janadhvani

Kannada Online News Paper

ನಾಳೆ ಕುದುಂಬ್ಲಾಡಿಯಲ್ಲಿ ಮರ್‌‌ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್‌‌ಲಿಸ್‌‌ ಹಾಗೂ ಅನುಸ್ಮರಣಾ ಸಂಗಮ

ಬಂಟ್ವಾಳ: ಕೆದಿಲ ಗ್ರಾಮದ ಕುದುಂಬ್ಲಾಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಲ್-ಮುರ್ಶಿದ್ ಇಸ್ಲಾಮಿಕ್ ಅಕಾಡೆಮಿ ಸಂಸ್ಥೆಯಲ್ಲಿ ಜಲಾಲಿಯ್ಯಾ ಆಧ್ಯಾತ್ಮಿಕ ಮಜ್‌‌ಲಿಸ್‌‌, ಮರ್‌‌ಹಬಾ ಯಾ ರಬೀಅ್, ಅಗಲಿದ ಮಹಾತ್ಮರ ಅನುಸ್ಮರಣೆ ಕಾರ್ಯಕ್ರಮಗಳು ಆಗಸ್ಟ್-6ರಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ.

ಅಲ್-ಮುರ್ಶಿದ್ ಇಸ್ಲಾಮಿಕ್ ಅಕಾಡೆಮಿ ಕ್ಯಾಂಪಸ್‌‌ನಲ್ಲಿ ನಡೆಯುವ ಈ ಎಲ್ಲಾ ಕಾರ್ಯಕ್ರಮಗಳಿಗೆ ಸಯ್ಯಿದ್ ಹಂಝ ತಙ್ಙಳ್ ಅಲ್ ಹಾದಿ ಪಾಟ್ರಕೋಡಿ,
ಸಯ್ಯಿದ್ ಯು.ಪಿ.ತಙ್ಙಳ್ ಸಾಲೆತ್ತೂರು,
ಸಂಸ್ಥೆಯ ಸಾರಥಿ ಶೈಖುನಾ ಎಂ.ಇ ಅಬ್ದುರ್ರಝ್ಝಾಖ್ ಮದನಿ, ಕಾಮಿಲ್ ಸಖಾಫಿ ಸೂರಿಕುಮೇರು, ಅಕ್ಬರ್ ಅಲಿ ಸ‌‌ಅದಿ ಹಂಡೇಲು, ಸಾಬಿತ್ ಸ‌ಅದಿ ಅಳಕ್ಕೆ ಸೇರಿದಂತೆ ಅನೇಕ ಉಲಮಾ ಸಾದಾತ್‌‌ಗಳು ನೇತೃತ್ವ ನೀಡಲಿದ್ದಾರೆ.
ಪ್ರಸ್ತುತ ಕಾರ್ಯಕ್ರಮದಲ್ಲಿ ಮೋಗ್ರಾಲ್ ಮೈಮೂನ್ ನಗರದಲ್ಲಿ ಮುದರ್ರಿಸರಾಗಿರುವ
ಇರ್ಫಾನ್ ಸಖಾಫಿ ಕಿನ್ಯಾರವರು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.

ಯೂಸುಫ್ ಹಾಜಿ ಸೂರಿಕುಮೇರು,
ನಿಝಾಮುದ್ದೀನ್ ಸ‌‌ಅದಿ ಸೂರಿಕುಮೇರು, ಜಲೀಲ್ ಹಾಜಿ ಸೂರಿಂಜೆ, ಶಫೀಕ್ ಸೂರಿಂಜೆ, ಕಾಸಿಂ ಹಾಜಿ ಮಿತ್ತೂರು, ಅಬೂಬಕ್ಕರ್ ಹಾಜಿ ಕೊಳಚಪ್ಪು,ಅಶ್ರಫ್ ಪೆರ್ನೆ ಸೇರಿದಂತೆ ಅನೇಕ ಉಲಮಾ-ಉಮರಾಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಹಿಳೆಯರಿಗೂ ಪ್ರತ್ಯೇಕ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಐ.ಕೆ ಇಕ್ಬಾಲ್ ಮದನಿ, ಕುಕ್ಕೋಟ್ಟು ಪ್ರಕಟನೆಗೆ ತಿಳಿಸಿದ್ದಾರೆ.

ಇದನ್ನೂ ಓದಿರಿ...