ಕೆಸಿಎಫ್ ಸೌದಿ ಅರೇಬಿಯಾ ವತಿಯಿಂದ ಆಯೋಜಿಸಲಾದ ಮಹತ್ವದ ರಾಷ್ಟ್ರೀಯ ಕಾರ್ಯಕ್ರಮವಾಗಿ ಮೂಡಿಬಂತು.

ಕೆಸಿಎಫ್ ಕೆಎಸ್ಎ

ಇದನ್ನೂ ಓದಿರಿ...